ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರುಷಿ ಹತ್ಯೆ:ಟ್ವಿಟ್ಟರ್ ನಲ್ಲಿ ಪೋಷಕರಿಗೆ ಹಿಡಿಶಾಪ

By Mahesh
|
Google Oneindia Kannada News

ನವದೆಹಲಿ, ನ.25: ಆರುಷಿ ತಲ್ವಾರ್ ಹೇಮರಾಜ್ ಕೊಲೆಗೈದು ಕಣ್ಣೀರಿಟ್ಟಿರುವ ತಲ್ವಾರ್ ದಂಪತಿಗಳ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಮರ್ಯಾದೆ ಹತ್ಯೆ ಎಂದರೆ ಅದಕ್ಕಿಂತ ಹೀನ ಕಾರ್ಯ ಮತ್ತೊಂದಿಲ್ಲ. ಹೆತ್ತ ಮಕ್ಕಳನ್ನು ಕೊಲ್ಲುವುದು ಎಷ್ಟು ಸರಿ? ವೈದ್ಯರು ಈ ರೀತಿ ಮಾಡಿರುವುದು ನಾಚಿಕೆಗೇಡು ಎಂದು ಟ್ವಿಟ್ಟರ್ ನಲ್ಲಿ ಹಿಡಿಶಾಪ ಹಾಕಲಾಗಿದೆ.

2008ರಲ್ಲಿ ಮೇ 15ರಂದು ರಾತ್ರಿ 14 ವರ್ಷದ ಮಗಳಾದ ಆರುಷಿ ಹಾಗೂ ಮನೆಗೆಲಸ ಹುಡುಗ ಹೇಮರಾಜ್ ಇಬ್ಬರನ್ನು ಮೆಡಿಕಲ್ ಪರಿಕರ ಬಳಸಿ ವೈದ್ಯ ರಾಜೇಶ್ ತಲ್ವಾರ್ ಹಾಗೂ ನೂಪುರ್ ದಂಪತಿ ಕೊಲೆಗೈದಿದ್ದರು. ನಂತರ ಯಾವುದೇ ಸಾಕ್ಷಿ ಸಿಗದಂತೆ ಸ್ವಚ್ಛಗೊಳಿಸಿದ್ದರು. ಮೇ 16ರಂದು ಆರುಷಿ ಮೃತದೇಹ ಮಹಡಿಯ ಬೆಡ್ ರೂಮಿನಲ್ಲಿ ಪತ್ತೆಯಾಗಿತ್ತು. ಮರುದಿನ ಹೇಮರಾಜ್ ಶವ ಮನೆ ಟೆರೇಸ್ ಮೇಲೆ ಸಿಕ್ಕಿತ್ತು.

ನೋಯ್ಡಾದ ಜಲವಿಹಾರ ನಿವಾಸದಲ್ಲಿ ನಡೆದ ಈ ಜೋಡಿ ಕೊಲೆ ಪ್ರಕರಣದ ತನಿಖೆ ಸಿಬಿಐ ನಡೆಸಿ ತನ್ನ ವರದಿಯನ್ನು ಕೋರ್ಟಿಗೆ ಸಲ್ಲಿಸಿತ್ತು. ಅನೈತಿಕ ಸಂಬಂಧದ ಶಂಕೆಯಿಂದ ಆರುಷಿ ಹಾಗೂ ಮನೆಗೆಲಸ ಹುಡುಗನನ್ನು ತಲ್ವಾರ್ ದಂಪತಿ ಕೊಂದಿದ್ದಾರೆ ಎಂದು ಸುಮಾರು ಐದೂವರೆ ವರ್ಷಗಳ ನಂತರ ಗಾಜಿಯಾಬಾದ್ ಕೋರ್ಟ್ ತೀರ್ಪು ನೀಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳ ಅಸಮಗ್ರ ವರದಿ ಇಲ್ಲಿದೆ ತಪ್ಪದೇ ನೋಡಿ...

ಕಾಂಗ್ರೆಸ್ ನಾಯಕನ ಟ್ವೀಟ್

ತಂದೆ ತಾಯಿ ದೇವರೆಂದು ಕರೆಯುತ್ತೇವೆ. ಇಂಥ ನಾಡಲ್ಲಿ ಎಂಥಾ ಪ್ರಕರಣ

ಸಾಕ್ಷಿಯೇ ಇಲ್ಲ

ಸಾಕ್ಷಿಯೇ ಇಲ್ಲದೆ ಅನುಮಾನದ ಮೇಲೆ ತನಿಖೆ ನಡೆದ ಪ್ರಕರಣ ಇದಾಗಿದ್ದು, ಇನ್ನಷ್ಟು ಸತ್ಯ ಹೊರಬೀಳಬೇಕಿದೆ.

