ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಮೇಲೆ 48 ಗಂಟೆ ನಿರ್ಬಂಧ ಹೇರಿ: ಆಯೋಗಕ್ಕೆ ಎಎಪಿ ಮನವಿ

|
Google Oneindia Kannada News

ನವದೆಹಲಿ, ಜನವರಿ 30: ಕೇಂದ್ರ ಸಚಿವ ಅಮಿತ್ ಶಾ ದೆಹಲಿಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ 48 ಗಂಟೆಗಳ ನಿರ್ಬಂಧ ಹೇರಲು ಆಮ್ ಆದ್ಮಿ ಪಕ್ಷ ಚುನಾವಣಾ ಆಯೋಗಕ್ಕೆ ಬುಧವಾರ ಮನವಿ ಮಾಡಿದೆ.

ದೆಹಲಿ ಸರ್ಕಾರಿ ಶಾಲೆಗಳ ನಕಲಿ ವಿಡಿಯೋ ಟ್ವೀಟ್ ಮಾಡಿರುವುದಕ್ಕೆ ಅಮಿತ್ ಶಾ ವಿರುದ್ಧ ದೆಹಲಿ ಪ್ರಚಾರದ ಮೇಲೆ ನಿರ್ಬಂಧ ವಿಧಿಸಲು ಕೋರಲಾಗಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ತಿಳಿಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ; ಹೆಚ್ಚಿದ ಬಿಜೆಪಿ ಶಕ್ತಿ!ದೆಹಲಿ ವಿಧಾನಸಭೆ ಚುನಾವಣೆ; ಹೆಚ್ಚಿದ ಬಿಜೆಪಿ ಶಕ್ತಿ!

ದೆಹಲಿಗೆ ಕೆಟ್ಟ ಹೆಸರು ತರುವ ಸಲುವಾಗಿ ಬಿಜೆಪಿ ನಾಯಕರು ದೆಹಲಿ ಸರ್ಕಾರಿ ಶಾಲೆಗಳ ಕುರಿತಾದ ನಕಲಿ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ ಎಂದು ಎಎಪಿ ನಾಯಕರಾದ ಸಂಜಯ್ ಸಿಂಗ್ ಮತ್ತು ಪಂಗಜ್ ಗುಪ್ತಾ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

AAP Request EC 48 Hours Campaigning Ban On Amit Shah

ಬಿಜೆಪಿ ಸಂಸದರಾದ ಗೌತಮ್ ಗಂಭೀರ್, ಪರ್ವೇಶ್ ವರ್ಮಾ ಮತ್ತು ಹನ್ಸ್ ರಾಜ್ ಹನ್ಸ್, ದೆಹಲಿ ಸರ್ಕಾರಿ ಶಾಲೆಗಳ ಸುಳ್ಳು ಮತ್ತು ವಿರೂಪಗೊಳಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡಿದ್ದಾರೆ ಎಂದೂ ಎಎಪಿ ದೂರು ನೀಡಿದೆ. ಈ ಮೂರು ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅದು ಕೋರಿದೆ.

ಕೇಂದ್ರ ಸಚಿವರಿಗೆ ಕೊಕ್ ಕೊಡಲು ಕಾರಣವೇ ಈ ವಿಡಿಯೋ!ಕೇಂದ್ರ ಸಚಿವರಿಗೆ ಕೊಕ್ ಕೊಡಲು ಕಾರಣವೇ ಈ ವಿಡಿಯೋ!

ದೆಹಲಿಯ ವಿವಿಧ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದ್ದ ಬಿಜೆಪಿಯ ಎಂಟು ಸಂಸದರು ಅದರ ವಿಡಿಯೋಗಳನ್ನು ಹಂಚಿಕೊಂಡಿದ್ದರು.

ದೆಹಲಿ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ ಆಪ್ ಶಾಸಕದೆಹಲಿ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸೇರಿದ ಆಪ್ ಶಾಸಕ

'ನಾವು ಇಂದು ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಅಮಿತ್ ಶಾ ಅವರನ್ನು ಚುನಾವಣಾ ಪ್ರಚಾರದಿಂದ 48 ಗಂಟೆ ನಿಷೇಧಿಸಬೇಕು. ಸುಳ್ಳು ಮತ್ತು ನಕಲಿ ವಿಡಿಯೋಗಳನ್ನು ಮಾಡಿ ಹಂಚಿಕೊಂಡಿರುವ ಬಿಜೆಪಿ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಆ ವಿಡಿಯೋಗಳನ್ನು ಅಳಿಸಿ ಹಾಕಬೇಕು ಎಂದು ಕೋರಿದ್ದೇವೆ' ಎಂದು ಸಂಜಯ್ ಸಿಂಗ್ ಹೇಳಿದರು.

English summary
Delhi assembly elections 2020: AAP has complained to the Election Commission against fake videos on Delhi government schools and asks ban Amit Shah for 48 hours from campaigning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X