ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಸುಂಕ ಕಡಿಮೆ ಮಾಡಿದ್ರೂ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗ್ತಿಲ್ಲ

|
Google Oneindia Kannada News

ನವದೆಹಲಿ, ಅ.8: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನೇನೋ ಕೇಂದ್ರ ಸರ್ಕಾರ ಕೊಂಚ ಕಡಿಮೆ ಮಾಡಿದೆ. ಅದರಂತೆ ಕೆಲವು ರಾಜ್ಯಗಳು ಸ್ಥಳೀಯ ತೆರಿಗೆಗಳನ್ನು ಕೂಡ ಇಳಿಸಿದ್ದಾರೆ ಆದರೆ ಇಂಧನ ದರ ಮಾತ್ರ ಕಡಿಮೆಯಾಗುತ್ತಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ದರ ಹೆಚ್ಚಳವಾಗುತ್ತಲೇ ಇದೆ. ಗ್ರಾಹಕರ ಜೇಬು ಸುಡುತ್ತಲೇ ಇದೆ. ಇನ್ನಷ್ಟು ಏರಿಕೆಯಾಗುವ ಸೂಚನೆಗಳೂ ಗೋಚರಿಸುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ದರ ಗಡಿ ದಾಟಲಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಪಟ್ಟಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಪಟ್ಟಿ

ಶನಿವಾರ ಅ.6 ಪೆಟ್ರೋಲ್ ದರ 18 ಪೈಸೆ ಏರಿಕೆಯಾಗಿದ್ದರೆ, ಭಾನುವಾರ 14 ಪೈಸೆ ಏರಿಕೆಯಾಗಿದೆ.. ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 81.50ರೂ. ಇದ್ದರೆ, ಭಾನುವಾರ 81.82ರೂಗೆ ತಲುಪಿದೆ. ಇದೇ ರೀತಿ ಡೀಸೆಲ್ ದರವು ಶನಿವಾರ ಮತ್ತು ಭಾನುವಾರ ತಲಾ 29 ಪೈಸೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಅಕ್ಟೋಬರ್ 8ರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 82.46 ರೂಗಳಿವೆ, ಅಕ್ಟೋಬರ್ 6ರಂದು 82.32ರೂ.ನಷ್ಟಿತ್ತು. ಡೀಸೆಲ್ ಪ್ರಸ್ತುತ ದರ 73.90ರಷ್ಟಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಭಾನುವಾರ 73.53ರೂ ಮುಟ್ಟಿದೆ. ಕಳೆದ ಮೂರು ವಾರದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ದೇಶದ ಇತರೆ ನಗರಗಳು ಮತ್ತು ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಿದೆ. ಹೀಗಾಗಿ ಇಲ್ಲಿ ಇಂಧನ ಮೇಲಿನ ವ್ಯಾಟ್ ಇನ್ನು ತಗ್ಗಿಸಿಲ್ಲ.

ಅತಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ವಿದೇಶಕ್ಕೆ ಮಾರುತ್ತಿದೆ ಕೇಂದ್ರ ಸರ್ಕಾರ!ಅತಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ವಿದೇಶಕ್ಕೆ ಮಾರುತ್ತಿದೆ ಕೇಂದ್ರ ಸರ್ಕಾರ!

ಮುಂಬೈನಲ್ಲಿ ಅತ್ಯಧಿಕ ವ್ಯಾಟ್ ಇದ್ದು, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ತಗ್ಗಿಸಿದರೂ ದರ ರೂ. 87.29 ಮುಟ್ಟಿದೆ. ಡೀಸೆಲ್ ಮೇಲಿನ ವ್ಯಾಟ್ ಯಥಾಸ್ಥಿತಿಯಲ್ಲಿದೆ.

