ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Most Stylish Politician: ಎಎಪಿ ಶಾಸಕ ರಾಘವ್‌ ಚಡ್ಡಾಗೆ ಪ್ರಶಸ್ತಿ

|
Google Oneindia Kannada News

ನವದೆಹಲಿ, ನವೆಂಬರ್‌ 29: ಅತ್ಯಂತ ಸ್ಟೈಲಿಶ್‌ ಆದ ರಾಜಕಾರಣಿ (Most Stylish Politician) ಎಂಬ ಪ್ರಶಸ್ತಿಯು ಆಮ್‌ ಆದ್ಮಿ ಪಕ್ಷದ ಶಾಸಕ ರಾಘವ್‌ ಚಡ್ಡಾರವರ ಮುಡಿಗೇರಿದೆ. ಇಂಡಿಯಾ ಫ್ಯಾಶನ್ ಪ್ರಶಸ್ತಿಯಲ್ಲಿ ಈ ಅತ್ಯಂತ ಸ್ಟೈಲಿಶ್‌ ಆದ ರಾಜಕಾರಣಿ ಎಂಬ ಪ್ರಶಸ್ತಿಯನ್ನು ರಾಘವ್‌ ಚಡ್ಡಾ ಪಡೆದುಕೊಂಡಿದ್ದಾರೆ.

ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ತನ್ನ ಪಕ್ಷದ ಶಾಸಕ ರಾಘವ್‌ ಚಡ್ಡಾಗೆ ಅಭಿನಂದನೆ ತಿಳಿಸಿ ಟ್ವೀಟ್‌ ಮಾಡಿದ್ದಾರೆ. "ನಮ್ಮ ಪಕ್ಷದಲ್ಲಿ ಅತೀ ಹೆಚ್ಚು ಸ್ಟೈಲಿಶ್‌ ಆದ ರಾಜಕಾರಣಿ ಕೂಡಾ ಇದ್ದಾರೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ದೆಹಲಿ ವಿಧಾನಸಭೆಯ ಸಮಿತಿ ಸಮನ್ಸ್ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ದೆಹಲಿ ವಿಧಾನಸಭೆಯ ಸಮಿತಿ ಸಮನ್ಸ್

ಈ ಬಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, "ನಮ್ಮ ಪಕ್ಷದಲ್ಲಿ ಪ್ರಾಮಾಣಿಕವಾದ, ಅತ್ಯಂತ ಸಮರ್ಪಿತರಾದ ಹಾಗೂ ದೇಶ ಭಕ್ತಿಯ ನಾಯಕರು ಇದ್ದಾರೆ. ಈಗ ಅತ್ಯಂತ ಸ್ಟೈಲಿಶ್‌ ಆದ ರಾಜಕಾರಣಿ ಕೂಡಾ ಇದ್ದಾರೆ. ಅಭಿನಂದನೆಗಳು ರಾಘವ್‌ ಚಡ್ಡಾ," ಎಂದು ತಿಳಿಸಿದ್ದಾರೆ.

Aam Aadmi Party MLA Raghav Chadha Wins Most Stylish Politician Award

Most Stylish Politician ರಾಘವ್‌ ಚಡ್ಡಾ

ಎಎಪಿಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಿರುವ 33 ವರ್ಷ ಪ್ರಾಯದ ರಾಘವ್‌ ಚಡ್ಡಾಗೆ ಅತ್ಯಂತ ಸ್ಟೈಲಿಶ್‌ ಆದ ರಾಜಕಾರಣಿ (Most Stylish Politician) ಎಂಬ ಪ್ರಶಸ್ತಿಯು ಲಭಿಸಿದೆ. ಈ ಬಗ್ಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಘವ್‌ ಚಡ್ಡಾ ತಿಳಿಸಿದ್ದಾರೆ. "ನನಗೆ ಇಂಡಿಯನ್ ಫ್ಯಾಶನ್ ಅವಾರ್ಡ್ಸ್ 2021 ರಲ್ಲಿ ಅತ್ಯಂತ ಸ್ಟೈಲಿಶ್‌ ರಾಜಕಾರಣಿ ಎಂಬ ಪ್ರಶಸ್ತಿ ಲಭಿಸಿದೆ," ಎಂದು ತಿಳಿಸಿದ್ದಾರೆ.

