ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014- 2019: 963 ಉಗ್ರರ ಹತ್ಯೆ, 413 ಭದ್ರತಾ ಸಿಬ್ಬಂದಿ ಬಲಿದಾನ

|
Google Oneindia Kannada News

ನವದೆಹಲಿ, ಜುಲೈ 16: ಪ್ರಧಾನಿ ನರೇಂದ್ರ ಮೋದಿ ಮೊದಲ ಅವಧಿಗೆ ಅಧಿಕಾರ ಸ್ವೀಕರಿಸಿದಾಗ ಅಂದರೆ, 2014ರಿಂದ ಇದುವರೆಗೆ 963 ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಸಂಸತ್ತಿನಲ್ಲಿ ಈ ಕುರಿತ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿದ ಗೃಹ ಸಚಿವಾಲಯ, 963 ಭಯೋತ್ಪಾದಕರ ಹತ್ಯೆಯಾಗಿದ್ದರೆ, 413 ಭದ್ರತಾ ಸಿಬ್ಬಂದಿಯೂ ಈ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ ಎಂದಿದೆ.

ಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿ

"ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉಗ್ರರ ಬಗ್ಗೆ ಶೂನ್ಯ ಸಹನೆ ಹೊಂದಿರುವುದರಿಂದ ಸೈನಿಕರೇ ಸ್ವಇಚ್ಛೆಯಿಂದ ಉಗ್ರರ ದಮನಕ್ಕೆ ಮುಂದಾಗಿದ್ದಾರೆ" ಎಂದು ಅದು ತಿಳಿಸಿದೆ.

963 terrorists killed in Jammu and Kashmir since 2014: Home Ministry

2019 ರ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಉಗ್ರ ದಮನಕ್ಕೆ ಮತ್ತಷ್ಟು ಮಹತ್ವ ನೀಡಿದೆ ಎಂದು ಅದು ಹೇಳಿದೆ.

'ಏರ್ ಸ್ಟ್ರೈಕ್ ನಿಂದ ಉಗ್ರರು ಹೆದರಿದ್ದಾರೆ', ಸಾಕ್ಷ್ಯ ನೀಡಿದ ಸರ್ಕಾರ'ಏರ್ ಸ್ಟ್ರೈಕ್ ನಿಂದ ಉಗ್ರರು ಹೆದರಿದ್ದಾರೆ', ಸಾಕ್ಷ್ಯ ನೀಡಿದ ಸರ್ಕಾರ

ಭಯೋತ್ಪಾದನೆಯ ವಿರುದ್ಧ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆಯ ತನ್ನ ನೀತಿಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖಾ ಅಧಿಕಾರಗಳನ್ನು ಮತ್ತಷ್ಟು ವಿಸ್ತರಿಸುವ ಎನ್ ಐಎ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Ministry of Home affairs in Lok Sabha release a data, and said, As many as 963 terrorists have been neutralised in Jammu and Kashmir by security and defence personnel since 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X