ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಜವಾದ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 60-90 ಪಟ್ಟು ಹೆಚ್ಚು: ತಜ್ಞರು

|
Google Oneindia Kannada News

ಹೊಸದಿಲ್ಲಿ ಜನವರಿ 12: ದೇಶಾದ್ಯಂತ ಓಮಿಕ್ರಾನ್ ಹಾಗೂ ಕೊರೊನಾ ಸೋಂಕುಗಳು ಹೆಚ್ಚಾಗುತ್ತಿದ್ದು ಪ್ರತಿನಿತ್ಯ ಒಂದುವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಆತಂಕಕಾರಿ ವಿಚಾರ ಅಂದರೆ ಸದ್ಯ ದಾಖಲಾಗಿರುವ ಕೊರೊನಾ ಪ್ರಕರಣಗಳಿಗಿಂತ ಸೋಂಕುಗಳ ಸಂಖ್ಯೆ ಇನ್ನೂ ಹೆಚ್ಚಾಗಿದ್ದು ಓಮಿಕ್ರಾನ್ ಪ್ರಕರಣಗಳು ಕೂಡ ನೈಜ ಸಂಖ್ಯೆಗಿಂತ 90 ಪಟ್ಟು ಹೆಚ್ಚಿರಬಹುದು ಎಂದು ಕೋವಿಡ್‌ನ ಸರ್ಕಾರದ ಉನ್ನತ ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾರೆ.

ವರದಿಯಾದ ಸೋಂಕಿನ ಸಂಖ್ಯೆಗಳು ಸತ್ಯಕ್ಕೆ ಎಲ್ಲಿಯೂ ಹತ್ತಿರವಿಲ್ಲ. ಓಮಿಕ್ರಾನ್ ನೈಜ ಪ್ರಕರಣಗಳಿಗಿಣತ 90 ಪಟ್ಟು ಹೆಚ್ಚಿರಬಹುದು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಜೆಪಿ ಮುಳಿಯಿಲ್(Dr JP muliyil) ಅವರು ಎನ್‌ಡಿಟಿವಿ ಸಂದರ್ಶನದ ವೇಳೆ ತಿಳಿಸಿದ್ದಾರೆ. ಡೆಲ್ಟಾ ಅಲೆಯ ನಂತರ ಸದ್ಯ ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದು ಓಮಿಕ್ರಾನ್ ಆರಂಭವಾದಾಗಿ. ಅಲ್ಲಿಗೆ ಕೊರೊನಾ ಉಲ್ಬಣಕ್ಕೆ ಓಮಿಕ್ರಾನ್ ಹೆಚ್ಚಳವೇ ಕಾರಣ. ಇದು ದೃಢೀಕರಣದ ಅಗತ್ಯವಿಲ್ಲ" ಎಂದು ಡಾ. ಜೈಪ್ರಕಾಶ್ ಮುಳಿಯಿಲ್ ಹೇಳಿದರು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ಗ್ರಾಫ್ ಪ್ರಕಾರ "ವಕ್ರರೇಖೆಯ ಆಕಾರವು ನಾವು ಚಿಂತಿಸಬೇಕಾದದ್ದು" ಎಂದು ಅವರು ಹೇಳಿದರು. ಗ್ರಾಫ್ ನಲ್ಲಿ ರೇಖೆಯು ಕಳೆದ ವರ್ಷ ಇಳಿಕೆಯಾಗಿದೆ. ಆಗ ಇದು ಅಂತ್ಯವನ್ನು ತಲುಪಿದೆ ಎಂದು ನಮಗೆ ತಿಳಿಯುತ್ತದೆ. ಆದರೆ ಇದು ಏಕಾಏಕಿ ಏರಿಕೆಯಾಗಿದೆ. ಅಂದರೆ ಇದರ ಹರಡುವಿಕೆಯ ಪ್ರಮಾಣ ನಾವು ಕಂಡುಕೊಂಡ ಅಂಕಿಅಂಶಗಳಿಗಿಂತ ಹೆಚ್ಚಾಗಿದೆ ಎಂದು ಮುಳಿಯಿಲ್ ಹೇಳಿದ್ದಾರೆ.

