ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಜಿ ನೆಟ್‌ವರ್ಕ್‌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ

|
Google Oneindia Kannada News

ನವದೆಹಲಿ, ಮೇ 31: ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ ಪರಿಸರವಾದಿ ಜೂಹಿ ಚಾವ್ಲಾ ಸೋಮವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನಾಗರಿಕರು, ಪ್ರಾಣಿಗಳು, ಗಿಡ ಮರಗಳಿಗೆ ಮೇಲೆ ಈ ವಿಕಿರಣ ಪರಿಣಾಮ ಉಂಟು ಮಾಡುತ್ತದೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಸಿ ಹರಿ ಶಂಕರ್ ಈ ಪ್ರಕರಣದ ವಿಚಾರಣೆಯನ್ನು, ವಿಚಾರಣೆಯನ್ನು ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದು ವಿಚಾರಣೆ ಜೂನ್ 2 ರಂದು ನಡೆಯಲಿದೆ.

5 ಜಿ ತಂತ್ರಜ್ಞಾನ ಪರೀಕ್ಷೆಗೆ ಇಳಿದ ಬಿಎಸ್ಎನ್ಎಲ್ 5 ಜಿ ತಂತ್ರಜ್ಞಾನ ಪರೀಕ್ಷೆಗೆ ಇಳಿದ ಬಿಎಸ್ಎನ್ಎಲ್

5 ಜಿ ಗಾಗಿ ದೂರಸಂಪರ್ಕ ಉದ್ಯಮದ ಯೋಜನೆಗಳನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ನಿರ್ಧರಿಸಿದ್ದರೆ, ಯಾವುದೇ ವ್ಯಕ್ತಿ, ಯಾವುದೇ ಪ್ರಾಣಿ, ಪಕ್ಷಿ, ಯಾವುದೇ ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಹಾನಿಯನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ, ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಎಫ್‌ ವಿಕಿರಣವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು 5 ಜಿ ನೆಟ್‌ವರ್ಕ್ ಸಂದರ್ಭ ಹೆಚ್ಚಾಗುತ್ತದೆ ಎಂದು ಜೂಹಿ ಚಾವ್ಲಾ ತಿಳಿಸಿದ್ದಾರೆ.

Actor Juhi Chawla Files Plea Against 5G Networks In Delhi High Court

ಈ 5 ಜಿ ಯೋಜನೆಮಾನವರ ಮೇಲೆ ಗಂಭೀರ, ಬದಲಾಯಿಸಲಾಗದ ಪರಿಣಾಮಗಳನ್ನು ಉಂಟುಮಾಡುತ್ತದೆ, ಭೂಮಿಯ ಎಲ್ಲಾ ಪರಿಸರ ವ್ಯವಸ್ಥೆಗಳಿಗೆ ಶಾಶ್ವತ ಹಾನಿಯನ್ನುಂಟುಮಾಡುವ ಅಪಾಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಕಾಲದಲ್ಲಿ 5 ಜಿ ಅನುಷ್ಠಾನ ಖಾತ್ರಿಪಡಿಸಲು ಮೋದಿ ಕರೆಸಕಾಲದಲ್ಲಿ 5 ಜಿ ಅನುಷ್ಠಾನ ಖಾತ್ರಿಪಡಿಸಲು ಮೋದಿ ಕರೆ

5 ಜಿ ತಂತ್ರಜ್ಞಾನವು ಮಾನವಕುಲ, ಪುರುಷ, ಮಹಿಳೆ, ವಯಸ್ಕರು, ಮಗು, ಶಿಶು, ಪ್ರಾಣಿಗಳು ಮತ್ತು ಪ್ರತಿಯೊಂದು ರೀತಿಯ ಜೀವಿಗಳಿಗೆ ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ದೀಪಕ್ ಖೋಸ್ಲಾ ಮೂಲಕ ಜೂಹಿ ಚಾವ್ಲಾ ಈ ಮೊಕ್ಕದಮೆ ದಾಖಲಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Actor Juhi Chawla Files Plea Against 5G Networks In Delhi High Court, Hearing on June 2 nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X