ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು

|
Google Oneindia Kannada News

ನವದೆಹಲಿ, ಜುಲೈ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸೊಸೊಡಿಯಾ ಅವರು ಬಿಜೆಪಿ ಮುಖಂಡರು ಹಾಗೂ ಪಕ್ಷದ ಘನತೆಗೆ ಕುಂದು ತಂದಿದ್ದಾರೆ ಎಂದು ಆರೋಪಿಸಿ ವಿಜೇಂದರ್ ಗುಪ್ತಾ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

'ಕೇಜ್ರಿವಾಲ್ ಕಳ್ಳ...' ದೆಹಲಿಯ ಬೀದಿಗಳಲ್ಲಿ ಹೀಗೊಂದು ಪೋಸ್ಟರ್!'ಕೇಜ್ರಿವಾಲ್ ಕಳ್ಳ...' ದೆಹಲಿಯ ಬೀದಿಗಳಲ್ಲಿ ಹೀಗೊಂದು ಪೋಸ್ಟರ್!

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ನನ್ನ ಕೊಲೆಯಗೆ ಯತ್ನಿಸುತ್ತಿದೆ. ದಿವಂಗತ ಪ್ರಧಾನಿ ಇಂಧಿರಾ ಗಾಂಧಿಯವರು ತಮ್ಮ ಭದ್ರತಾ ಸಿಬ್ಬಂದಿಯಿಂದಲೇ ಹತ್ಯೆಯಾದಂತೆ ಸಂಚು ರೂಪಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

 A Special Court in Delhi grants bail to Kejriwal and Sisodia

ಅಲ್ಲದೆ ಈ ಕುರಿತು ಕೇಜ್ರಿವಾಲ್ ಮತ್ತು ಸಿಸೊಡಿಯಾ ನೀಡಿದ್ದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೃತ್ತಪತ್ರಿಕೆಗಳಲ್ಲಿ ವರದಿಯಾಗಿತ್ತು. ಕೇಜ್ರಿವಾಲ್ ಮತ್ತು ಸಿಸೊಡಿಯಾ ಅವರ ಈ ಹೇಳಿಕೆಯಿಂದ ಬಿಜೆಪಿ ಹಾಗೂ ಪಕ್ಷದ ಮುಖಂಡರ ಘನತೆಗೆ ಕುಂದುಂಟಾಗಿದೆ.

ಈ ಕುರಿತು ಕ್ಷಮೆ ಯಾಚಿಸಬೇಕು ಹಾಗೂ ಒಂದು ಕೋಟಿ ರೂ ನೀಡಿ ಮಾನನಷ್ಟ ಭರಿಸಬೇಕು ಜೊತೆಗೆ ದಾವೆಯ ಖರ್ಚು ವೆಚ್ಚಗಳನ್ನು ಭರಿಸಬೇಕು ಎಂದು ವಿಜೇಂದರ್ ಗುಪ್ತಾ ಹೇಳಿದ್ದರು. ಇದೀಗ ವಿಶೇಷ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿದ್ದು, 10 ಸಾವಿರ ರೂಗಳ ಜಾಮೀನು ಕರಾರನ್ನು ನೀಡಬೇಕಾಗಿದೆ.

English summary
A Special Court in Delhi grants bail to Delhi CM Arvind Kejriwal and Dy CM Manish Sisodia in connection with a defamation suit filed by Delhi BJP leader Vijender Gupta. Both have to furnish a bail bond of Rs 10,000 each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X