ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿಡಿ, ಈ 10 ವ್ಯವಹಾರಗಳಿಗೆ ಆಧಾರ್ ಕಡ್ಡಾಯ

|
Google Oneindia Kannada News

ನವದೆಹಲಿ, ಆಗಸ್ಟ್ 11: "ಶ್ರೀಸಾಮಾನ್ಯನ ಅಧಿಕಾರ" ಎಂಬ ಒಕ್ಕಣೆಯೊಂದಿಗೆ ಜಾರಿಗೆ ಬಂದ ಆಧಾರ್ ಕಾರ್ಡ್ ಇದೀಗ ಬಹುತೇಕ ಎಲ್ಲ ಸಾರ್ವಜನಿಕ ವ್ಯವಹಾರಕ್ಕೂ ಕಡ್ಡಾಯವಾಗಿದೆ.

ಅಪನಗದೀಕರಣದ ನಂತರ ಆದಾಯ ತೆರಿಗೆ ಪಾವತಿಸುವವರು ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಿಸಬೇಕೆಂಬ ಕಡ್ಡಾಯ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಜುಲೈ 1, 2017 ರೊಳಗೆ ಆಧಾರ್ ನೊಂದಿಗೆ ಲಿಂಕ್ ಆಗಿರದ 11.44 ಲಕ್ಷ ಪ್ಯಾನ್ ಕಾರ್ಡ್ ಗಳನ್ನು ಈಗಾಗಲೇ ರದ್ದುಮಾಡಲಾಗಿದೆ.

ಮತದಾರರ ಚೀಟಿಗೂ ಆಧಾರ್ ನಂಬರ್ ಜೋಡಣೆ?ಮತದಾರರ ಚೀಟಿಗೂ ಆಧಾರ್ ನಂಬರ್ ಜೋಡಣೆ?

ಇಷ್ಟೇ ಅಲ್ಲದೆ, ಇನ್ನು ಮೇಲೆ ಹಣಕಾಸು ಮಾರುಕಟ್ಟೆಯ ವ್ಯವಹಾರಗಳಾದ ಷೇರು ಮತ್ತು ಮ್ಯೂಚುವಲ್ ಫಂಡ್ ಖರೀದಿಗೂ ಆಧಾರ್ ಅನ್ನು ಕಡ್ಡಾಯ ಮಾಡಲು ಸರ್ಕಾರ ಚಿಂತಿಸುತ್ತಿದೆ. ಒಟ್ಟಿನಲ್ಲಿ ಆಧಾರ್ ಇಲ್ಲದವರು ಭಾರತೀಯರು ಹೌದೇ, ಅಲ್ಲವೇ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ನಮ್ಮ ಸಕಲ ಕಾರ್ಯಗಳಿಗೂ ಆಧಾರ್ ಕಡ್ಡಾಯವಾಗಿದೆ.

ಷೇರು, ಮ್ಯೂಚುವಲ್ ಫಂಡ್ ಕೊಳ್ಳುವುದಕ್ಕೂ ಆಧಾರ್ ಕಡ್ಡಾಯ?ಷೇರು, ಮ್ಯೂಚುವಲ್ ಫಂಡ್ ಕೊಳ್ಳುವುದಕ್ಕೂ ಆಧಾರ್ ಕಡ್ಡಾಯ?

ಅಷ್ಟಕ್ಕೂ ಆಧಾರ್ ಕಡ್ಡಾಯವಾಗಿರುವ ಬಹುಮುಖ್ಯ 10 ಸಂಗತಿಗಳು ಯಾವುವು ಎಂಬುದಕ್ಕೆ ಉತ್ತರ ಇಲ್ಲಿದೆ. ಈ ಎಲ್ಲ ಕೆಲಸಗಳಿಗೂ ಆಧಾರ್ ಕಡ್ಡಾಯ. ಆಧಾರ್ ಕಾರ್ಡ್ ಇಲ್ಲದಿದ್ದರೆ ಈ ಕೆಳಗಿನ ಯಾವ ಸೌಲಭ್ಯವನ್ನೂ ವ್ಯಕ್ತಿ ಪಡೆಯುವುದಕ್ಕೆ ಸಾಧ್ಯವಿಲ್ಲ.

