ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಕುಟುಂಬ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣ: ವಿಚಾರಣೆ ಜುಲೈ 5ಕ್ಕೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇನ್ನಿತರರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮನವಿ ಮೇರೆಗೆ ಜುಲೈ 5ಕ್ಕೆ ಮುಂದೂಡಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ರೋಸ್ ಅವೆನ್ಯೂದಲ್ಲಿರುವ ಅಡಿಷನಲ್ ಚೀಫ್ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಮುಂದೆ ಶನಿವಾರ ವಿಚಾರಣೆಗೆಂದು ನಿಗದಿಪಡಿಸಲಾಗಿತ್ತು. ಆರೋಪಿಗಳ ಕೋರಿಕೆಯಂತೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯನ್ನು ಮುಂದೂಡಿ ತೀರ್ಪು ನೀಡಿತು. ಪ್ರತಿವಾದಿ ವಕೀಲರು ದೂರುದಾರರಾಗಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರನ್ನು ಪ್ರಶ್ನೆಗೆ ಒಳಪಡಿಸಬೇಕಿತ್ತು.

ನ್ಯಾಷನಲ್ ಹೆರಾಲ್ಡ್ ಕೇಸ್ : ಸೋನಿಯಾ, ರಾಹುಲ್‌ಗೆ ರಿಲೀಫ್ನ್ಯಾಷನಲ್ ಹೆರಾಲ್ಡ್ ಕೇಸ್ : ಸೋನಿಯಾ, ರಾಹುಲ್‌ಗೆ ರಿಲೀಫ್

ಲೋಕಸಭೆ ಚುನಾವಣೆಗಳು ಚಾಲ್ತಿಯಲ್ಲಿ ಇರುವುದರಿಂದ ಪ್ರಕರಣದ ಮುಂದೂಡಿಕೆಗೆ ದೂರುದಾರ ಸುಬ್ರಮಣಿಯನ್ ಸ್ವಾಮಿ ಮತ್ತು ಇತರೆ ಆರೋಪಿಗಳು ಮನವಿ ಮಾಡಿದ್ದರು ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

A ACMM court adjourned the hearing of National Herald case Rahul sonia gandhi to july 5

ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಪರ ವಕೀಲರಾದ ಆರ್‌ಎಸ್‌ ಚೀಮಾ ಅವರು ಫೆಬ್ರವರಿ 4ರಂದು ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿಗೆ 18 ಪ್ರಶ್ನೆಗಳನ್ನು ಕೇಳಿದ್ದರು.

ಐಟಿ ಉರುಳಿನಿಂದ ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ನೆಮ್ಮದಿಐಟಿ ಉರುಳಿನಿಂದ ಸೋನಿಯಾ, ರಾಹುಲ್ ಗಾಂಧಿಗೆ ತಾತ್ಕಾಲಿಕ ನೆಮ್ಮದಿ

ರಾಹುಲ್ ಮತ್ತು ಸೋನಿಯಾ ಹಾಗೂ ಇತರರ ವಿರುದ್ಧ ವಂಚನೆ ಸಂಚಿನ ಪ್ರಯತ್ನ ಮತ್ತು ಹಣಕಾಸು ನಿಧಿಯ ದುರ್ಬಳಕೆ ಪ್ರಕರಣವನ್ನು ಸ್ವಾಮಿ ಅವರು 2012ರಲ್ಲಿ ದಾಖಲಿಸಿದ್ದರು.

ನ್ಯಾಷನಲ್ ಹೆರಾಲ್ಡ್ ಸುದ್ದಿಪತ್ರಿಕೆಯ ಮಾಲೀಕರಾಗಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಮಿಟೆಡ್‌ಗೆ 90.25 ಕೋಟಿ ರೂಪಾಯಿ ಸಾಲವನ್ನು ಬಡ್ಡಿರಹಿತರವಾಗಿ ಕಾಂಗ್ರೆಸ್ ಪಕ್ಷ ನೀಡಿತ್ತು ಎಂದು ಸ್ವಾಮಿ ಆರೋಪಿಸಿದ್ದರು.

English summary
A ACMM court on Saturday has adjuorned the National Herald case after complainant Subramanian Swamy and accused Rahul Gandhi, Sonia Gandhi and others sought because of the Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X