ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೆಂಪು ಸೀರೆ'ಯಲ್ಲಿ ಸೋನಿಯಾ ಗಾಂಧಿ ಜೀವನ ಚರಿತ್ರೆ ಓದಿ

By Kiran B Hegde
|
Google Oneindia Kannada News

ನವದೆಹಲಿ, ಜ. 16: ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕಿ ಸೋನಿಯಾ ಗಾಂಧಿ ಅವರ ಜೀವನದ ಹಲವು ಘಟನೆಗಳು ಪ್ರಶ್ನೆಯಾಗಿಯೇ ಉಳಿದಿವೆ. ಅವರು ಅನುಸರಿಸುತ್ತಿರುವ ಧರ್ಮವನ್ನೂ ರಹಸ್ಯವಾಗಿಟ್ಟಿದ್ದಾರೆ!

ಸ್ಪೇನ್‌ ಮೂಲದ ಲೇಖಕ ಝೇವಿಯರ್ ಮೊರೊ ಎಂಬುವರು ಈಗಾಗಲೇ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು 'ಕೆಂಪು ಸೀರೆ' ಶೀರ್ಷಿಕೆಯಡಿ ಏಳು ವರ್ಷಗಳ ಹಿಂದೆಯೇ ಬರೆದಿದ್ದಾರೆ. ಆದರೆ, ಭಾರತದಲ್ಲಿ ಬಿಡುಗಡೆ ಮಾಡಲು ಕಾಂಗ್ರೆಸ್ಸಿಗರು ಅವಕಾಶ ಕೊಟ್ಟಿರಲಿಲ್ಲ. [ಸೋನಿಯಾ ಹುಟ್ಟುಹಬ್ಬಕ್ಕೆ ಮೋದಿ ವಿಷ್]

ಯಾವುದೇ ಪ್ರಕಾಶಕ ಈ ಪುಸ್ತಕವನ್ನು ಭಾಷಾಂತರಿಸಿ, ಮಾರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪಕ್ಷದ ವಕ್ತಾರ ಅಭಿಷೇಕ ಮನು ಸಿಂಘ್ವಿ ಎಚ್ಚರಿಕೆ ನೀಡಿದ್ದರು. 2010ರಲ್ಲಿ ಲೇಖಕ ಮೊರೊ ಅವರಿಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕೂಡ ನೀಡಲಾಗಿತ್ತು.

sonia

ಇಟಲಿಗೆ ಹೋಗಲು ಬಯಸಿದ್ದರೇ ಸೋನಿಯಾ? : "ಇಂದಿರಾ ಗಾಂಧಿ ಅವರು 1977ರಲ್ಲಿ ಚುನಾವಣೆ ಸೋತಾಗ ಸೋನಿಯಾ ಅವರು ರಾಜೀವ್ ಗಾಂಧಿ ಹಾಗೂ ಮಕ್ಕಳೊಂದಿಗೆ ಇಟಲಿಗೆ ವಾಪಸ್ ಹೋಗಬೇಕೆಂದು ಬಯಸಿದ್ದರು" ಎಂದು ಮೊರೊ ಅವರು ಬರೆದಿದ್ದು ಸಿಂಘ್ವಿ ಅವರನ್ನು ಕೆರಳುವಂತೆ ಮಾಡಿತ್ತು. [ಸೋನಿಯಾಗೆ ಪ್ರಧಾನಿ ಹುದ್ದಿ ತಪ್ಪಿದ್ದೇಕೆ?]

ಆದರೆ, ಕಳೆದ ವರ್ಷದ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಮತ್ತೆ ಪುಸ್ತಕ ಬಿಡುಗಡೆಯ ವಿಚಾರ ಗಮನ ಸೆಳೆದಿತ್ತು. ಕಾಂಗ್ರೆಸ್ ವಿರೋಧವೂ ಕಡಿಮೆಯಾಗಿ ಭಾರತದಲ್ಲಿ ಪುಸ್ತಕ ಬಿಡುಗಡೆಯಾಗುವುದು ಖಚಿತಗೊಂಡಿತ್ತು. ನಿರೀಕ್ಷೆಯಂತೆಯೇ ಈಗ ಭಾರತೀಯ ಮಾರುಕಟ್ಟೆಗೆ ಪುಸ್ತಕ ಬಿಡುಗಡೆಯಾಗಿದೆ.

ಪುಸ್ತಕದಲ್ಲಿ ಬರೆದಿರುವ ಎಲ್ಲ ವಿಷಯಗಳನ್ನೂ ಸೋನಿಯಾ ಅವರ ಆಪ್ತ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ ನಂತರವೇ ಸಿದ್ಧಪಡಿಸಲಾಗಿದೆ ಎಂದು ಮೊರೊ ಸಮರ್ಥಿಸಿಕೊಂಡಿದ್ದಾರೆ. [ಸೋನಿಯಾ ವಿರುದ್ಧದ ಪ್ರಕರಣ ವಜಾ]

ಸೋನಿಯಾ ಪಾತ್ರ : ಭಾರತದ ಅತ್ಯಂತ ಪ್ರಭಾವಿ ಕುಟುಂಬದ ಸೊಸೆಯಾಗಿ, ಪತಿಯ ರಾಜಕೀಯ ಪ್ರವೇಶವನ್ನು ಉಗ್ರವಾಗಿ ವಿರೋಧಿಸಿದ ಪತ್ನಿಯಾಗಿ, ಆಘಾತಕರ ಸನ್ನಿವೇಷದಲ್ಲಿ ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಿದ ತಾಯಿಯಾಗಿ ಹಾಗೂ ಮನೇಕಾ ಗಾಂಧಿ ಜೊತೆ ಜವಾಬ್ದಾರಿಯುತ ಸಹೋದರಿಯಾಗಿ ಸೋನಿಯಾ ಗಾಂಧಿ ಅವರ ಪಾತ್ರವನ್ನು ಈ ಪುಸ್ತಕದಲ್ಲಿ ಹೇಳಲಾಗಿದೆ ಎನ್ನಲಾಗಿದೆ.

English summary
After Congress lost power at the Centre, a controversial book on Sonia Gandhi has been published in India now. This was written before 7 years only. But Congress lead central government UPA had not permitted to publish it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X