ಬ್ಯಾಂಕ್ ಖಾತೆ ತೆರೆಯುವುದಕ್ಕೆ

ಬ್ಯಾಂಕ್ ಖಾತೆ ತೆರೆಯುವುದಕ್ಕೆ

ಬ್ಯಾಂಕ್ ಖಾತೆ ತೆರೆಯುವುದಕ್ಕೆ ಆಧಾರ್ ಸಂಖ್ಯೆ ಕಡ್ಡಾಯ. ನಿಮ್ಮ ಆಧಾರ್ ಕಾರ್ಡಿನ ನಕಲಿ ಪ್ರತಿಯನ್ನು ಬ್ಯಾಂಕಿಗೆ ನೀಡಿದರೆ ಮಾತ್ರವೇ ಖಾತೆ ತೆರೆಯುವುದಕ್ಕೆ ಸಾಧ್ಯ. ಇದರೊಂದಿಗೆ 50,000 ರೂ. ಮೇಲ್ಪಟ್ಟ ಬ್ಯಾಂಕಿಂಗ್ ವ್ಯವಹಾರಗಳಿಗೂ ಆಧಾರ್ ನಂಬರ್ ನೀಡಲೇಬೇಕು.

ಆದಾಯ ತೆರಿಗೆ ಪಾವತಿಗೆ

ಆದಾಯ ತೆರಿಗೆ ಪಾವತಿಗೆ

ಆದಾಯ ತೆರಿಗೆ ಪಾವತಿಸುವುದಕ್ಕೂ ಆಧಾರ್ ಕಡ್ಡಾಯ ಎಂದು ಅಪನಗದೀಕರಣದ ನಂತರ ಸರ್ಕಾರ ಹೇಳಿದ್ದು, ಈ ವರ್ಷದಿಂದ ಇದನ್ನು ಜಾರಿಗೆ ತರಲಾಗಿದೆ.

ಕೊನೆ ದಿನಾಂಕದ ಬಳಿಕ ಐಟಿ ರಿಟರ್ನ್ಸ್ ಫೈಲ್ ಮಾಡೋದು ಹೇಗೆ?ಕೊನೆ ದಿನಾಂಕದ ಬಳಿಕ ಐಟಿ ರಿಟರ್ನ್ಸ್ ಫೈಲ್ ಮಾಡೋದು ಹೇಗೆ?

ಪ್ಯಾನ್ ಕಾರ್ಡ್ ಪಡೆಯುವುದಕ್ಕೆ

ಪ್ಯಾನ್ ಕಾರ್ಡ್ ಪಡೆಯುವುದಕ್ಕೆ

ಪ್ಯಾನ್ ಕಾರ್ಡ್ ಪಡೆಯುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಲೇಬೇಕು. ಆಧಾರ್ ಕಾರ್ಡ್ ಇಲ್ಲದವರಿಗೆ ಪ್ಯಾನ್ ಕಾರ್ಡ್ ಸಹ ನೀಡಲಾಗುವುದಿಲ್ಲ. ಅದಕ್ಕೆಂದೇ ಆದಾಯ ತೆರಿಗೆ ಪಾವತಿಸುವ ಪ್ರತಿಯೊಬ್ಬರೂ ತಮ್ಮ ಆಧಾರ್ ಕಾರ್ಡಿನೊಂದಿಗೆ ಪ್ಯಾನ್ ಕಾರ್ಡ್ ಜೋಡಿಸಬೇಕೆಂದು ಸರ್ಕಾರ ಆದೇಶಿಸಿತ್ತು.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಪಿಎಫ್ ಖಾತೆಗೆ

ಪಿಎಫ್ ಖಾತೆಗೆ

ಇಪಿಎಫ್ ಒ(ಕಾರ್ಮಿಕರ ಭವಿಷ್ಯ ನಿಧಿ) ಖಾತೆಗಳಿಗೂ ಆಧಾರ್ ಕಡ್ಡಾಯ. ಪಿಎಫ್ ಖಾತೆ ಹೊದಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಇಪಿಎಫ್ ಒ ನೀಡಲೇಬೇಕು.

ಸಿಮ್ ಕೊಳ್ಳುವುದಕ್ಕೆ

ಸಿಮ್ ಕೊಳ್ಳುವುದಕ್ಕೆ

ನೀವೇನಾದರೂ ಹೊಸ ಸಿಮ್ ಕೊಂಡುಕೊಳ್ಳಬೇಕೆಂದರೆ ಅಧಾರ ಸಂಖ್ಯೆ ನೀಡುವುದು ಕಡ್ಡಾಯ. ಈಗಾಗಲೇ ಇರುವ ಸಿಮ್ ಅನ್ನೂ ಆಧಾರ್ ಜೊತೆ ಲಿಂಕ್ ಮಾಡುವುದೂ ಕಡ್ಡಾಯ. ನಿಮ್ಮ ಸಿಮ್ ನ ಯಾವುದೇ ಸರ್ವಿಸ್ ಸೆಂಟರ್ ಗಳಿಗೆ ತೆರಳಿ ನಿಮ್ಮ ಆಧಾರ್ ಸಂಖ್ಯೆಯನ್ನು ಸಿಮ್ ಜೊತೆ ಲಿಂಕ್ ಮಾಡಬಹುದು.