ಆರುಷಿ ಗೆಳತಿ ಹೇಳಿಕೆ

ಆರುಷಿಯನ್ನು ತುಂಬಾ ಪ್ರೀತಿಸುತ್ತಿದ್ದ ತಲ್ವಾರ್ ದಂಪತಿ ಈ ರೀತಿ ಮಾಡಿದ್ದಾರೆ ಎನ್ನಲು ಸಾಧ್ಯವೇ ಇಲ್ಲ ಎಂದು ಆರುಷಿ ಗೆಳತಿ ಫಿಜಾ ಹೇಳಿಕೆ ನೀಡಿದ್ದಾಳೆ

ಶೇಖರ್ ಕಪೂರ್ ಪ್ರತಿಕ್ರಿಯೆ

ಆರುಷಿ ಹತ್ಯೆ ಪ್ರಕರಣದ ತೀರ್ಪುನ ಬಗ್ಗೆ ನಿರ್ದೇಶಕ ಶೇಖರ್ ಕಪೂರ್ ಪ್ರತಿಕ್ರಿಯೆ

ಕಿರಣ್ ಬೇಡಿ ಟ್ವೀಟ್

ಸಾಕ್ಷಿ ಹಿಂದೆ ಬೀಳುವ ತನಿಖಾ ತಂಡಕ್ಕೆ ಹಾಗೂ ಸಮಸ್ತ ಕಾನೂನು ಲೋಕಕ್ಕೆ ಈ ಕೇಸ್ ಉತ್ತಮ ಪಾಠವಾಗಿದೆ.

ಲೇಖಕಿ ಶ್ವೇತಾ ಪೂಂಜ್

ಈಗಲೂ ನನಗೆ ತೀರ್ಪನ್ನು ನಂಬಲು ಆಗುತ್ತಿಲ್ಲ. ಎಲ್ಲೋ ಏನೋ ಮಿಸ್ ಆಗಿದೆ

ಟಚ್ ಡಿಎನ್ ಎ

ಟಚ್ ಡಿಎನ್ ಎ ಎಂದರೆ ಏನು ಗೊತ್ತಾ ಸಿಬಿಐ? ಈ ಬಗ್ಗೆ ತಲ್ವಾರ್ ಹೇಳಿದರೂ ಎರಡು ವರ್ಷದಿಂದ ಸುಮ್ಮನಿರುವುದೇಕೆ?

ಬರ್ಖಾ ದತ್ ಹೇಳಿಕೆ

ಈ ಪ್ರಕರಣದಲ್ಲಿ ತಲ್ವಾರ್ ದಂಪತಿ ಪರ ನಿಲುವು ತಳೆದಿದ್ದಾರೆ ಎನ್ನಲಾಗಿದ್ದ ಜನಪ್ರಿಯ ಪತ್ರಕರ್ತೆ ಬರ್ಖಾ ದತ್ ಅವರು ಸಮಾಹಿತ ಮನೋಭಾವದ ಟ್ವೀಟ್ ಓದಿ

ಅಪರಾಧಿಗಳು ಗೊತ್ತಾಯ್ತು ಆದ್ರೆ?

ಆರುಷಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳು ಯಾರು ಎಂದು ತಿಳಿಯಿತು. ಕೊಲೆ ಯಾಕೆ ಮಾಡಿದ್ದು ತಿಳಿಯಲಿ

ತನಿಖೆ ತಂಡಕ್ಕೂ ಶಿಕ್ಷೆ?

ಅನಗತ್ಯವಾಗಿ ಪ್ರಕರಣವನ್ನು ಎಳೆದಾಡಿದ ನೋಯ್ಡಾ ಪೊಲೀಸರು ಹಾಗೂ ಸಿಬಿಐ ತಂಡ ಕೂಡಾ ಶಿಕ್ಷಾರ್ಹವಾಗಿದೆ.

ಇದೇನು ಮರ್ಯಾದೆ ಹತ್ಯೆಯೇ?

ಇದೇನು ಮರ್ಯಾದೆ ಹತ್ಯೆಯೇ? ವಿದ್ಯಾವಂತರೇ ಹೀಗೆ ಮಾಡಿದರೆ ಹಳ್ಳಿಗರನ್ನು ಬೈಯುವುದರಲ್ಲಿ ಏನು ಫಲ

ಸಾಗರಿಕ ಘೋಷ್ ಪ್ರಶ್ನೆ 1

ಹಿರಿಯ ಪತ್ರಕರ್ತೆ ಸಾಗರಿಕ ಘೋಷ್ ಅವರು ಆರುಷಿ ಹತ್ಯೆ ಪ್ರಕರಣದ ಹುಳುಕುಗಳನ್ನು ಎತ್ತಿ ತೋರಿಸುತ್ತಾ ಪ್ರಶ್ನೆಗಳನ್ನು ಹಾಕಿದ್ದಾರೆ

ಸಾಗರಿಕ ಘೋಷ್ ಪ್ರಶ್ನೆ 2

ಹಿರಿಯ ಪತ್ರಕರ್ತೆ ಸಾಗರಿಕ ಘೋಷ್ ಅವರು ಆರುಷಿ ಹತ್ಯೆ ಪ್ರಕರಣದ ಹುಳುಕುಗಳನ್ನು ಎತ್ತಿ ತೋರಿಸುತ್ತಾ ಸಿಬಿಐ ತನಿಖೆ ಬಗ್ಗೆ 10 ಪ್ರಶ್ನೆಗಳನ್ನು ಹಾಕಿದ್ದಾರೆ

English summary
Aarushi Talwar-Hemraj double murder case verdict: Twitter reactions After five and half years of the sensational double murder of Aarushi Talwar and domestic servant Hemraj in May 2008, the special CBI court on Monday found guilty the parents of slain Aarushi- Rajesh Talwar and Nupur Talwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X