ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆಯಲ್ಲಿ 'ಆಮ್‌ ಆದ್ಮಿ'ಯೇ ಕುಬೇರ

|
Google Oneindia Kannada News

ನವದೆಹಲಿ, ಜನವರಿ 23: ಜನಸಾಮಾನ್ಯರ ಪಕ್ಷ ಎಂದು ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕುಬೇರ ಅಭ್ಯರ್ಥಿಗಳನ್ನೇ ಹೊಂದಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಟಾಪ್ 5 ಶ್ರೀಮಂತರಲ್ಲಿ ನಾಲ್ವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ ಎನ್ನುವುದು ಆಶ್ಚರ್ಯಕರ ವಿಚಾರ.

ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು

ಇವರಲ್ಲಿ 292 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆಮ್‌ ಆದ್ಮಿ ಪಕ್ಷದ ಧರಂಪಾಲ್ ಲಾಕ್ರಾ ಅತಿ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.

aap

ದೆಹಲಿಯ ಮುಂಡ್ಕಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ಲಕ್ರಾ ಸುಮಾರು 292 ಕೋಟಿರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಹೆಸರಲ್ಲಿ 3.24 ಕೋಟಿ ಮೌಲ್ಯದ ಚರಾಸ್ತಿ ಇದ್ದರೆ , ಪತ್ನಿ ಹೆಸರಲ್ಲಿ 13.57 ಲಕ್ಷ ರೂ ಮೌಲ್ಯದ ಚರಾಸ್ತಿ ಇದೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಸ್ತಿ ಏರಿಕೆ ಎಷ್ಟು?ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಸ್ತಿ ಏರಿಕೆ ಎಷ್ಟು?

ಲಾಕ್ರಾ ಬಳಿ 243 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಲ್ಲಿ 43 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ನಾಮಪತ್ರದಲ್ಲಿ ತಿಳಿಸಿದ್ದಾರೆ.

ಇನ್ನು ಆರ್‌ಕೆ ಪುರಂನಲ್ಲಿ ಸ್ಪರ್ಧಿಸಿರುವ ಪ್ರಮೀಳಾ ಟೋಕಾಸ್ 80 ಕೋಟಿಗೂ ಅಧಿಕ ಮಲ್ಯದ ಆಸ್ತಿ ಹೊಂದಿದ್ದು, ಇವರೂ ಕೂಡ ಆಮ್‌ಆದ್ಮಿ ಪಕ್ಷದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ಮೂರನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಸಿಂಗ್ ಇದ್ದು ಸುಮಾರು 70 ಕೋಟಿ ಆಸ್ತಿ ಹೊಂದಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಆಮ್‌ಆದ್ಮಿ ಪಕ್ಷದ ಧನ್ವಂತಿ ಚಂಡೇಲಾ ಸುಮಾರು 55 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಇವರು ರಜೌರಿ ಗಾರ್ಡನ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಐದನೇ ಸ್ಥಾನದಲ್ಲಿರುವ ರಾಜಕುಮಾರಿ ದಿಲ್ಲೋನ್ ಹರಿನಗರ ಆಪ್ ಅಭ್ಯರ್ಥಿಯಾಗಿದ್ದು, 51 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಬಿಜೆಪಿ ಮಟ್ಟಿಗೆ ಸಂಜಯ್ ಗೋಯೆಲ್ ಶ್ರೀಮಂತ ಅಭ್ಯರ್ಥಿಯಾಗಿದ್ದು ಸುಮಾರು 44 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಇವರು ಶೆಹದರಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

English summary
AAP Candidates are the richest in Delhi Assembly Elections In List of top 5 4 are from Aap Admi Party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X