ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿವಿ ಚುನಾವಣೆಯಲ್ಲಿ ಎಬಿವಿಪಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ದೆಹಲಿ ವಿಶ್ವವಿದ್ಯಾಲಯದ ಆವರಣದಲ್ಲಿಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿಎಪಿ) ಹಾಗೂ ಭಾರತೀಯ ಜನತಾ ಪಕ್ಷದ ಸ್ಥಳೀಯ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳ ಯೂನಿಯನ್ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಗೆಲುವು ದಾಖಲಿಸಿದೆ.

ಬಿಜೆಪಿ, ಆರೆಸ್ಸೆಸ್ ಬೆಂಬಲಿತ ಎಬಿವಿಪಿಗೆ ಈ ಬಾರಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಯೂನಿಯನ್ ನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳು ದಕ್ಕಿವೆ. ಕಾಂಗ್ರೆಸ್ ಬೆಂಬಲಿತ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ ಎಸ್ ಯುಐ) ಗೆ ಕಾರ್ಯದರ್ಶಿ ಸ್ಥಾನ ಮಾತ್ರ ಸಿಕ್ಕಿದೆ.

ಎಬಿಪಿಯಿಂದ ಸ್ಪರ್ಧಿಸಿದ್ದ ಅಂಕಿವ್ ಬಸೋಯಾ ಅವರು ಡಿಯುಎಸ್ ಯುನ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೆ, ಶಕ್ತಿ ಸಿಂಗ್ ಅವರು ಉಪಾಧ್ಯಕ್ಷ, ಜ್ಯೋತಿ ಚೌಧರಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಲೋಕಸಭೆ ಚುನಾವಣೆಗೆ ದಿಕ್ಸೂಚಿ: ದೆಹಲಿ ವಿವಿ ವಿದ್ಯಾರ್ಥಿಗಳ ಯೂನಿಯನ್ ಚುನಾವಣೆ(ಡಿಯುಎಸ್ ಯು)ಯಲ್ಲಿ ಜಯಭೇರಿ ಬಾರಿಸಿದವರು ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಗೆಲುವು ದಾಖಲಿಸುತ್ತಾರೆ ಎಂಬ ನಂಬಿಕೆ ಇದೆ.

ಕಾಕತಾಳೀಯವಾದರೂ ಇದು ನಿಜವಾಗಿದೆ

ಕಾಕತಾಳೀಯವಾದರೂ ಇದು ನಿಜವಾಗಿದೆ

ದೆಹಲಿ ವಿವಿ ಹಾಗೂ ಲೋಕಸಭೆ ಚುನಾವಣೆ ಬಹುತೇಕ ಒಂದೇ ಅವಧಿಯಲ್ಲಿ ಬರುತ್ತವೆ. ಕಳೆದ ಐದು ಬಾರಿಯಲ್ಲಿ ಇದೇ ರೀತಿ ಆಗಿದೆ. ಡಿಯು ಎಸ್ ಯುನಲ್ಲಿ ಜಯಗಳಿಸಿದ ಸಂಘಟನೆಗೆ ಬೆಂಬಲ ನೀಡಿದ ಪಕ್ಷವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. 1997, 1998, 2003 ಹಾಗೂ 2013ರಲ್ಲಿ ಇದು ರಿಪೀಟ್ ಆಗಿದೆ.

ಈ ಬಾರಿ ಬಿಜೆಪಿ ಬೆಂಬಲಿತ ಎಬಿವಿಪಿ ಗೆದ್ದಿರುವುದರಿಂದ ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕಾರ್ಯಕರ್ತರು ಹರ್ಷದಿಂದಿದ್ದಾರೆ.

1997ರಲ್ಲಿ ಎಲ್ಲಾ ಸ್ಥಾನ ಗೆದ್ದಿದ್ದ ಎಬಿವಿಪಿ

1997ರಲ್ಲಿ ಎಲ್ಲಾ ಸ್ಥಾನ ಗೆದ್ದಿದ್ದ ಎಬಿವಿಪಿ

1997ರ ಡಿಯು ಎಸ್ ಯು ಚುನಾವಣೆಯಲ್ಲಿ ಎಬಿವಿಪಿ ಎಲ್ಲಾ ನಾಲ್ಕು ಸ್ಥಾನಗಳಾದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯಾರ್ಶಿ ಸ್ಥಾನಗಳನ್ನು ಗೆದ್ದು ಬೀಗಿತ್ತು. ಇದಾದ ಬಳಿಕ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದಿತ್ತು.

1998ರಲ್ಲಿ ಮತ್ತೊಮ್ಮೆ ನಡೆದ ಚುನಾವಣೆಯಲ್ಲಿ ಎಬಿವಿಪಿಗೆ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿತ್ತು. ಎನ್ ಎಸ್ ಯು ಐಗೆ ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನ ಲಭಿಸಿತ್ತು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಗೆಲುವು ಸಾಧಿಸಿತ್ತು.

2003,2005ರ ಚುನಾವಣೆ ಫಲಿತಾಂಶ

2003,2005ರ ಚುನಾವಣೆ ಫಲಿತಾಂಶ

2003ರ ಡಿಯು ಎಸ್ ಯು ಚುನಾವಣೆಯಲ್ಲಿ ಎನ್ ಎಸ್ ಯು ಐ ಎಲ್ಲಾ ನಾಲ್ಕು ಸ್ಥಾನಗಳನ್ನು ಬಾಚಿಕೊಂಡಿತ್ತು. 2004ರ ಲೋಕಸಭೆ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಗೆಲುವು ದಾಖಲಿಸಿತ್ತು.

2008ರಲ್ಲಿ ಎಬಿವಿಪಿಗೆ ಅಧ್ಯಕ್ಷ ಸ್ಥಾನ ಲಭಿಸಿದರೂ, ಎನ್ ಎಸ್ ಯು ಐಗೆ ಮಿಕ್ಕ ಮೂರು ಸ್ಥಾನಗಳು ಲಭಿಸಿತ್ತು. ಎನ್ ಎಸ್ ಯುಐ ಹೆಚ್ಚು ಸ್ಥಾನಗಳಿಸಿದ್ದರಿಂದ 2009ರ ಲೋಕಸಭೆ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಅವರ ಯುಪಿಎಗೆ ಮತ್ತೆ ಗೆಲುವು ಲಭಿಸಿತು.

2008 ಹಾಗೂ 2013ರ ಚುನಾವಣೆ ಫಲಿತಾಂಶ

2008 ಹಾಗೂ 2013ರ ಚುನಾವಣೆ ಫಲಿತಾಂಶ

2013ರ ಚುನಾವಣೆ ಫಲಿತಾಂಶರಲ್ಲಿ ಎಬಿವಿಪಿ ಅಧ್ಯಕ್ಷ, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗಳಿಸಿತ್ತು. ಎನ್ ಎಸ್ ಯುಐಗೆ ಕಾರ್ಯದರ್ಶಿ ಸ್ಥಾನ ಗಳಿಸಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ದಿಎಗೆ ಭರ್ಜರಿ ಜಯ ಸಿಕ್ಕಿತ್ತು. ಹೀಗಾಗಿ, 2019ರ ಚುನಾವಣೆಯಲ್ಲಿ ಇತಿಹಾಸ ಮರುಕಳಿಸಲಿದೆ ಎಂದು ನಂಬಲಾಗಿದೆ.

English summary
It may be a pleasant development for the Bharatiya Janata Party and its supporters. The Akhil Bharatiya Vidyarthi Parishad (ABVP) has won three out of four posts of the Delhi University Students’ Union (DUSU).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X