ರಾಘವ್ ಚಡ್ಡಾ ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರು ಆಗಿದ್ದಾರೆ. ಹಾಗೆಯೇ ದೆಹಲಿಯ ರಾಜಿಂದರ್ ನಗರದ ಶಾಸಕರು ಆಗಿದ್ದಾರೆ. ಎಎಪಿಯ ಪಂಜಾಬ್‌ ಸಹ ಉಸ್ತುವಾರಿಯೂ ಹೌದು. ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಿಂದಾಗಿ ಅಲ್ಲಿ ಪಕ್ಷದ ಪ್ರಚಾರ ಕಾರ್ಯದಲ್ಲಿ ರಾಘವ್ ಚಡ್ಡಾ ತೊಡಗಿದ್ದಾರೆ. ರಾಷ್ಟ್ರೀಯ ವಕ್ತಾರ ಮತ್ತು ಎಎಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಆಗಿರುವ ರಾಘವ್ ಚಡ್ಡಾ ಈಗ ಪ್ರಶಸ್ತಿಯನ್ನು ಪಡೆದಿದ್ದಾರೆ.

ರೈತರಿಗೆ ಎಂಎಸ್‌ಪಿ ನೀಡಿ ಎಂದ ಎಎಪಿ ನಾಯಕ ರಾಘವ್ ಚಡ್ಡಾ

ರಾಜಕೀಯದಲ್ಲಿ ಸಕ್ರಿಯರಾಗಿರುವ ರಾಘವ್ ಚಡ್ಡಾ, ರೈತರಿಗೆ ಎಂಎಸ್‌ಪಿ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. "2011 ರಲ್ಲಿ ಗ್ರಾಹಕ ವ್ಯವಹಾರಗಳ ವರ್ಕಿಂಗ್ ಗ್ರೂಪ್ ಅನ್ನು ರಚಿಸಲಾಯಿತು ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವ ವಹಿಸಿದ್ದರು. ರೈತರಿಗೆ ಎಂಎಸ್‌ಪಿ ಗ್ಯಾರಂಟಿ ಸಿಗಬೇಕು ಎಂದು ಆ ಸಮಿತಿ ಹೇಳಿತ್ತು. ಆದರೆ ಇಂದಿ ಪ್ರಧಾನ ಮಂತ್ರಿ ಅಂದಿನ ಮುಖ್ಯಮಂತ್ರಿಯವರ ಅಭಿಪ್ರಾಯವನ್ನು ಒಪ್ಪುತ್ತಿಲ್ಲ," ಎಂದು ಟೀಕೆ ಮಾಡಿದ್ದಾರೆ.

"ಅಂದು ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಎಂಎಸ್‌ಪಿಯನ್ನು ಏಕೆ ಒಪ್ಪಲ್ಲ. ಅದಕ್ಕೆ ಉತ್ತರ ನೀಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ. ರೈತರಿಗೆ ಎಂಎಸ್‌ಪಿ ಖಾತರಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಎಂಎಸ್‌ಪಿಯ ಕಾನೂನು ಹಕ್ಕನ್ನು ಎಲ್ಲಾ ರೈತರಿಗೂ ನೀಡಬೇಕು," ಎಂದು ಎಎಪಿ ಶಾಸಕ ರಾಘವ್‌ ಚಡ್ಡಾ ಆಗ್ರಹ ಮಾಡಿದ್ದಾರೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ

ಮುಂದಿನ ವರ್ಷ ಪಂಜಾಬ್‌, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ತನ್ನ ಸರ್ಕಾರವನ್ನು ರಚನೆ ಮಾಡಿಕೊಂಡಿರುವ ಆಮ್‌ ಆದ್ಮಿ ಪಕ್ಷವು ಈ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ರಾಜಕೀಯ ವಿಸ್ತಾರವನ್ನು ಅಧಿಕ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಎಲ್ಲಾ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.

Recommended Video

ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada

English summary
Aam Aadmi Party MLA Raghav Chadha Wins Most Stylish Politician Award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X