ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿಮಾನ ನಿಲ್ದಾಣದಲ್ಲಿ RDX: ಬೆಳಗ್ಗಿನ ಜಾವ ಪ್ರಯಾಣಿಕರಲ್ಲಿ ಆತಂಕ

|
Google Oneindia Kannada News

ನವದೆಹಲಿ, ನವೆಂಬರ್ 01: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕ(ಆರ್ಡಿಎಕ್ಸ್)ಗಳನ್ನು ಹೊಂದಿದ್ದ ಬ್ಯಾಗ್ ವೊಂದು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿತ್ತು.

ಶುಕ್ರವಾರ ಬೆಳಗ್ಗಿನ ಜಾವ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ವಾರಸುದಾರರಿಲ್ಲದ ಬ್ಯಾಗ್ ವೊಂದು ಪತ್ತೆಯಾಗಿತ್ತು. ಅನುಮಾನಗೊಂದ ಪೊಲೀಸ್ ಪೇದೆ ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ, ಇಬ್ಬರ ಅಮಾನತುಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ, ಇಬ್ಬರ ಅಮಾನತು

ನಂತರ ಕೂಡಲೇ ಬ್ಯಾಗ್ ಅನ್ನು ಸ್ಕ್ಯಾನ್ ಮಾಡಿ ನೋಡಿದಾಗ ಅದರಲ್ಲಿ ಸ್ಫೋಟಕವಿರುವುದು ಖಚಿತವಾಗಿತ್ತು. ಶ್ವಾನಗಳೂ ಅದರಲ್ಲಿ ಸ್ಫೋಟಕವಿರುವುದನ್ನು ಖಚಿತಪಡಿಸಿದ್ದವು. ಕೂಡಲೇ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಕರೆಸಿ, ಸ್ಫೋಟಕವನ್ನು ನಿಷ್ಟ್ರಿಯಗೊಳಿಸಲಾಗಿತ್ತು.

A Bag Containing RDX found In Indira Gandi International Airport Ne Delhi

ಆರ್ಡಿಎಕ್ಸ್ ಪತ್ತೆಯ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಟರ್ಮಿನಲ್ 3 ರ ಹಾದಿಯನ್ನು ಪ್ರಯಾಣಿಕರಿಗೆ ನಿಷೇಧಿಸಲಾಗಿತ್ತು. ಶುಕ್ರವಾರ ಬೆಳಿಗ್ಗಿನ ಜಾವ ಸುಮಾರು 1:30 ರ ಸಮಯದಲ್ಲಿ ಈ ಘಟನೆ ನಡೆದಿದ್ದು, 2.55 ರವರೆಗೂ ಬಾಂಬ್ ಖಚಿತಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಯಿತು.. ನಂತರ 3:30 ರ ನಂತರ ಪ್ರಯಾಣಿಕರಿಗೆ ಈ ಹಾದಿಯನ್ನು ಮುಕ್ತಗೊಳಿಸಲಾಯಿತು.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಾಕ್ಸ್ ಬಂದಿದ್ದು ಎಲ್ಲಿಂದ?ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ; ಬಾಕ್ಸ್ ಬಂದಿದ್ದು ಎಲ್ಲಿಂದ?

ಪೊಲೀಸ್ ಪೇದೆಯ ತಕ್ಷಣದ ಸಮಯಪ್ರಜ್ಞೆಯಿದ ಅನಾಹುತ ತಪ್ಪಿದ್ದು, ಆರ್ಡಿಎಕ್ಸ್ ಎಲ್ಲಿಂದ ಬಂತು, ಇದರಲ್ಲಿ ಯಾರ ಕೈವಾಡವಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

ಅಕ್ಟೋಬರ್ 21 ರಂದು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ನಡೆದ ಲಘು ಸ್ಫೋಟದಲ್ಲಿ ಓರ್ವ ವ್ಯಕ್ತಿ ಕೈ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A Bag Containing RDX found In Indira Gandi International Airport Ne Delhi, Creates Panic among Passangers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X