ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸದಾಗಿ 85 ಬಿಎಸ್ಎಫ್ ಯೋಧರಿಗೆ ವಕ್ಕರಿಸಿದ ಕೊರೊನಾ

|
Google Oneindia Kannada News

ದೆಹಲಿ, ಮೇ 5: ಗಡಿ ಭದ್ರತೆ ಸಿಬ್ಬಂದಿಗೆ ಕೊರೊನಾ ವೈರಸ್‌ ಭೀತಿ ಹೆಚ್ಚು ಕಾಡುತ್ತಿದೆ. ದಿನದಿಂದ ದಿನಕ್ಕೆ ಬಿಎಸ್ಎಫ್ ಯೋಧರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಈವರೆಗಿನ ಮಾಹಿತಿ ಪ್ರಕಾರ ಹೊಸದಾಗಿ 85 ಜನ ಸಿಬ್ಬಂದಿಗೆ ಕೊವಿಡ್ ಸೋಂಕು ತಗುಲಿದೆ.

ಬಿಎಸ್ಎಫ್ ಇಲಾಖೆಯ ವಕ್ತಾರರು ನೀಡಿರುವ ಅಂಕಿ ಅಂಶದ ಪ್ರಕಾರ ಇದುವರೆಗೂ 154 ಜನ ಯೋಧರಿಗೆ ಕೊರೊನಾ ಅಂಟಿಕೊಂಡಿದೆ. ಅದರಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ.

ಈವರೆಗೂ 67 ಬಿಎಸ್‌ಎಫ್ ಯೋಧರಿಗೆ ಕೊರೊನಾ ಸೋಂಕುಈವರೆಗೂ 67 ಬಿಎಸ್‌ಎಫ್ ಯೋಧರಿಗೆ ಕೊರೊನಾ ಸೋಂಕು

154 ಸೋಂಕಿತರ ಪೈಕಿ ದೆಹಲಿಯಲ್ಲಿ ಹೆಚ್ಚು ಕೇಸ್ ವರದಿಯಾಗಿದೆ. 110 ಕೇಸ್ ದೆಹಲಿಯಲ್ಲಿ ಪತ್ತೆಯಾಗಿದೆ. ಉಳಿದಂತೆ ತ್ರಿಪುರದಲ್ಲಿ ಕಾಣಿಸಿಕೊಂಡಿದೆ.

85 More BSF Personnel Test Positive For COVID-19

ಅಂದ್ಹಾಗೆ, ಇದು ಕೇವಲ ಬಿಎಸ್ಎಫ್ ಯೋಧರ ಅಂಕಿ ಅಂಶ ಮಾತ್ರ. ಮತ್ತೊಂದೆಡ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿಗಳಿಗೆ ಕೊರೊನಾ ಕಾಟ ತಪ್ಪಿದ್ದಲ್ಲ. ಈವರೆಗೂ 137 ಜನ ಸಿಆರ್‌ಪಿಎಫ್ ಸಿಬ್ಬಂದಿಗೆ ಕೊವಿಡ್ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 49,391ಕ್ಕೆ ಏರಿಕೆಯಾಗಿದೆ. 1694 ಜನರು ಇದುವರೆಗೂ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಮಾಹಿತಿ ನೀಡಿದೆ.

English summary
85 more BSF personnel test positive for COVID-19, taking total to 154; 2 have recovered: Spokesperson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X