ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ತೆರವು ಕಾರ್ಯಚರಣೆ: ಎಎಪಿ ಶಾಸಕರ ಪ್ರತಿಭಟನೆ

|
Google Oneindia Kannada News

ನವದೆಹಲಿ ಮೇ 18: ಕೆಲ ದಿನಗಳಿಂದ ನಡೆಯುತ್ತಿರುವ ದೆಹಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಚರಣೆಯನ್ನು ವಿರೋಧಿಸಿ ಇಂದು ಎಎಪಿ ಶಾಸಕರು ಪ್ರತಿಭಟನೆ ಮಾಡಿದರು. ದಾಖಲಾತಿಗಳಿದ್ದರೂ ಕಟ್ಟಡಗಳನ್ನು ತೆರವುಗೊಳಿಸುತ್ತಿರುವುದರ ವಿರುದ್ಧ ಶಾಸಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ರಾಷ್ಟ್ರ ರಾಜಧಾನಿ ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ನಡೆಯುತ್ತಿದೆ. ಈ ಹಿಂದೆ ಜಹಾಂಗೀರ್‌ಪುರಿ ಪ್ರದೇಶದಲ್ಲೂ ಬುಲ್ಡೋಜರ್‌ಗಳಿಂದ ಅಕ್ರಮ ಕಟ್ಟಡಗಳನ್ನು ಕೆಡವಲಾಗಿತ್ತು. ಈ ವಿಷಯವನ್ನು ನ್ಯಾಯಾಲಯದ ಮುಂದಿಡಲಾಗಿದ್ದರೂ ಈಗ ಕಲ್ಯಾಣಪುರಿ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ನಡೆಯುತ್ತಿದೆ. ಇದನ್ನು ಆಡಳಿತಾರೂಢ ಆಮ್ ಆದ್ಮಿ ಪಕ್ಷ ವಿರೋಧಿಸಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಭಾವವನ್ನು ಹೊಂದಿದ್ದು ಅದರ ಕುತಂತ್ರದಿಂದ ಈ ತೆರವು ಕಾರ್ಯಚರಣೆ ನಡೆದಿದೆ ಎಂದು ಆಪ್ ಆರೋಪಿಸಿದೆ. ಎಎಪಿ ಸರ್ಕಾರ ನಗರಸಭೆಯ ಬುಲ್ಡೋಜರ್ ಕ್ರಮಕ್ಕೆ ಭಾರೀ ವಿರುದ್ಧ ವ್ಯಕ್ತಪಡಿಸಿದೆ.

ಅತಿಕ್ರಮಣ ವಿರೋಧಿ ಕ್ರಮ

ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ಇಂದು ನಡೆದ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಎಎಪಿ ಶಾಸಕ ಕುಲದೀಪ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದರುತು. ಬಳಿಕ ಮಾತನಾಡಿದ ಅವರು, "ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಎಂಸಿಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದೆ.

AAP Protest Against Illegal Building Demolition Drive

ಅವರ ಮನೆ ಮತ್ತು ಅಂಗಡಿಗಳನ್ನು ತೆಗೆಯುವ ಉದ್ದೇಶ ಹೊಂದಿರುವ ಸರ್ಕಾರ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದರೆ, ಈ ಜನರ ಬಳಿ ಮಾನ್ಯ ದಾಖಲೆಗಳಿವೆ. ಅದನ್ನು ಪರಿಶೀಲಿಸಲಿಸಿ. ನಾವು ಅವರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ'' ಎಂದು ಅವರು ಹೇಳಿದ್ದಾರೆ.

ಆಪ್ ಪಂಜಾಬ್‌ನಲ್ಲೂ ಅಕ್ರಮ ಕಟ್ಟ ತೆರವು ಕಾರ್ಯಚರಣೆ

ಆಮ್ ಆದ್ಮಿ ಪಕ್ಷದ ಪಂಜಾಬ್ ಸರ್ಕಾರ ಪಂಜಾಬ್‌ನಲ್ಲಿನ ಅತಿಕ್ರಮಣವನ್ನು ತೆಗೆದುಹಾಕುವ ಅಭಿಯಾನವನ್ನು ಪ್ರಾರಂಭಿಸಿದೆ. ಹೀಗಿರುವಾಗ ಆಮ್ ಆದ್ಮಿ ಪಕ್ಷ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ.

AAP Protest Against Illegal Building Demolition Drive

ದೆಹಲಿಯಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಕ್ರಮದಿಂದ ಎಎಪಿ ಅಸಮಾಧಾನಗೊಂಡಿದ್ದು, ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಆದರೆ ಪಂಜಾಬ್‌ನಲ್ಲಿ ಭಗವಂತ್ ಮಾನ್ ಅವರೇ ಸಾವಿರಾರು ಎಕರೆ ಭೂಮಿ ಒತ್ತುವರಿಯನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗಳು ಬಿಜೆಪಿಯಿಂದ ಎದ್ದಿವೆ. ಪಂಜಾಬ್‌ನ ಜನರು ಸ್ವತಃ ಅತಿಕ್ರಮಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಎಎಪಿ ಹ್ಯಾಂಡಲ್‌ನಲ್ಲಿ ಹೇಳಲಾಗಿದೆ ಎಂದು ಬಿಜೆಪಿ ತಿಳೀಸಿದೆ.

(ಒನ್ಇಂಡಿಯಾ ಸುದ್ದಿ)

English summary
AAP legislators today protested against the evacuation of Delhi's illegal buildings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X