• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ, ಗೃಹ ಸಚಿವರೇ ಎಲ್ಲಿ ಅಡಗಿ ಕೂತಿದ್ದೀರಾ? 'ರಿಸೈನ್ ಅಮಿತ್ ಶಾ' ಫುಲ್ ಟ್ರೆಂಡಿಂಗ್

|

ನವದೆಹಲಿ, ಜ 26: ನವದೆಹಲಿಯಲ್ಲಿ ಕಿಸಾನ್ ಗಣತಂತ್ರ ಪೆರೇಡ್ ನಲ್ಲಿ ನಡೆದ ಹಿಂಸಾಚಾರ ತಹಬಂದಿಗೆ ತರಲಾಗದ ಕೇಂದ್ರ ಗೃಹಖಾತೆ ಮತ್ತು ಸಚಿವ ಅಮಿತ್ ಶಾ, ಆ ಹುದ್ದೆಯಲ್ಲಿ ಇದ್ದರೆಷ್ಟು, ಬಿಟ್ಟರೆಷ್ಟು ಅವರು ರಾಜೀನಾಮೆ ನೀಡಬೇಕೆಂದು ಟ್ವಿಟ್ಟಿಗರು ಆಗ್ರಹಿಸಿದ್ದಾರೆ.

   ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ Farmers..! | Oneinda Kannada

   ಹೋಂ ಮಿನಿಸ್ಟರ್ ಮತ್ತು ರಿಸೈನ್ ಅಮಿತ್ ಶಾ, ಈ ಎರಡು ಹ್ಯಾಂಡಲ್ ಗಳು ಟ್ವಿಟ್ಟರ್ ನಲ್ಲಿ ಫುಲ್ ಟ್ರೆಂಡಿಂಗ್ ನಲ್ಲಿದ್ದು, ಅಮಿತ್ ಶಾ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ, ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.

   ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡ ಕಳಚಿತು

   ರೈತರು ಇಷ್ಟು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ಮೋದಿಯಾಗಲಿ, ಕೇಂದ್ರ ಗೃಹಸಚಿವ ಅಮಿತ್ ಶಾ ಆಗಲಿ ಒಂದೇ ಒಂದು ಹೇಳಿಕೆಯನ್ನು ನೀಡಲಿಲ್ಲ. ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

   ಪರಿಸ್ಥಿತಿ ಕೈತಪ್ಪಿದ ನಂತರ ಗೃಹಸಚಿವರು ಸಭೆ ನಡೆಸಿದರೆ ಏನು ಪ್ರಯೋಜನ, ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು ಎಂದು ಟ್ವಿಟ್ಟಿಗರು ತಾಕೀತು ಮಾಡಿದ್ದಾರೆ. ಕೆಲವೊಂದು ಸ್ಯಾಂಪಲ್ ಹೀಗಿದೆ:

   ಕೆಂಪುಕೋಟೆಯಲ್ಲಿ ಹಾರಿದ ರೈತರ ಧ್ವಜ: ದಿಕ್ಕುತಪ್ಪಿದ ಟ್ರ್ಯಾಕ್ಟರ್ ಪರೇಡ್, ಸದ್ಯ ಪರಿಸ್ಥಿತಿ ಔಟ್ ಆಫ್ ಕಂಟ್ರೋಲ್

   ಸರ್ದಾರ್ ಪಟೇಲ್ ಅವರು ಉಕ್ಕಿನ ಮನುಷ್ಯರಾಗಿದ್ದರು

   ಸರ್ದಾರ್ ಪಟೇಲ್ ಅವರು ಉಕ್ಕಿನ ಮನುಷ್ಯರಾಗಿದ್ದರು

   ದೆಹಲಿ ಘಟನೆಯನ್ನು ಅತ್ಯಂತ ಕೆಟ್ಟರೀತಿಯಲ್ಲಿ ನಿಭಾಯಿಸಲಗಿದೆ. ಕೇಂದ್ರ ಗೃಹ ಸಚಿವರಿಗೆ ಫ್ರೀ ಪಾಸ್ ಹೇಗೆ ಸಿಗುತ್ತದೆ, ಯಾವ ಮಾಧ್ಯಮವೂ ಇದನ್ನು ಪ್ರಶ್ನಿಸುವುದಿಲ್ಲವೇ? ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲ್ ಅವರು ಉಕ್ಕಿನ ಮನುಷ್ಯರಾಗಿದ್ದರು ಎನ್ನುವ ಟ್ವೀಟ್.

   ಪ್ರಧಾನಿ ಮತ್ತು ಗೃಹ ಸಚಿವರು ಎಲ್ಲಿ ಅಡಗಿ ಕೂತಿದ್ದಾರೆ

   ಪ್ರಧಾನಿ ಮತ್ತು ಗೃಹ ಸಚಿವರು ಎಲ್ಲಿ ಅಡಗಿ ಕೂತಿದ್ದಾರೆ

   ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸುವಲ್ಲಿ ಅಮಿತ್ ಶಾ ವಿಫಲರಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲಾ ಯಾರೂ ಜವಾಬ್ದಾರರಲ್ಲ. ಪ್ರಧಾನಿ ಮತ್ತು ಗೃಹ ಸಚಿವರು ಎಲ್ಲಿ ಅಡಗಿ ಕೂತಿದ್ದಾರೆ ಎನ್ನುವ ಟ್ವೀಟ್.

   ಶಾ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವ ಟ್ವೀಟ್

   ಶಾ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವ ಟ್ವೀಟ್

   ಇವತ್ತು ಅಮಿತ್ ಶಾ ಅವರ ವಿಫಲತೆಯನ್ನು ಕಣ್ಣಾರೆ ಕಂಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಶಾ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವ ಟ್ವೀಟ್.

   ಸರ್ವೋಚ್ಚ ನ್ಯಾಯಾಲಯ

   ಸರ್ವೋಚ್ಚ ನ್ಯಾಯಾಲಯ

   ಇಂದು ರಾಜಧಾನಿಯಲ್ಲಿನ ಅಶಾಂತಿಗೆ ರೈತರು ಕಾರಣರಾದರೆ, ಇಷ್ಟು ದಿನ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಮೃತಪಟ್ಟರಲ್ಲವೇ ಅದಕ್ಕೆ ಯಾರು ಜವಾಬ್ದಾರರು. ಸರ್ವೋಚ್ಚ ನ್ಯಾಯಾಲಯ ಇಂದು ನಡೆಯುತ್ತಿರುವ ಘಟನೆಯನ್ನು ನೋಡುತ್ತಿದೆಯೇ, ಅಮಿತ್ ಶಾ ರಾಜೀನಾಮೆ ನೀಡಲಿ ಎನ್ನುವ ಟ್ವೀಟ್.

   English summary
   After Delhi Voilence Amit Shah Should Resign Hashtag Trending In Twitter,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X