ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 26 ರಂದು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲು

|
Google Oneindia Kannada News

ದೆಹಲಿ, ಮಾರ್ಚ್ 26: ಭಾರತದಲ್ಲಿ ಇದುವರೆಗೂ 700ಕ್ಕೂ ಅಧಿಕ ಕೊರೊನಾ ಕೇಸ್‌ಗಳು ದಾಖಲಾಗಿದೆ. ಒಟ್ಟು 16 ಸಾವು ಆಗಿದೆ ಎಂದು ವರದಿಯಾಗಿದೆ. ಗುರುವಾರ ಸಂಜೆಯವರೆಗೂ ಒಟ್ಟು 694 ಸೋಂಕಿತರು ದೃಢಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ,

ಗುರುವಾರ ಒಂದೇ ದಿನ 88 ಸೋಂಕಿತರು ದೃಢವಾಗಿದ್ದಾರೆ ಎಂದು ಮಾಹಿತಿ ನೀಡಿರುವ ಇಲಾಖೆ, ಇದುವರೆಗೂ ದಿನವೊಂದರಲ್ಲಿ ಹೆಚ್ಚು ಕೇಸ್‌ ದಾಖಲಾಗಿರುವುದು ಇಂದೇ ಎಂದು ತಿಳಿಸಿದ್ದಾರೆ. ಇದರಲ್ಲಿ 44 ಜನರು ಚೇತರಿಕೆ ಕಂಡಿದ್ದು, ಇನ್ನು 633 ಜನರ ಮೇಲೆ ನಿಗಾವಹಿಸಲಾಗಿದೆ. ಒಟ್ಟು 16 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ದಿನೇಶ್ ಗುಂಡೂರಾವ್ ಮಗಳಿಗೆ ಕೊರೊನಾ! ಸ್ಪಷ್ಟನೆ ನೀಡಿದ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮಗಳಿಗೆ ಕೊರೊನಾ! ಸ್ಪಷ್ಟನೆ ನೀಡಿದ ಮಾಜಿ ಸಚಿವ

ಇನ್ನು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಇದು ಸಹಜವಾಗಿ ಆತಂಕ ಹೆಚ್ಚಿಸುತ್ತಿದೆ. ಮತ್ತೊಂದೆಡೆ ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.

88 New Cases Of Coronavirus Were Reported Today

ಈಗಾಗಲೇ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿದೆ. ದಿನನಿತ್ಯದ ಅಗತ್ಯವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಖಡಕ್ ಆಗಿ ಆದೇಶಿಸಿದೆ. ರಾಜ್ಯ ಸರ್ಕಾರಗಳು ಕೂಡ ಕೇಂದ್ರದ ಸೂಚನೆ ಪಾಲಿಸುತ್ತಿದ್ದು, ಜನರನ್ನು ಹೊರಗೆ ಬರದಂತೆ ಪೊಲೀಸರು ನಿಯಂತ್ರಿಸುತ್ತಿದ್ದಾರೆ.

ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?ಭಾಸ್ಕರ್ ರಾವ್ ವಿರುದ್ಧ ಡಿಸಿಎಂ ಗಂಭೀರ ಆರೋಪ: ಸಿಎಂ ಎದುರು ಕಣ್ಣೀರಿಟ್ಟರಾ ಕಮಿಷನರ್?

ಇನ್ನು ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55ಕ್ಕೆ ಜಿಗಿದಿದೆ. ಇಂದು ರಾಜ್ಯದಲ್ಲಿ ಒಟ್ಟು ನಾಲ್ಕು ಕೊವಿಡ್ 19 ಕೇಸ್ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ಒಂದು ಸಾವು ವರದಿಯಾಗಿದೆ.

English summary
The Union Ministry of Health and Family Welfare on Thursday said 88 new cases of coronavirus were reported today, the highest in a single day. The total number of cases rises to 694.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X