ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಫೈಟರ್ ಜೆಟ್ ಏರಲಿದ್ದಾರೆ ನಮ್ಮ ಹೆಮ್ಮೆಯ ಅಭಿನಂದನ್ ವರ್ಧಮಾನ್!

|
Google Oneindia Kannada News

Recommended Video

ಭಾರತದ ಹೆಮ್ಮೆಯ ಕುವರ ಅಭಿನಂದನ್ ವರ್ಧಮಾನ್: Surgical Strike 2 | Oneinida Kannada

ನವದೆಹಲಿ, ಏಪ್ರಿಲ್ 20: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಸದ್ಯದಲ್ಲೇ ಮತ್ತೆ ಫೈಟರ್ ಜೆಟ್ ಏರಲಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪಾಕಿಸ್ತಾನದ ಸೇನೆಗೆ ಸಿಕ್ಕು, ನಂತರ ಭಾರತಕ್ಕೆ ವಾಪಸ್ಸಾದ ಅಭಿನಂದನ್ ಅವರನ್ನು ಈಗಾಗಲೇ ಹಲವು ರೀತಿಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಬೆಂಗಳೂರು ಮೂಲದ ಇನ್ ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್(ಐಎಎಂ) ನಲ್ಲಿ ಅವರು ಮತ್ತಷ್ಟು ಪರೀಕ್ಷೆಗೆ ಒಳಪಡಲಿದ್ದಾರೆ.

ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತುತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು

ಆ ಎಲ್ಲ ಪರೀಕ್ಷೆಗಳ ನಂತರ ಅವರ ದೈಹಿಕ ಕ್ಷಮತೆಯ ಆಧಾರದ ಮೇಲೆ ಅವರು ಮತ್ತೆ ಫೈಟರ್ ಜೆಟ್ ಪೈಲೆಟ್ ಆಗಿ ಸೇನೆಯನ್ನು ಸೇರಿಕೊಳ್ಳಲಿದ್ದಾರೆ.

Abhinandan Varthaman to operate fighter jet soon

ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರರು ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ 40 ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ನಂತರ ಅದಕ್ಕೆ ಪ್ರತೀಕಾರ ಎಂಬಂತೆ ಫೆಬ್ರವರಿ 26 ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಉಗ್ರ ನೆಲೆಯಾದ ಬಾಲಕೋಟ್ ಮೇಲೆ ದಾಳಿ ನಡೆಸಿತ್ತು. ಈ ಬೆಳವಣಿಗೆಯಿಂದ ಉಭಯ ದೇಶದ ನಡುವೆ ಯುದ್ಧದಂಥ ಸನ್ನಿವೇಶ ಏರ್ಪಟ್ಟಿತ್ತು.

ಅಭಿನಂದನ್ ವೈದ್ಯಕೀಯ ವರದಿ: ಬೆನ್ನುಮೂಳೆಗೆ ಪೆಟ್ಟು ಅಭಿನಂದನ್ ವೈದ್ಯಕೀಯ ವರದಿ: ಬೆನ್ನುಮೂಳೆಗೆ ಪೆಟ್ಟು

ಈ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಲು ಭಾರತದ ಮಿಗ್ 21 ವಿಮಾನದ ಮೂಲಕ ಅಭಿನಂದನ್ ವರ್ಧಮಾನ್ ದಾಳಿ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಭಾರತೀಯ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಲಾಯಿತಾದರೂ, ಮಿಗ್ 21 ವಿಮಾನ ಪತನವಾಗಿತ್ತು. ಆ ಸಂದರ್ಭದಲ್ಲಿ ವಿಮಾನದಲ್ಲಿದ್ದ ಪೈಲೆಟ್ ಗಳಿಬ್ಬರೂ ಪ್ಯಾರಚೂಟ್ ಸಹಾಯದಿಂದ ಬದುಕಿದರಾದರೂ, ಅಭಿನಂದನ್ ತಿಳಿಯದೆ ಪಾಕಿಸ್ತಾನದ ಗಡಿಯೊಳಗೆ ಬಿದ್ದಿದ್ದರು.

ಅವರನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನಿ ಸೇನೆ, ಭಾರತದ ಒತ್ತಡ ಮತ್ತು ಇಡೀ ವಿಶ್ವದ ನಿಷ್ಠುರ ಕಟ್ಟಿಕೊಳ್ಳಬೇಕೆಂಬ ಭಯಕ್ಕೆ ಅವರನ್ನು ವಾಪಸ್ ಭಾರತ್ಕೆ ಮಾರ್ಚ್ 01 ರಂದು ಹಸ್ತಾಂತರಿಸಿತ್ತು.

English summary
Wing Commander Abhinandan Varthaman will be soon operate fighter jet. But before that he has to be clear some his medical test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X