ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪರೀಕ್ಷೆ ಮಾಡಿಸದೆ ಇಟಲಿಯಿಂದ ದೆಹಲಿಗೆ ಬಂದ 80 ಜನ

|
Google Oneindia Kannada News

ದೆಹಲಿ, ಮಾರ್ಚ್ 11: ವಿಶ್ವಕ್ಕೆ ಕೊರೊನಾ ವೈರಸ್ ಪರಿಚಯ ಮಾಡಿದ್ದು ಚೀನಾ. ಸುಮಾರು 80 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಚೀನಾದಲ್ಲಿ ದಾಖಲಾಗಿದ್ದು, 3100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಚೀನಾದಲ್ಲಿ ಚೇತರಿಕೆ ಕಂಡಿದೆ. ಆದರೆ ಇಟಲಿ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಹೊಸದಾಗಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಭಾರತಕ್ಕೆ ಬಂದ ಇಟಲಿ ಪ್ರವಾಸಿಗರಲ್ಲೂ ಕೊರೊನಾ ಕಾಣಿಸಿಕೊಂಡಿತ್ತು. ಹಾಗಾಗಿ ಇಟಲಿಯಿಂದ ಬರುವ ಜನರ ಮೇಲೆ ಭಾರತ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.

Coronavirus Scare: ಇಟಲಿಯಲ್ಲಿ ಇರುವ ಹಾಗಿಲ್ಲ, ಭಾರತಕ್ಕೆ ಬರುವ ಹಾಗಿಲ್ಲ!Coronavirus Scare: ಇಟಲಿಯಲ್ಲಿ ಇರುವ ಹಾಗಿಲ್ಲ, ಭಾರತಕ್ಕೆ ಬರುವ ಹಾಗಿಲ್ಲ!

ಭಾರತದಷ್ಟೇ ಇಟಲಿ ಸರ್ಕಾರ ಕೂಡ ಕೊರೊನಾ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಇದೆಲ್ಲದರ ಮಧ್ಯೆ ಇಟಲಿಯ ಮಿಲನ್ ನಗರದಿಂದ ಭಾರತಕ್ಕೆ 80 ಜನ ಪ್ರಯಾಣಿಕರು ವಿಮಾನದಲ್ಲಿ ಬಂದಿದ್ದು, ಇವರೆಲ್ಲ ಕೊರೊನಾ ಪರೀಕ್ಷೆಗೆ ಒಳಪಟ್ಟಿಲ್ಲ ಎನ್ನುವುದು ದೆಹಲಿ ಏರ್‌ಪೋರ್ಟ್‌ನಲ್ಲಿ ಬಹಿರಂಗವಾಗಿದೆ. ಮುಂದೆ ಓದಿ...

ಕೊರೊನಾ ಟೆಸ್ಟ್ ಇಲ್ಲದೆ ಭಾರತಕ್ಕೆ ಬಂದ 80 ಜನ

ಇಟಲಿಯ ಮಿಲನ್‌ ನಗರದಿಂದ ದೆಹಲಿ ಬಂದ ವಿಮಾನದಲ್ಲಿ 80 ಜನರು ಪ್ರಯಾಣಿಕರು ಭಾರತಕ್ಕೆ ಬಂದಿದ್ದಾರೆ. ಮಿಲನ್ ಏರ್‌ಪೋರ್ಟ್‌ನಲ್ಲಿ ಇವರೆಲ್ಲರಿಗೂ ಕೊರೊನಾ ಪರೀಕ್ಷೆ ಮಾಡಿಲ್ಲವಂತೆ. ಹಾಗಾಗಿ, ದೆಹಲಿ ಏರ್‌ಪೋರ್ಟ್‌ ಸಿಬ್ಬಂದಿ ಎಲ್ಲ ಪ್ರಯಾಣಿಕರಿಗೂ ಹಾಗೂ ಸರುಕುಗಳಿಗೂ ಕೊರೊನಾ ಟೆಸ್ಟ್ ಮಾಡಿದ್ದಾರೆ.

ಇಟಲಿಯಲ್ಲಿ ಯಾಕೆ ಕೊರೊನಾ ಪರೀಕ್ಷೆ ಮಾಡಿಲ್ಲ?

ಇಟಲಿಯಲ್ಲಿ ಯಾಕೆ ಕೊರೊನಾ ಪರೀಕ್ಷೆ ಮಾಡಿಲ್ಲ?

