ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಪ್ರಿಯಾಂಕಾ ಗಾಂಧಿಯನ್ನು ಕೆಣಕಿದ ನಿರ್ಮಲಾ ಸೀತಾರಾಮನ್ ಹೇಳಿಕೆ

|
Google Oneindia Kannada News

ನವ ದೆಹಲಿ ಫೆಬ್ರವರಿ 02: ಮಂಗಳವಾರ ಕೇಂದ್ರ ಬಜೆಟ್ ಕುರಿತು ರಾಹುಲ್ ಗಾಂಧಿಯವರ ಟೀಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮಾಡಿದ್ದಾರೆ.

ಬಜೆಟ್ ಭಾಷಣದ ನಂತರ ಸುದ್ದಿಗಾರರ ಮುಂದೆ, ಕಿರಿಯ ಹಣಕಾಸು ಸಚಿವ ಪಂಕಜ್ ಚೌಧರಿ ಅವರು ರಾಹುಲ್ ಗಾಂಧಿಯವರ "ಶೂನ್ಯ ಮೊತ್ತದ ಬಜೆಟ್" ಕಾಮೆಂಟ್‌ಗೆ ಪ್ರತಿಕ್ರಿಯಿಸಲು ಶ್ರೀಮತಿ ಸೀತಾರಾಮನ್ ಅವರನ್ನು ಕೇಳಿದರು. ಈ ವೇಳೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರ ಪ್ರದೇಶದ ಅಮೇಥಿಯಿಂದ 2019 ರ ರಾಷ್ಟ್ರೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ಸೋಲನ್ನು ಉಲ್ಲೇಖಿಸುತ್ತಾ, "ಅವರು ಯುಪಿ ಮಾದರಿಯ ಉತ್ತರವನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ, ಇದು ಯುಪಿಯಿಂದ ಓಡಿಹೋದ ಸಂಸದರಿಗೆ ಸಾಕಾಗುತ್ತದೆ" ಎಂದು ಶ್ರೀಮತಿ ಸೀತಾರಾಮನ್ ಕೆಣಕ್ಕಿದ್ದರು.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹಣಕಾಸು ಸಚಿವರ ಹೇಳಿಕೆಯನ್ನು ಯುಪಿ ಜನರಿಗೆ ಮಾಡಿದ 'ಅವಮಾನ' ಎಂದು ಕರೆದಿದ್ದಾರೆ. ಇದಕ್ಕೆ ಉತ್ತರವನ್ನು ಈ ತಿಂಗಳು ಏಳು ಹಂತಗಳಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಜನ ನೀಡಲಿದ್ದಾರೆ ಎಂದರು.

