ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿನಂದನ್ ಮೀಸೆಯನ್ನು 'ರಾಷ್ಟ್ರೀಯ ಮೀಸೆ'ಯನ್ನಾಗಿ ಘೋಷಿಸಿ: ಚೌಧರಿ

|
Google Oneindia Kannada News

ನವದೆಹಲಿ, ಜೂನ್ 24: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆಯನ್ನು 'ರಾಷ್ಟ್ರೀಯ ಮೀಸೆ' ಎಂದು ಘೋಷಿಸಿ ಎಂಬ ಬೇಡಿಕೆಯನ್ನು ಅಧೀರ್ ರಂಜನ್ ಚೌಧರಿ ಲೋಕಸಭೆಯ ಮುಂದಿಟ್ಟಿದ್ದಾರೆ.

ಕಾಂಗ್ರೆಸ್ ಪಕ್ದಷದ ಲೋಕಸಭೆ ಮುಖಂಡರಾಗಿರುವ ಅಧೀರ್ ಚೌಧರಿ ಲೋಕಸಭೆಯಲ್ಲಿಂದು ಮಾತನಾಡಿ, "ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಪ್ರಶಸ್ತಿ ನೀಡಬೇಕು. ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆ" ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಮತ್ತೆ ಬಯಲಾಯ್ತು ಪಾಕ್ ವಿಕೃತಿ: ಕ್ರಿಕೆಟ್ ಜಾಹೀರಾತಿನಲ್ಲಿ ಅಭಿನಂದನ್ ಗೆ ಅವಮಾನಮತ್ತೆ ಬಯಲಾಯ್ತು ಪಾಕ್ ವಿಕೃತಿ: ಕ್ರಿಕೆಟ್ ಜಾಹೀರಾತಿನಲ್ಲಿ ಅಭಿನಂದನ್ ಗೆ ಅವಮಾನ

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅವರನ್ನುಪಾಕಿಸ್ತಾನ ಮಾರ್ಚ್ 1 ರಂದು ಭಾರತಕ್ಕೆ ಹಸ್ತಾಂತರಿಸಿತ್ತು.

Abhinanda Varthamans moustache should be made national moustache: Adhir Ranjan Chowdhury

ಮತ್ತೆ ಫೈಟರ್ ಜೆಟ್ ಏರಲಿದ್ದಾರೆ ನಮ್ಮ ಹೆಮ್ಮೆಯ ಅಭಿನಂದನ್ ವರ್ಧಮಾನ್! ಮತ್ತೆ ಫೈಟರ್ ಜೆಟ್ ಏರಲಿದ್ದಾರೆ ನಮ್ಮ ಹೆಮ್ಮೆಯ ಅಭಿನಂದನ್ ವರ್ಧಮಾನ್!

ಫೆಬ್ರವರಿ 14 ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರ ನೆಲೆಯ ಮೇಲೆ ದಾಳಿ ನಡೆಸಿತ್ತು. ಆ ನಂತರ ಉಭಯ ದೇಶಗಳ ನಡುವೆ ಯುದ್ಧದಂಥ ಸ್ಥಿತಿ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಅಭಿನಂದನ್ ಪಾಕ್ ಸೇನಾ ವಿಮಾನವನ್ನು ಹಿಮ್ಮೆಟ್ಟಿಸಿ ಶೌರ್ಯ ಮೆರೆದಿದ್ದರು, ಆದರೆ ಪ್ಯಾರಾಚ್ಯೂಟ್ ಪಾಕ್ ಗಡಿಯೊಳಗೆ ಹೋಗಿ ಬಿದ್ದಿದ್ದರಿಂದ ಅವರು ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

English summary
Congress Lok Sabha leader, Adhir Ranjan Chowdhury in Lok Sabha: Wing Commander Abhinandan Varthaman should be awarded and his moustache should be made 'national moustache'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X