ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ಶಾಸಕ ಅಮಾನತುಲ್ಲಾ ಖಾನ್‌ರನ್ನು ಬಂಧಿಸಿದ ಭ್ರಷ್ಟಾಚಾರ ನಿಗ್ರಹ ದಳ

|
Google Oneindia Kannada News

ನವದೆಹಲಿ, ಸೆ.16: ದೆಹಲಿ ವಕ್ಫ್‌ ಬೋರ್ಡ್ ನಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂಬ ಎರಡು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾಖಾನ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಎರಡು ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ ಶುಕ್ರವಾರ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಿದರು. ನಂತರ ದಾಳಿಗಳನ್ನು ನಡೆಸಲಾಗಿತ್ತು. ಈಗ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಸಹಾಯಕರಿಂದ ಅಕ್ರಮ ಶಸ್ತ್ರಾಸ್ತ್ರ, 12 ಲಕ್ಷ ರೂ. ವಶಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಸಹಾಯಕರಿಂದ ಅಕ್ರಮ ಶಸ್ತ್ರಾಸ್ತ್ರ, 12 ಲಕ್ಷ ರೂ. ವಶ

2020ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆಪ್ ಶಾಸಕರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ವೇಳೆ ಖಾನ್‌ಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿ ನಡೆದಿದೆ.

ಅಕ್ರಮವಾಗಿ ವಕ್ಫ್ ಮಂಡಳಿಯಲ್ಲಿ 32 ಜನರ ನೇಮಕ!

ಅಕ್ರಮವಾಗಿ ವಕ್ಫ್ ಮಂಡಳಿಯಲ್ಲಿ 32 ಜನರ ನೇಮಕ!

"ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುವಾಗ ಎಲ್ಲಾ ನಿಯಮಗಳು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಭ್ರಷ್ಟಾಚಾರ ಆರೋಪಗಳೊಂದಿಗೆ 32 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ" ಎಂದಿದೆ.

"ದೆಹಲಿ ವಕ್ಫ್ ಮಂಡಳಿಯ ಆಗಿನ ಸಿಇಒ ಅಂತಹ ಅಕ್ರಮ ನೇಮಕಾತಿ ವಿರುದ್ಧ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು. ಜೊತೆಗೆ ಜ್ಞಾಪಕ ಪತ್ರವನ್ನು ನೀಡಿದ್ದರು" ಎಂದು ಭ್ರಷ್ಟಾಚಾರ ನಿಗ್ರಹ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಭ್ರಷ್ಟಾಚಾರ ನಿಗ್ರಹ ಘಟಕವು "ತನ್ನ ಶೋಧ ತಂಡದ ಮೇಲೆ ಅಮಾನತುಲ್ಲಾ ಖಾನ್ ಅವರ ಸಂಬಂಧಿಕರು ಮತ್ತು ಇತರ ಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ" ಎಂದು ಆರೋಪಿಸಿದೆ.

ಪರವಾನಗಿ ಇಲ್ಲದ ಎರಡು ಶಸ್ತ್ರಾಸ್ತ್ರ ವಶ

ಪರವಾನಗಿ ಇಲ್ಲದ ಎರಡು ಶಸ್ತ್ರಾಸ್ತ್ರ ವಶ

ಶುಕ್ರವಾರ ಎಸಿಬಿ ನಡೆಸಿದ ದಾಳಿಯಲ್ಲಿ 24 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದೆ. ಜೊತೆಗೆ ಎರಡು ಅಕ್ರಮ ಮತ್ತು ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತು ಅವರ ವ್ಯಾಪಾರ ಪಾಲುದಾರ ಹಮೀದ್ ಅಲಿ ಖಾನ್ ಮಸೂದ್ ಉಸ್ಮಾನ್ ಅವರ ಹಲವಾರು ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿತು. ದಾಳಿಯ ವೇಳೆ ಅಧಿಕಾರಿಗಳು ಪರವಾನಗಿ ಪಡೆಯದ ಶಸ್ತ್ರಾಸ್ತ್ರ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

ಹೊಸ ವಕ್ಫ್ ಬೋರ್ಡ್ ಕಚೇರಿ ನಿರ್ಮಿಸಿದಕ್ಕಾಗಿ ನೋಟಿಸ್!

ಹೊಸ ವಕ್ಫ್ ಬೋರ್ಡ್ ಕಚೇರಿ ನಿರ್ಮಿಸಿದಕ್ಕಾಗಿ ನೋಟಿಸ್!