ತೈಲ ಕಂಪನಿಗಳಿಗೆ ನಷ್ಟ

ತೈಲ ಕಂಪನಿಗಳಿಗೆ ನಷ್ಟ

ಕೇಂದ್ರ ಸರ್ಕಾರವನ್ನು ಗ್ರಾಹಕರ ಹಿತದೃಷ್ಟಿಯಿಂದ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ 1 ರೂ ನಷ್ಟವನ್ನು ಭರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ರೂ ನಷ್ಟವನ್ನು ಭರಿಸುವಂತೆ ನಿರ್ದೇಶನ ನೀಡಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಇಂಧನ ರೀಟೇಲರ್ ಗಳಿಗೆ ತೊಂದರೆಯಾಗಲಿದೆ. ಇವುಗಳ ಆದಾಯದಲ್ಲಿ 9 ಸಾವಿರ ಕೋಟಿ ರೂ. ಕಸಿಯಲಿದೆ. ಐಒಸಿ ಷೇರುಗಳು ಶೇ.50ರಷ್ಟು ಕುಸಿದಿದೆ. ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಷೇರುಗಳೂ ಕೂಡ ಕುಸಿದಿವೆ.

ಛತ್ತೀಸ್ ಗಢ, ಜಾರ್ಖಂಡ್, ತ್ರಿಪುರಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಹರ್ಯಾಣ, ಗೋವಾ, ಅರುಣಾಚಲ ಪ್ರದೇಶದಲ್ಲಿ ಇಂಧನದ ಮೇಲಿನ ವ್ಯಾಟ್ ನ್ನು ಕಡಿಮೆ ಮಾಡಲಾಗಿದೆ.

ಬೆಂಗಳೂರು ಅ.8ರ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರು ಅ.8ರ ಪೆಟ್ರೋಲ್, ಡೀಸೆಲ್ ದರ

ಬೆಂಗಳೂರಲ್ಲಿ ಅಕ್ಟೋಬರ್ 8ರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 82.46 ರೂಗಳಿವೆ, ಅಕ್ಟೋಬರ್ 6ರಂದು 82.32ರೂ.ನಷ್ಟಿತ್ತು. ಡೀಸೆಲ್ ಪ್ರಸ್ತುತ ದರ 73.90ರಷ್ಟಿದೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಸಾಮಾನ್ಯ ಜನ ಏನಂತಾರೆ? ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ಸಾಮಾನ್ಯ ಜನ ಏನಂತಾರೆ?

ಅಬಕಾರಿ ಸುಂಕ ಲೆಕ್ಕಾಚಾರ ಹೇಗಿದೆ?

ಅಬಕಾರಿ ಸುಂಕ ಲೆಕ್ಕಾಚಾರ ಹೇಗಿದೆ?

ಪೆಟ್ರೋಲ್ ನ ಪ್ರತಿ ಲೀಟರ್ ಮೇಲೆ 19.48ರೂ ಅಬಕಾರಿ ಸುಂಕ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 15.33ರಷ್ಟು ಅಬಕಾರಿ ಸುಂಕ ತರಬೇಕು. ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡುವತ್ತ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿಲ್ಲ. ಒಂದೊಮ್ಮೆ ಜಿಎಸ್‌ಟಿ ಜಾರಿಯಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ರೀತಿಯ ಸುಂಕವನ್ನು ವಿಧಿಸಲಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಎಷ್ಟಿದೆ?

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಎಷ್ಟಿದೆ?

ಕರ್ನಾಟಕದಲ್ಲಿ ಪೆಟ್ರೋಲ್ ಮೇಲೇ ಶೇ 30 ಹಾಗೂ ಡೀಸೆಲ್ ಮೇಲೆ ಶೇ 19ರಷ್ಟು ವ್ಯಾಟ್ ಹಾಕಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12 ಗಳಷ್ಟಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ.26ರ ವ್ಯಾಟ್ ಹೇರಲಾಗುತ್ತಿದೆ.

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

English summary
Within a day of the one-off excise duty cut and PSUs subsidizing fuel, petrol, diesel prices are on the rise again and have hit three-week high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X