ಹೆಚ್ಚಿನ ಪರೀಕ್ಷೆಗಳು ಮತ್ತು ನಿಖರವಾದ ಸಂಖ್ಯೆಗಳಿಲ್ಲದೆ ತಜ್ಞರು ಓಮಿಕ್ರಾನ್‌ನ ನಿಜವಾದ ವ್ಯಾಪ್ತಿಯನ್ನು ಹೇಗೆ ಅಳೆಯಲು ಸಾಧ್ಯವಾಗುತ್ತದೆ ಎಂಬ ಪ್ರಶ್ನೆಗೆ ಅವರು "ನಾವು ಅದರೊಂದಿಗೆ ಬದುಕಲು ಕಲಿತಿದ್ದೇವೆ" ಎಂದು ಹೇಳಿದರು. ಡೆಲ್ಟಾ ರೂಪಾಂತರದಿಂದ ಉಂಟಾದ ಎರಡನೇ ಅಲೆಯ ಸಮಯದಲ್ಲಿ ಪ್ರಕರಣಗಳ ಸಂಖ್ಯೆಯನ್ನು ಗುಣಿಸುವ ಮೂಲಕ ಹರಡುವಿಕೆಯನ್ನು ಕಂಡುಕೊಳ್ಳಲಾಯಿತು. ಸೋಂಕಿಗೆ ಒಳಗಾದ ವ್ಯಕ್ತಿ ಸೇರಿದಂತೆ ಯಾರೊಬ್ಬರಿಂದಲೂ ಸಬ್‌ಕ್ಲಿನಿಕಲ್ ಸಂಖ್ಯೆಗಳು ಗಮನಕ್ಕೆ ಬರದ ಕಾರಣ ನೈಜ ಸಂಖ್ಯೆ ಮೂರು ಇದ್ದರೆ ಅದನ್ನು ಗುಣಿಸುವ ಮೂಲಕ ಸುಮಾರು 30 ಪ್ರಕರಣಗಳು ಕಂಡುಬರುತ್ತಿದ್ದವು. ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸಬ್‌ಕ್ಲಿನಿಕಲ್ ಪ್ರಕರಣಗಳು ಸಹ ಗಮನಾರ್ಹವಾಗಿ ಹೆಚ್ಚಾಗಿವೆ. ಆದರೆ ನಾವು 60 ರಿಂದ 90 ನಿಜವಾದ ಪ್ರಕರಣಗಳಲ್ಲಿ ಒಂದನ್ನು ಮಾತ್ರ ಪತ್ತೆಹಚ್ಚುತ್ತಿದ್ದೇವೆ ಎಂದು ಅವರು ಹೇಳಿದರು.

Actual Omicron Cases Could Be 60-90 Times As Reported: Top Expert

ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಲ್ಲಿ, ನಾವು ನಮ್ಮ ಮನೆಗಳಲ್ಲಿ ಹೆಚ್ಚು ಕಾಲ ಲಾಕ್ ಆಗಲು ಸಾಧ್ಯವಿಲ್ಲ ಮತ್ತು ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಓಮಿಕ್ರಾನ್ ಹೆಚ್ಚು ಸೌಮ್ಯವಾಗಿದೆ ಎಂದು ನಾವು ಪದೇ ಪದೇ ಒತ್ತಿಹೇಳಬೇಕು ಎಂದು ಹೇಳಿದರು. ಇದಲ್ಲದೆ ದೇಶದ ಕೊರೋನವೈರಸ್ ಸಲಹಾ ಸಮಿತಿಯನ್ನು ಮೇಲ್ವಿಚಾರಣೆ ಮಾಡುವ ಸರ್ಕಾರಿ ಸಮಿತಿಯಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಓಮಿಕ್ರಾನ್ ರೂಪಾಂತರದಲ್ಲಿ 3-4 ಉಪ-ವಂಶಾವಳಿಗಳಿವೆ ಎಂದು ಮಂಗಳವಾರ ಹೇಳಿದ್ದಾರೆ.

Recommended Video

KL Rahul ನಾಯಕತ್ವದ ಏಕದಿನ ಸರಣಿಗೆ ಆಟಗಾರರೇ‌ ಇಲ್ಲ | Oneindia Kannada

ಕಳೆದ 24 ಗಂಟೆಗಳ (ಮಂಗಳವಾರ) ಅವಧಿಯಲ್ಲಿ 1,68,063 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,58,75,790ಕ್ಕೆ ಏರಿಕೆಯಾಗಿದೆ.69,959 ಸೋಂಕಿತರು ಗುಣಮಮುಖರಾಗಿದ್ದಾರೆ. 277 ಮಂದಿ ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ. 10. 64 ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೆ ಏರಿಕೆಯಾಗಿದೆ. ಜನವರಿ 10 ರಂದು ಒಟ್ಟು 15,79,928 ಪರೀಕ್ಷೆ ನಡೆಸಲಾಗಿದ್ದು, ಈವರೆಗೂ 69,31,55,280 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

English summary
The government's top medical expert on Covid has claimed that reported infection numbers are "nowhere close to the truth" as actual numbers could be up to 90 times more than reported for Omicron infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X