ಕೇಂದ್ರ ಸರ್ಕಾರ ಮತ್ತು ಎಎಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಬೆನ್ನಲ್ಲೇ ಆಪ್ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿವೆ. ಈ ದಾಳಿ ನಡೆದ ಇತ್ತೀಚಿನವರಲ್ಲಿ ಎಎಪಿ ನಾಯಕ ಅಮಾನತುಲ್ಲಾ ಖಾನ್ ಸೇರ್ಪಡೆಯಾಗಿದ್ದಾರೆ.

ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷರಾದ ಅಮಾನತುಲ್ಲಾ ಖಾನ್, ಎಸಿಬಿ ನೋಟಿಸ್ ಬಗ್ಗೆ ಕಳೆದ ರಾತ್ರಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ತಾವು ಹೊಸ ವಕ್ಫ್ ಬೋರ್ಡ್ ಕಚೇರಿಯನ್ನು ನಿರ್ಮಿಸಿದ ಕಾರಣ ತನಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಶಾಸಕ ಖಾನ್ ವಿರುದ್ಧ ತನಿಖೆಗೆ ಅಡ್ಡಿಪಡಿಸಿದ ಆರೋಪ

ಶಾಸಕ ಖಾನ್ ವಿರುದ್ಧ ತನಿಖೆಗೆ ಅಡ್ಡಿಪಡಿಸಿದ ಆರೋಪ

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ವರದಿ ಸಲ್ಲಿಸಿದ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ಶಾಖೆ, ಖಾನ್ ಅವರಿಗೆ ನೋಟಿಸ್ ಕಳುಹಿಸಿತ್ತು.


ಈ ಹಿಂದೆ, ಎಸಿಬಿ ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ಗೆ ಪತ್ರ ಬರೆದು, ಖಾನ್ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಗಳನ್ನು "ಬೆದರಿಸುವ" ಮೂಲಕ ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂದಿತ್ತು. ಈ ಆರೋಪದ ಮೇಲೆ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿತ್ತು.

2016ರಲ್ಲಿದಾಖಲಾಗಿದ್ದ ಪ್ರಕರಣದಲ್ಲಿ ದೆಹಲಿ ವಕ್ಫ್ ಮಂಡಳಿ ಅಧ್ಯಕ್ಷರನ್ನು ವಿಚಾರಣೆಗೆ ಒಳಪಡಿಸಲು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಸಿಬಿಐಗೆ ಅನುಮತಿ ನೀಡಿದ್ದರು.

ನಿಯಮಗಳು, ನಿಬಂಧನೆಗಳು ಮತ್ತು ಕಾನೂನಿನ ಉದ್ದೇಶಪೂರ್ವಕ ಮತ್ತು ಕ್ರಿಮಿನಲ್ ಉಲ್ಲಂಘನೆ, ಸ್ಥಾನದ ದುರುಪಯೋಗ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡುವುದು ಸೇರಿದ ಅಪರಾಧಗಳಿಗಾಗಿ ಆಗಿನ ವಕ್ಫ್ ಬೋರ್ಡ್ ಸಿಇಒ ಮೆಹಬೂಬ್ ಆಲಂ ವಿರುದ್ಧವೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ದೆಹಲಿ ಸರ್ಕಾರದ ಕಂದಾಯ ಇಲಾಖೆಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಪ್ರಧಾನ ಕಛೇರಿ) ನವೆಂಬರ್ 2016 ರಲ್ಲಿ ದೆಹಲಿ ವಕ್ಫ್ ಬೋರ್ಡ್‌ನಲ್ಲಿ ಅಸ್ತಿತ್ವದಲ್ಲಿರುವ ಮತ್ತು ಅಸ್ತಿತ್ವದಲ್ಲಿಲ್ಲದ ವಿವಿಧ ಹುದ್ದೆಗಳಿಗೆ ಅಮಾನತುಲ್ಲಾ ಖಾನ್ ಅವರು "ನಿರಂಕುಶ ಮತ್ತು ಕಾನೂನುಬಾಹಿರ" ನೇಮಕಾತಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.

English summary
Delhi Waqf Board case: AAP MLA Amanatullah Khan Arrested After Anti-Corruption Raids on illegal appointments in the Delhi Waqf Board. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X