ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧದ ನಡುವೆ ಮಾರಾಟಕ್ಕೆ ಯತ್ನ, 800 ಕೆಜಿಗೂ ಅಧಿಕ ಪಟಾಕಿ ಜಪ್ತಿ

|
Google Oneindia Kannada News

ನವದೆಹಲಿ, ನವೆಂಬರ್ 3: ಕೊರೊನಾ ಸಾಂಕ್ರಾಮಿಕದ ನಡುವೆ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಹಲವು ರಾಜ್ಯಗಳು ಮಾರ್ಗಸೂಚಿ ಪ್ರಕಟಿಸಿವೆ. ದೆಹಲಿಯಲ್ಲಿ ಈ ಬಾರಿಯೂ ದೀಪಾವಳಿಯಲ್ಲಿ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶ ಹೊರಡಿಸಿದೆ. ನಿಷೇಧದ ನಡುವೆ ಮಾರಾಟಕ್ಕೆ ಯತ್ನ ನಡೆದಿದ್ದು, ಸುಮಾರು 800 ಕೆಜಿ ಪಟಾಕಿ ಜಪ್ತಿ ಮಾಡಿರುವ ವರದಿ ಬಂದಿದೆ.

ದೆಹಲಿಯ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದಂತೆಯೇ ಈ ಬಾರಿ ಕೂಡ ಪಟಾಕಿಗಳ ಶೇಖರಣೆ, ಮಾರಾಟ ಹಾಗೂ ಹಚ್ಚುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿದೀಪಾವಳಿ ಪಟಾಕಿ ನಿಷೇಧಿಸದ ರಾಜ್ಯಗಳ ಪಟ್ಟಿ

2020ರಲ್ಲಿ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ಬಳಿಕ ಮಾಲಿನ್ಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ಹೇರಲಾಗಿತ್ತು. ಇದರಿಂದ ವ್ಯಾಪಾರಿಗಳಿಗೆ ನಷ್ಟ ಉಂಟಾಗಿತ್ತು. ಆದರೆ ಈ ಬಾರಿ ಸಂಪೂರ್ಣ ನಿಷೇಧ ಗಮನದಲ್ಲಿಟ್ಟುಕೊಂಡು ಯಾರೂ ಕೂಡ ಶೇಖರಣೆ ಮಾಡಬಾರದು ಎಂದು ಹೇಳಲಾಗಿದೆ.

800 kg firecrackers seized from Delhis Sadar Bazaar

ಸಾದರ್ ಬಜಾರ್ ಬಳಿ ಪಟಾಕಿ ಭಾರಿ ದಾಸ್ತಾನು ಕಂಡು ಬಂದಿದೆ ಎಂದು ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಗೋದಾಮು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆಕೃತಿ ಸಾಗರ್ ಹೇಳಿದ್ದಾರೆ.

''ಹರ್ಯಾಣ ಮೂಲದ ಪಟಾಕಿ ವ್ಯಾಪಾರಿಗಳು ಮಹಾವೀರ್ ಬಜಾರ್, ಸಾದರ್ ಬಜಾರ್, ತೇಲಿವಾರದಲ್ಲಿ ಪಟಾಕಿ ಮಾರಾಟಕ್ಕೆ ಯತ್ನಿಸಿದ್ದರು. ಬಿಹಾರ ಮೂಲದ ಮೊಹಮ್ಮದ್ ಇಜಾಜ್ ಎಂಬಾತನಿಗೆ ಸೇರಿದ ಗೋದಾಮಿನಲ್ಲಿ ಪಟಾಕಿ ಸಂಗ್ರಹಿಸಲಾಗಿತ್ತು. ಎರಡು ದೊಡ್ಡ ಕೊಠಡಿಗಳ ತುಂಬಾ ಪಟಾಕಿ ತುಂಬಿಸಲಾಗಿತ್ತು. ಸುಮಾರು 879 ಕೆಜಿ ತೂಗುವ ವಿವಿಧ ಪಟಾಕಿಗಳನ್ನು ಜಪ್ತಿ ಮಾಡಲಾಗಿದೆ, '' ಎಂದು ಡಿಸಿ ಆಕೃತಿ ಹೇಳಿದರು. ಸ್ಥಳೀಯ ಪೊಲೀಸರು ಈ ಕುರಿತಂತೆ ಮುಂದಿನ ಕ್ರಮ ಜರುಗಿಸಿದ್ದಾರೆ.

