ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವ್ಯಸ್ಪಂದನ ನಂತರ ಟ್ವಿಟ್ಟರ್ ತೊರೆದ ಚಿರಾಗ್ ಪಟ್ನಾಯಕ್!

|
Google Oneindia Kannada News

ನವದೆಹಲಿ, ಜೂನ್ 02: ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ನಿರ್ವಹಣಾ ವಿಭಾಗದ ಪ್ರಮುಖ ಸದಸ್ಯ ಚಿರಾಗ್ ಪಟ್ನಾಯಕ್ ಅವರು ಕೂಡಾ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ತೊರೆದಿದ್ದಾರೆ. ಮಾಜಿ ಸಂಸದೆ ರಮ್ಯಾ ಅವರ ಟ್ವಿಟ್ಟರ್ ಖಾತೆ ಸದ್ಯ ನಿಷ್ಕ್ರಿಯವಾಗಿದೆ.

ಎಐಸಿಸಿ ಸಾಮಾಜಿಕ ಜಾಲ ತಾಣ ಹಾಗೂ ಡಿಜಿಟಲ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ತಂಡದ ಪ್ರಮುಖ ಸದಸ್ಯ ಚಿರಾಗ್ ಪಟ್ನಾಯಕ್ ಮೇಲೆ ಮೀಟೂ ಅಭಿಯಾನದ ಹೊತ್ತಿನಲ್ಲೇ ಆರೋಪ ಕೇಳಿ ಬಂದಿತ್ತು.

After Divya Spandana, her teammate Chirag also quits Twitter

ಮಾಜಿ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಹೊತ್ತು, ಬಂಧಿತರಾಗಿದ್ದ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣಗಳ ದೆಹಲಿ ಘಟಕದ ಸಿಬ್ಬಂದಿಗೆ ಜಾಮೀನು ಸಿಕ್ಕಿತ್ತು.

ರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರುರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರು

ಚಿರಾಗ್ ಪಟ್ನಾಯಕ್ ಎಂಬ ವ್ಯಕ್ತಿ ರಮ್ಯಾ ಅವರ ಐಟಿ ಸೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವ್ಯಕ್ತಿ ವಿರುದ್ಧ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ತಮಗಾದ ನೋವಿನ ಬಗ್ಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೂ ದೂರು ನೀಡಿದ್ದೆ. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಎಐಸಿಸಿ ಕುಂದು ಕೊರತೆಗಳ ವಿಭಾಗದ ಅರ್ಚನಾ ಅವರಿಗೂ ದೂರು ನೀಡಿದ್ದೆ.

English summary
Soon after the Congress Social media chief Divya Spandana deleted or de activated her twitter account, the team member Chirag Patnaik has also left Micro blogging site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X