ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಪದಾರ್ಥದ ರೀತಿ ಝೊಮ್ಯಾಟೊದಿಂದ ಮದ್ಯ ಡೆಲಿವರಿ

|
Google Oneindia Kannada News

ನವ ದೆಹಲಿ, ಮೇ 7: ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಂದು ಕೊಡುತ್ತಿದ್ದ ಝೊಮ್ಯಾಟೊ ಡೆಲಿವರಿ ಸಂಸ್ಥೆ, ಲಾಕ್‌ಡೌನ್ ಸಮಯದಲ್ಲಿ ದಿನಸಿ ವಸ್ತುಗಳನ್ನು ಸಹ ವಿತರಣೆ ಮಾಡುತ್ತಿದೆ. ಆದರೆ, ಈ ನಂತರ ಝೊಮ್ಯಾಟೊ ಕಣ್ಣು ಮದ್ಯದ ಮೇಲೆ ಬಿದ್ದಿದೆ.

Recommended Video

ಅಪ್ಪನಿಗಿಂತ ನಾನೇನ್ ಕಮ್ಮಿನಾ ಅನ್ನೋ ರೀತಿ ಕೆಲಸ ಮಾಡ್ತಿದ್ದಾರೆ ಶಾಸಕ ಜಮೀರ್ ಖಾನ್ ಪುತ್ರ | Oneindia Kannada

ಭಾರತದಲ್ಲಿ ಈವರೆಗೆ ಮದ್ಯವನ್ನು ಹೋಮ್ ಡಿಲೆವರಿ ಮಾಡಲು ಕಾನೂನಿನಲ್ಲಿ ಅವಕಾಶ ನೀಡಿಲ್ಲ. ಆದರೆ, ಸದ್ಯ ಲಾಕ್‌ಡೌನ್ ಇರುವ ಕಾರಣ ಸರ್ಕಾರ ಅನುಮತಿಯನ್ನು ಪಡೆದು ಮದ್ಯ ಡೆಲಿವರಿ ನೀಡುವುದು ಝೊಮ್ಯಾಟೊ ಪ್ಲಾನ್ ಆಗಿದೆ. ಲಾಕ್‌ಡೌನ್ ಇರುವ ಕಾರಣ ಝೊಮ್ಯಾಟೊ ಬೇಡಿಕೆ ಹೆಚ್ಚಾಗಿದೆ.

ಮದ್ಯ ಮಾರಾಟದಿಂದ 3ನೇ ದಿನದಂದು ಸರ್ಕಾರ ಗಳಿಸಿದ್ದೆಷ್ಟು? ಮದ್ಯ ಮಾರಾಟದಿಂದ 3ನೇ ದಿನದಂದು ಸರ್ಕಾರ ಗಳಿಸಿದ್ದೆಷ್ಟು?

ಮದ್ಯ ಮಾರಾಟಕ್ಕೆ ಕಳೆದ ಸೋಮವಾರದಿಂದ ಅವಕಾಶ ನೀಡಲಾಗಿದೆ. ಬಹುತೇಕ ಬಾರ್‌ಗಳ ಮುಂದೆ ಜನ ಕ್ಯೂ ನಿಂತಿದ್ದಾರೆ. ಅನೇಕ ಕಡೆ ಸಾಮಾಜಿಕ ಅಂತರ ಕಾಪಾಡಲು ಆಗುತ್ತಿಲ್ಲ. ಅಲ್ಲದೆ, ಕುಡಿದ ಮತ್ತಿನಲ್ಲಿ ಗಲಾಟೆಗಳು ನಡೆಯುತ್ತಿವೆ. ಮದ್ಯ ಮಾರಾಟದಿಂದ ಸೊಂಕು ಹೆಚ್ಚಾಗುತ್ತದೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ.

After Food And Grocery Zomato Playing To Deliver Liquor

ಇವೆಲ್ಲದರ ನಡುವೆ ಝೊಮ್ಯಾಟೊ ಮದ್ಯ ಡಿಲೆವರಿ ನೀಡುವ ಪ್ರಯತ್ನಕ್ಕೆ ಕೈ ಹಾಕಿದೆ. ಸೋಂಕು ಕಡಿಮೆ ಇರುವ ಜಾಗಗಳಲ್ಲಿ ಮದ್ಯ ವಿತರಿಸಲು ಝೊಮ್ಯಾಟೊ ಯೋಜನೆ ಹಾಕಿಕೊಂಡಿದ್ದು, ಝೊಮ್ಯಾಟೊ ಸಿಇಒ ಮೋಹಿತ್ ಗುಪ್ತಾ ಐಎಸ್‍ಡಬ್ಲ್ಯೂಎಐಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಮದ್ಯದ ದರ ಹೆಚ್ಚು ಮಾಡಲಾಗಿದೆ. ಆದರೂ ಅಂಗಡಿಯ ಮುಂದಿನ ಸಾಲು ಕಡಿಮೆಯಾಗುತ್ತಿಲ್ಲ. ಹೀಗಾಗಿ, ಝೊಮ್ಯಾಟೊಗೆ ಮದ್ಯ ಡಿಲೆವರಿಗೆ ಅನುಮತಿ ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.

English summary
After Food and grocery zomato playing to deliver liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X