ಇನ್ನೊಂದೆಡೆ, ದೀಪಾವಳಿ ಸಂದರ್ಭದಲ್ಲಿ ಸಿಹಿ ತಿನಿಸಿಗೆ ಕಲಬೆರಕೆ ಪದಾರ್ಥ ಸೇರಿಸುವ ಜಾಲವನ್ನು ಪತ್ತೆ ಹಚ್ಚಲಾಗಿದೆ. ಆಹಾರ ಸುರಕ್ಷತಾ ಟಾಸ್ಕ್ ಪೋರ್ಸ್ ಮುಂದಾಳತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಖೋಯಾ ಮಂಡಿ ಮೋರಿ ಗೇಟ್ ಬಳಿ ಸುಮಾರು 700 ಕೆಜಿ ಖೋಯಾ ಹಾಗೂ ಅಜಾದ್ ಪುರ್ ತರಕಾರಿ ಮಾರುಕಟ್ಟೆ ಬಳಿ 1000 ಕೆಜಿ ಕಲಬೆರಕಿ ಪನೀರ್ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿ ಬಂದಿದೆ.

ದೆಹಲಿಯ ವಾಯುಗುಣಮಟ್ಟ ಕುಸಿಯುತ್ತಿದೆ, ದೆಹಲಿಯ ಸುತ್ತಮುತ್ತಲ ರಾಜ್ಯಗಳು ಕೂಡ ಪಟಾಕಿಯನ್ನು ನಿಷೇಧಿಸಿವೆ, ಪಶ್ಚಿಮ ಬಂಗಾಳದಲ್ಲೂ ಕಾಳಿ ಪೂಜಾ ಹಾಗೂ ದೀಪಾವಳಿಯಲ್ಲಿ ಪಟಾಕಿ ಹಚ್ಚಬಾರದು ಎಂದು ಹೇಳಿದೆ. ಕಳೆದ ವರ್ಷ ದೆಹಲಿ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ರಾಜಸ್ಥಾನ, ಚಂಡೀಗಢದಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿತ್ತು. ಹಲವು ರಾಜ್ಯಗಳಲ್ಲಿ ಹಸಿರು ಪಟಾಕಿಗಳನ್ನು ಬಳಸುವಂತೆ ಹೇಳಲಾಗಿತ್ತು. ಪಟಾಕಿಯಲ್ಲಿ ಹೆಚ್ಚು ಬೆಳಕು ಹಾಗೂ ಬಣ್ಣವನ್ನು ಉತ್ಪತ್ತಿ ಮಾಡಲು ಬಳಸುವ ರಾಸಾಯನಿಕಗಳಲ್ಲಿ ಬೇರಿಯಂ, ಸೋಡಿಯಂ, ಮೆಗ್ನೀಶಿಯಂ, ಅಲ್ಯುಮೀನಿಯಂ, ಟ್ರೈಟಾನಿಯಂ, ಕ್ಯಾಲ್ಶಿಯಂ, ಕಾಪರ್‌, ಸ್ಟ್ರಾನ್‌ಶಿಯಂ ಲೋಹಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸುಡುವುದರಿಂದ ಇವು ಕರಗದೆ ವಾತಾವರಣದಲ್ಲಿ ಶೇಖರಣೆಯಾಗುತ್ತವೆ. ಇದು ಉಸಿರಾಟದ ಮೂಲಕ ಮನುಷ್ಯನ ದೇಹವನ್ನು ಪ್ರದೇಶಿಸಿ ಹಾನಿ ಉಂಟು ಮಾಡುತ್ತದೆ.

2018 ರಲ್ಲಿ ಸರ್ವೋಚ್ಚ ನ್ಯಾಯಾಲಯವು ವಾಯು ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸಾಂಪ್ರದಾಯಿಕ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಬಳಸುವಂತೆ ಆದೇಶ ನೀಡಿತ್ತು.ಸಾಂಪ್ರದಾಯಿಕ ಪಟಾಕಿಯಲ್ಲಿ ಬಳಸುವ ಲಿಥಿಯಂ ಹಾಗೂ ಬೇರಿಯಂ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿತ್ತು. ಸಾಂಪ್ರದಾಯಿಕ ಪಟಾಕಿ ಬದಲಾಗಿ ಇದೀಗ ಹಸಿರು ಪಟಾಕಿಯನ್ನು ಬಳಸಲು ಸರ್ಕಾರ ಸೂಚನೆ ನೀಡಿದೆ. ಹಸಿರು ಪಟಾಕಿಗಳು ಗಾತ್ರದಲ್ಲೂ ಸಣ್ಣದಾಗಿದ್ದು ಮಾಲಿನ್ಯದ ಪ್ರಮಾಣ ಶೇ. 30 ರಿಂದ 90 ಪ್ರತಿಶತ ಕಡಿಯಾಗಿದೆ. ಸಾಂಪ್ರದಾಯಿಕ ಪಟಾಕಿಗೆ ಹೋಲಿಕೆ ಮಾಡಿದರೆ ಬೆಳಕು ಹಾಗೂ ಶಬ್ಧದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

English summary
New Delhi: Over 800 kg firecrackers were seized from central Delhi's Sadar Bazaar, an official statement said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X