ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ದಾಖಲಾಗಿರುವ ಪ್ರತಿಷ್ಟಿತ ಏಮ್ಸ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

|
Google Oneindia Kannada News

ನವದೆಹಲಿ, ಆಗಸ್ಟ್ 17: ಪ್ರತಿಷ್ಟಿತ ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 40 ಜನ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ? ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಈಗ ಹೇಗಿದೆ?

ಏಮ್ಸ್‌ ಆಸ್ಪತ್ರೆಯ ಎರಡನೇಯ ಮಹಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಯತ್ನಿಸುತ್ತಿವೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಈ ವರೆಗೆ ಯಾವುದೇ ಸಾವು-ನೋವಿನ ವರದಿ ಆಗಿಲ್ಲ.

ಅರುಣ್ ಜೇಟ್ಲಿ ಆರೋಗ್ಯ ಗಂಭೀರ: ಏಮ್ಸ್‌ನತ್ತ ಹರ್ಷವರ್ಧನ್, ಅಮಿತ್ ಶಾಅರುಣ್ ಜೇಟ್ಲಿ ಆರೋಗ್ಯ ಗಂಭೀರ: ಏಮ್ಸ್‌ನತ್ತ ಹರ್ಷವರ್ಧನ್, ಅಮಿತ್ ಶಾ

ಬೆಂಕಿ ಕಾಣಿಸಿಕೊಂಡಿರುವ ಕೊಠಡಿಯು ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಸನಿಹವೇ ಇದ್ದು, ಬೆಂಕಿ ಕಾಣಿಸಿಕೊಂಡಿರುವ ಕೊಠಡಿಗಳು ಆಸ್ಪತ್ರೆಯ ತರಬೇತಿ ಕೊಠಡಿಗಳಾಗಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ ತುರ್ತು ಚಿಕಿತ್ಸಾ ಘಟಕವನ್ನು ಮುಚ್ಚಲಾಗಿದ್ದು, ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

A fire has broken out at All India Institute of Medical Sciences

ಇದೇ ಏಮ್ಸ್‌ ಆಸ್ಪತ್ರೆಯಲ್ಲಿ ಪ್ರಸ್ತುತ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತಿದೆ. ಅರುಣ್ ಜೇಟ್ಲಿ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಂದು ಬೆಳಿಗ್ಗೆ ಅಷ್ಟೆ ಈ ಆಸ್ಪತ್ರೆಗೆ ಗೃಹ ಮಂತ್ರಿ ಅಮಿತ್ ಶಾ ಭೇಟಿ ನೀಡಿದ್ದರು.

ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಏಮ್ಸ್ ನತ್ತ ಕೋವಿಂದ್ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಏಮ್ಸ್ ನತ್ತ ಕೋವಿಂದ್

ಏಮ್ಸ್‌ ಆಸ್ಪತ್ರೆಯು ಭಾರತದ ಖ್ಯಾತ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಪ್ರಮುಖ ರಾಜಕಾರಣಿಗಳು, ಬ್ಯುಸಿನೆಸ್‌ಮನ್ ಗಳು, ಸೆಲೆಬ್ರಿಟಿಗಳು ಇದೇ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಬರುತ್ತಾರೆ. ಸುಷ್ಮಾ ಸ್ವರಾಜ್ ಅವರುಗಳು ಕೆಲ ದಿನಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಇಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಅಮಿತ್ ಶಾ ಅವರಿಗೂ ಇಲ್ಲಿಯೇ ಚಿಕಿತ್ಸೆ ನಡೆಸಲಾಗಿತ್ತು. ಈ ಆಸ್ಪತ್ರೆಯನ್ನು ಜವಾಹಾರ್ ಲಾಲ್ ನೆಹರು ಅವರ ಅವಧಿಯಲ್ಲಿ ಕಟ್ಟಿಸಲಾಗಿತ್ತು.

English summary
A fire has broken out on the first and second floor at All India Institute of Medical Sciences (AIIMS). Fire brigade present at the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X