ವಿದ್ಯಾರ್ಥಿ ವೇತನಕ್ಕೆ

ವಿದ್ಯಾರ್ಥಿ ವೇತನಕ್ಕೆ

ಕೇಂದ್ರ ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ಅಥವಾ ಆರ್ಥಿಕ ನೆರವಿನ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನೀಡಲೇಬೇಕು.

ಪಾಸ್ ಪೋರ್ಟ್ ಪಡೆಯುವುದಕ್ಕೆ

ಪಾಸ್ ಪೋರ್ಟ್ ಪಡೆಯುವುದಕ್ಕೆ

ಪಾಸ್ ಪೋರ್ಟ್ ಪಡೆಯುವುದಕ್ಕೂ ಆಧಾರ್ ಪ್ರತಿಯನ್ನು ನೀಡುವುದು ಕಡ್ಡಾಯ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ ಪೋರ್ಟ್ ಪಡೆಯುವವರು ಆಧಾರ್ ಕಾರ್ಡ್ ನೀಡದಿದ್ದಲ್ಲಿ ಅಂಥವರಿಗೆ ಪಾಸ್ ಪೋರ್ಟ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ರೈಲ್ವೇ ಟಿಕೆಟ್ ರಿಯಾಯಿತಿಗೆ

ರೈಲ್ವೇ ಟಿಕೆಟ್ ರಿಯಾಯಿತಿಗೆ

ರೈಲ್ವೇ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಪಡೆಯುವವರು ಆಧಾರ್ ಕಾರ್ಡ್ ನೀಡದಿದ್ದಲ್ಲಿ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ.

ಮಧ್ಯಾಹ್ನದ ಬಿಸಿಯೂಟಕ್ಕೆ

ಮಧ್ಯಾಹ್ನದ ಬಿಸಿಯೂಟಕ್ಕೆ

ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಹೊಂದಿರಲೇಬೇಕು.ಸದ್ಯಕ್ಕೆ ಆಧಾರ್ ಕಾರ್ಡ್ ಹೊಂದಿಲ್ಲದ ಮಕ್ಕಳಿಗೆ ಪರ್ಯಾಯ ಗುರುತಿನ ಚೀಟಿಯೊಂದನ್ನು ನೀಡುವ ಮೂಲಕ ಬಿಸಿಯೂಟ ನೀಡಲಾಗುತ್ತಿದೆಯಾದರೂ, ಆಧಾರ್ ಹೊಂದಿಲ್ಲದವರು ಶೀಘ್ರವೇ ಆಧಾರ್ ಕಾರ್ಡ್ ಮಾಡಿಸುವಂತೆ ಸರ್ಕಾರ ಹೇಳಿದ್ದು, ಕೆಲವೇ ದಿನಗಳಲ್ಲಿ ಇದನ್ನೂ ಕಡ್ಡಾಯಗೊಳಿಸಲಿದೆ.

ರೇಷನ್ ಪಡೆಯುವುದಕ್ಕೆ

ರೇಷನ್ ಪಡೆಯುವುದಕ್ಕೆ

ರೇಷನ್ ಸೌಲಭ್ಯ ಪಡೆಯುವವರು ತಮ್ಮ ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದಿದ್ದಲ್ಲಿ ಅಂಥವರ ರೇಷನ್ ಕಾರ್ಡ್ ಗೆ ಬೆಲೆ ಇರುವುದಿಲ್ಲ. ಆಧಾರ್ ಲಿಂಕ್ ಮಾಡದಿದ್ದಲ್ಲಿ ರೇಷನ್ ಸೌಲಭ್ಯ ಪಡೆಯುವುದಕ್ಕೂ ಸಾಧ್ಯವಿಲ್ಲ.

English summary
For opening an account in a bank, to pay income tax, to apply PAN card and passport, to avail benifit of EPFO, mid day meal, scholerships, ration card... each and every actions among these need an aadhaar card. Here are 10 actions you should know, where aadhaar is mandatory!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X