ವಿದೇಶಕ್ಕೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಎರಡು ದೇಶದ ಏರ್‌ಪೋರ್ಟ್‌ಗಳಲ್ಲು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, Air India AI-138 ವಿಮಾನದಲ್ಲಿ ಭಾರತಕ್ಕೆ ಬಂದ 80 ಜನರ ಪ್ರಯಾಣಿಕರಿಗೆ ಇಟಲಿಯಲ್ಲಿ ಏಕೆ ಕೊರೊನಾ ಪರೀಕ್ಷೆ ಮಾಡಲಿಲ್ಲ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ.

ಭಾರತ ಸೇರಿದಂತೆ 14 ರಾಷ್ಟ್ರಗಳಿಗೆ ನಿರ್ಬಂಧ ಹೇರಿದ ಕತಾರ್ಭಾರತ ಸೇರಿದಂತೆ 14 ರಾಷ್ಟ್ರಗಳಿಗೆ ನಿರ್ಬಂಧ ಹೇರಿದ ಕತಾರ್

ಕೇರಳ ಮುಖ್ಯಮಂತ್ರಿ ಹೇಳಿದ ಭಾರತೀಯರಾ ಇವರು?

ಕೇರಳ ಮುಖ್ಯಮಂತ್ರಿ ಹೇಳಿದ ಭಾರತೀಯರಾ ಇವರು?

ಇಟಲಿ ಮತ್ತು ರಿಪಬ್ಲಿಕ್ ಆಫ್ ಕೊರಿಯಾ ದೇಶಕ್ಕೆ ತೆರಳಿದ್ದ ಭಾರತೀಯರು ಮರಳಿ ಸ್ವದೇಶಕ್ಕೆ ಬರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ದಯವಿಟ್ಟು ಅವರನ್ನು ಭಾರತಕ್ಕೆ ಕರೆತರುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಹಾಗಾಗಿ, ಇಟಲಿಯಿಂದ ಬಂದ ಪ್ರಯಾಣಿಕವರು ಅವರೇನಾ ಎಂಬ ಅನುಮಾನ ಕಾಡುತ್ತಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಕೆಲವು ದೇಶಗಳಲ್ಲಿ ವಿಮಾನಯಾನ ರದ್ದು!

ಕೆಲವು ದೇಶಗಳಲ್ಲಿ ವಿಮಾನಯಾನ ರದ್ದು!

ಕೊರೊಕಾ ಸೋಂಕು ಹರಡುವಿಕೆಯ ಭಯದಿಂದ ಕೆಲವು ದೇಶಗಳಲೂ ವಿದೇಶಿ ಪ್ರಯಾಣಿಕರಿಗೆ ನಿರ್ಬಂಧ ಹೇರಿದೆ. ಕತಾರ್ ದೇಶ ಭಾರತ ಸೇರಿದಂತೆ 14 ದೇಶಗಳಿಗೆ ತಾತ್ಕಲಿಕ ನಿರ್ಬಂಧ ಹಾಕಿದೆ. ಸದ್ಯಕ್ಕೆ ಹೊರದೇಶದ ಯಾರೂ ಈ ದೇಶಕ್ಕೆ ಹೋಗುವಂತಿಲ್ಲ. ಭಾರತದಲ್ಲೂ ಇಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ.

ಕೊರೊನಾ ವೈರಸ್ ಎಫೆಕ್ಟ್: ವಿಮಾನ ಏರಿದವರಿಗೆ 14 ದಿನ ಗೃಹ ದಿಗ್ಬಂಧನ!ಕೊರೊನಾ ವೈರಸ್ ಎಫೆಕ್ಟ್: ವಿಮಾನ ಏರಿದವರಿಗೆ 14 ದಿನ ಗೃಹ ದಿಗ್ಬಂಧನ!

ಇಟಲಿಯಲ್ಲಿ ಹೆಚ್ಚಿದ ಸಾವಿನ ಸಂಖ್ಯೆ

ಇಟಲಿಯಲ್ಲಿ ಹೆಚ್ಚಿದ ಸಾವಿನ ಸಂಖ್ಯೆ

ಚೀನಾ ಬಿಟ್ಟರೆ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿರುವುದು ಇಟಲಿಯಲ್ಲಿ. ಸುಮಾರು 10 ಸಾವಿರ ಕೊರೊನಾ ಪ್ರಕರಣ ಬೆಳಕಿಗೆ ಬಂದಿದ್ದು, 631 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸುಮಾರು 62 ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಜಗತ್ತಿನಾದ್ಯಂತ 4300 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

English summary
Air India AI-138 from Milan to Delhi came without COVID-19 screening. The flight had 80 passengers on board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X