After Nirmala Sitharamans Typical UP-Type Dig, Priyanka Gandhi Reacts

''ನಿರ್ಮಲಾ ಸೀತಾರಾಮನ್ ಜೀ, ನೀವು ಯುಪಿಗೆ ಬಜೆಟ್ ಬ್ಯಾಗ್‌ನಲ್ಲಿ ಏನನ್ನೂ ಹಾಕಿಲ್ಲ, ಸರಿ... ಆದರೆ ಯುಪಿ ಜನರನ್ನು ಈ ರೀತಿ ಅವಮಾನಿಸುವ ಅಗತ್ಯವೇನಿದೆ? ಯುಪಿಯ ಜನರು ಯುಪಿಯ ಬಗ್ಗೆ ಹೆಮ್ಮೆಪಡುತ್ತಾರೆ. ಉತ್ತರ ಪ್ರದೇಶದ ಭಾಷೆ, ಆಡುಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಹೆಮ್ಮೆಯಿದೆ" ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಿನ್ನೆ ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಜೆಟ್ ಬಗ್ಗೆ ಕಾಮೆಂಟ್ ಮಾಡಿದ್ದರು. ಇದು ಶೂನ್ಯ ಮೊತ್ತದ ಬಜೆಟ್ ಎಂದು ಕರೆದಿದ್ದರು. "ಮೋದಿ ಸರ್ಕಾರದ ಶೂನ್ಯ ಮೊತ್ತದ ಬಜೆಟ್ ಆಗಿದೆ. ಸಂಬಳ ಪಡೆಯುವ ವರ್ಗ, ಮಧ್ಯಮ ವರ್ಗ, ಬಡವರು ಮತ್ತು ವಂಚಿತರು, ಯುವಕರು, ರೈತರು, ಎಂಎಸ್‌ಎಂಇಗಳಿಗೆ ಏನನ್ನೂ ನೀಡಿಲ್ಲ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಿರ್ಮಲಾ ಸೀತಾರಾಮನ್ ಬಜೆಟ್ ಬಳಿಕ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪ್ರಿಯಾಂಕ ಗಾಂಧಿ ಇಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಬಜೆಟ್ ಮಂಡನೆಯಾದ ಬಳಿಕ ವಿಪಕ್ಷಗಳು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ಮೂರನೇ ಅಲೆಯ ನಡುವೆ ಈ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಕೇಂದ್ರ ಬಜೆಟ್ಗೆ ರಾಜಕೀಯ ಪ್ರತಿಕ್ರಿಯೆಗಳು ಬಂದಿವೆ. ಕಾಂಗ್ರೆಸ್ ಕೇಂದ್ರ ಬಜೆಟ್ ವಿರುದ್ಡ ವಾಗ್ದಾಳಿ ಮಾಡಿದೆ. 'ಒಂದೆಡೆ ದೇಶ ಬಡವಾಗುತ್ತಿದ್ದರೆ ಇನ್ನೊಂದೆಡೆ ಸರ್ಕಾರದ ಖಜಾನೆ ತುಂಬುತ್ತಿದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಘೋಷಣೆಯೊಂದಿಗೆ ಬಿಜೆಪಿಯವರು ದೇಶವಾಸಿಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆಯೇ ಹೊರತು ಬೇರೇನೂ ಅಲ್ಲ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ಮೂರನೇ ಅಲೆಯ ನಡುವೆ ಈ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಕೇಂದ್ರ ಬಜೆಟ್‌ಗೆ ರಾಜಕೀಯ ಪ್ರತಿಕ್ರಿಯೆಗಳು ಬಂದಿವೆ. ಕಾಂಗ್ರೆಸ್ ಕೇಂದ್ರ ಬಜೆಟ್ ವಿರುದ್ಡ ವಾಗ್ದಾಳಿ ಮಾಡಿದೆ. 'ಒಂದೆಡೆ ದೇಶ ಬಡವಾಗುತ್ತಿದ್ದರೆ ಇನ್ನೊಂದೆಡೆ ಸರ್ಕಾರದ ಖಜಾನೆ ತುಂಬುತ್ತಿದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಘೋಷಣೆಯೊಂದಿಗೆ ಬಿಜೆಪಿಯವರು ದೇಶವಾಸಿಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆಯೇ ಹೊರತು ಬೇರೇನೂ ಅಲ್ಲ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಶ್ರೀಮತಿ ಹಣಕಾಸು ಮಂತ್ರಿ, ದಯವಿಟ್ಟು ರಾಷ್ಟ್ರಕ್ಕೆ ತಿಳಿಸಿ - ಕ್ರಿಪ್ಟೋಕರೆನ್ಸಿಗೆ ಕಾನೂನು ಮಾನ್ಯತೆ ಇದೆಯೇ? ಕ್ರಿಪ್ಟೋಕರೆನ್ಸಿ ಮಸೂದೆ ಮಂಡನೆ ಮಾಡದೆ ತೆರಿಗೆ ವಿಧಿಸುವುದು ಎಷ್ಟು ಸರಿ? ಕ್ರಿಪ್ಟೋ ವಿನಿಮಯ ನಿಯಂತ್ರಕರು ಯಾರು? ಹೂಡಿಕೆದಾರರರನ್ನು ರಕ್ಷಿಸುವವರು ಯಾರು? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಣದೀಪ್ ಸುರ್ಜೇವಾಲಾ ಪ್ರತಿಕ್ರಿಯಿಸಿದ್ದಾರೆ.

English summary
Priyanka Gandhi Vadra has ripped into Finance Minister Nirmala Sitharaman over her "typical UP-type" remark while countering Rahul Gandhi's criticism of the Union Budget on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X