ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಅಂಧಃಪತನ ಕಂಡ ಆಮ್ ಆದ್ಮಿ ಸಚಿವ

By Srinath
|
Google Oneindia Kannada News

aap-how-much-modi-payed-you-bharti-asks-journo-criticises-dcw
ನವದೆಹಲಿ, ಜ.25: ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದೇ ಆಮ್ ಆದ್ಮಿ ಪಕ್ಷಕ್ಕೆ ತಲೆ ತಿರುಗಲಾರಂಭಿಸಿದೆಯಾ? ಗೊತ್ತಿಲ್ಲ, ದಿಲ್ಲಿ ಜನರೇ ಹೇಳಬೇಕು. ಆದರೆ ಈ ಮಧ್ಯೆ ಎಎಪಿ ಸರಕಾರದ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ದೆಹಲಿಯ ಮಾಧ್ಯಮಗಳು ಮತ್ತು ಮಹಿಳಾ ಆಯೋಗದ ಸದಸ್ಯರ ಮೇಲೆ ಹರಿಹಾಯ್ದಿದ್ದಾರೆ. ನರೇಂದ್ರ ಮೋದಿಯಿಂದ ದುಡ್ಡು ತೆಗೆದುಕೊಂಡು ನನ್ನ ವಿರುದ್ಧ ಬರೆಯುತ್ತಿದ್ದೀರಿ ಎಂದು ಸುದ್ದಿಗಾರರ ಮೇಲೆ ಮುಗಿಬಿದ್ದ ಭಾರ್ತಿ, ಮಹಿಳಾ ಆಯೋಗದ Delhi Commission for Women (DCW) ಮುಖ್ಯಸ್ಥೆ ಕಾಂಗ್ರೆಸ್ ಪಕ್ಷದ ಸದಸ್ಯೆ ಎಂದು ಜರಿದಿದ್ದಾರೆ.

ಕಾನೂನು ಸಚಿವರ ದಾಖಲೆ!:
ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳೂ ಆಗಿಲ್ಲ. ಆಗಲೇ ಆಪ್ ಸರಕಾರದ ಕಾನೂನು ಸಚಿವರ ವಿರುದ್ಧವೇ ಮೂರು FIRಗಳು ದಾಖಲಾಗಿವೆ. ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ.

'DCW ಅಧ್ಯಕ್ಷೆ ಬರ್ಕಾ ಸಿಂಗ್ ಕಾಂಗ್ರೆಸ್ ಸದಸ್ಯೆ. ಅವರು ರಾಜಕೀಯ ಮಾಡಲು ಬಂದಿದ್ದಾರೆ. ಹಿಂದಿನ ಸರಕಾರದ ಅವಧಿ ಮುಗಿಯುತ್ತಿದ್ದಂತೆ ಅವರು (ಕಾಂಗ್ರೆಸ್ಸಿನ ಮಾಜಿ ಶಾಸಕಿ ಬರ್ಕಾ) ರಾಜೀನಾಮೆ ನೀಡಬೇಕಿತ್ತು. ಇನ್ನೂ ಅಧಿಕಾರದಲ್ಲಿದ್ದಾರೆ. ನನ್ನ ವಿರುದ್ಧದ ವರದಿಗಳೆಲ್ಲವೂ ಆಧಾರರಹಿತ. ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೋರ್ಟಿಗೆ ಎಳೆಯುತ್ತೇನೆ' ಎಂದು ಕಾನೂನು ಸಚಿವ ಭಾರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಂತದಲ್ಲಿ ಭಾರ್ತಿ ಯಾರನ್ನು ಉದ್ದೇಶಿಸಿ ಆರೋಪ ಮಾಡುತ್ತಿದ್ದಾರೋ ತಿಳಿಯದೆ, ಗೊಂದಲಕ್ಕೀಡಾದ ಸುದ್ದಿಗಾರರು ಯಾರ ಬಗ್ಗೆ ಹಾಗೆಲ್ಲಾ ಮಾತನಾಡುತ್ತಿದ್ದೀರಿ ಎಂದು ಕೇಳಿದ್ದೇ ತಡ 'ಏನು ನೀವೆಲ್ಲಾ ಮೋದಿಯಿಂದ ದುಡ್ಡು ತೆಗೆದುಕೊಂಡು ನನ್ನ ವಿರುದ್ಧ ಬರೆಯುತ್ತಿದ್ದೀರಾ?' ಎಂದು ಎದುರಿಗಿದ್ದ ಪತ್ರಕರ್ತರನ್ನೇ ತರಾಟೆಗೆ ತೆಗೆದುಕೊಂಡರು.

ಕೊನೆಗೂ ಕ್ಷಮೆ ಯಾಚಿಸಿದ ಸಚಿವ ಭಾರ್ತಿ:
ತಾಜಾ ವರದಿಗಳ ಪ್ರಕಾರ ಪತ್ರಕರ್ತರು ಮತ್ತು ಮಹಿಳಾ ಆಯೋಗದ ಅಧ್ಯಕ್ಷೆ ಮೇಲೆ ಕ್ಷುಲ್ಲಕ ಆರೋಪ ಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ಸಚಿವ ಸೋಮನಾಥ ಭಾರ್ತಿ ತಿಳಿಸಿದ್ದಾರೆ. ಈ ಮಧ್ಯೆ ಆಮ್ ಆದ್ಮಿ ಪಕ್ಷವು ಭಾರ್ತಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪಕ್ಷವು ಅವರ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
Aam Aadmi Party Minister asks journos how much they paid by Modi- Also criticises DCW Chief Barka. When asked if he was planning to resign from the cabinet on moral grounds, the law minister asked the journalist, "How much money were you paid by (BJP's PM nominee Narendra) Modiji?"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X