ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್‌ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ ವಿಚಾರಣೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 23: ಬ್ಯಾಂಕ್ ಖಾತೆ, ಶಾಲಾ-ಕಾಲೇಜು ದಾಖಲಾತಿ, ವಿವಿಧ ಸರ್ಕಾರಿ ಸೇವೆಗಳ ನಂತರ ಈಗ ಫೇಸ್‌ಬುಕ್‌ಗೂ ಆಧಾರ್ ಕಾರ್ಡ್‌ ಲಿಂಕ್ ಮಾಡುವ ಸಮಯ ಬಂದಿದೆ.

ಹೌದು, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ ನಲ್ಲಿ ವಿಚಾರಣೆ ನಡೆಯಲಿದೆ.

ಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆಸೋಶಿಯಲ್ ಮಿಡಿಯಾಕ್ಕೆ ಜನವರಿ 15 ರೊಳಗೆ ಕಡಿವಾಣ, ಸುಪ್ರೀಂ ಗೆ ಕೇಂದ್ರದ ಭರವಸೆ

ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಮಾಡುವಂತೆ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಮಂಗಳವಾರ ಸುಪ್ರೀಂಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಈ ಅರ್ಜಿಗಳನ್ನು ಒಟ್ಟಾರೆಯಾಗಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮಾಡಲಾಗುತ್ತದೆ.

Aadhaar Link To Social Media: Application Transferred To Supreme Court

ಎಲ್ಲ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸುವಂತೆ ಫೇಸ್‌ಬುಕ್ ಸಲ್ಲಿಸಿದ್ದ ಮನವಿಯನ್ನು ಮನ್ನಿಸಿ ಎಲ್ಲ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.

ಎಲ್ಲ ಪ್ರಕರಣಗಳನ್ನು 2020ರ ಜನವರಿ ಕೊನೆಯ ವಾರದೊಳಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎದುರು ಇರಿಸುವಂತೆ ಸೂಚಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ಸೂಕ್ತ ಪೀಠಕ್ಕೆ ವಹಿಸಲಿದ್ದಾರೆ, ಆ ನಂತರ ವಿಚಾರಣೆ ಆರಂಭವಾಗಲಿದೆ.

ಆಧಾರ್- ವೋಟರ್ ಐಡಿ ಲಿಂಕ್: ರಾಜಕಾರಣಿಗಳಿಗೆ ಅಸಲಿ ಪರೀಕ್ಷೆ ಇನ್ನು ಶುರುಆಧಾರ್- ವೋಟರ್ ಐಡಿ ಲಿಂಕ್: ರಾಜಕಾರಣಿಗಳಿಗೆ ಅಸಲಿ ಪರೀಕ್ಷೆ ಇನ್ನು ಶುರು

ಆಧಾರ್ ಲಿಂಕ್‌ ಮಾಡುವುದರಿಂದ ಬಳಕೆದಾರರ ಖಾಸಗಿತನ ಬಹಿರಂಗವಾಗುತ್ತದೆ ಎಂಬ ವಾದ ಮಂಡಿಸಲಾಯಿತು. ಆದರೆ ಈ ವಿಷಯಗಳನ್ನು ವಿಸ್ತೃತವಾಗಿ ಚರ್ಚಿಸಲು ಸುಪ್ರೀಂಕೋರ್ಟ್‌ಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ.

ಕೆಲವು ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳ ಬಗ್ಗೆ ಹೇಳಿಕೆ ನೀಡಿದ್ದು, 'ಅಂತರ್ಜಾಲವು ಪ್ರಜಾಪ್ರಭುತ್ವಕ್ಕೆ ಹಾನಿಯಾಗಿ ರೂಪುಗೊಳ್ಳುತ್ತಿದೆ, ಶೀಘ್ರವಾಗಿ ಅಂತರ್ಜಾಲ ಬಳಕೆಗೆ ಮಾರ್ಗಸೂಚಿ ಅನ್ವಯಿಸಲಾಗುವುದು' ಎಂದು ಹೇಳಿದೆ.

English summary
All applications in high courts about linking Aadhaar to social media is transferred to Supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X