ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 8 ರಾಜ್ಯಗಳಲ್ಲಿದೆ 85.5 ಪರ್ಸೆಂಟ್‌ನಷ್ಟು ಕೊರೊನಾ ಕೇಸ್: ಸರ್ಕಾರದ ಮಾಹಿತಿ

|
Google Oneindia Kannada News

ನವದೆಹಲಿ, ಜೂನ್ 27: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಅತಿ ಹೆಚ್ಚು ತೊಂದರೆಗೊಳಗಾಗಿರುವ ರಾಜ್ಯಗಳ ಕುರಿತು ಮಾಹಿತಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟು ರಾಜ್ಯಗಳು ಒಟ್ಟು ಸಾವುಗಳಲ್ಲಿ 87% ಇದೆ ಎಂದು ಶನಿವಾರ ತಿಳಿಸಿದೆ.

Recommended Video

ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. | Andhra Pradesh | Oneindia Kannada

ಎಂಟು ರಾಜ್ಯಗಳ ಕುರಿತು ತಿಳಿಸಿರುವ ಇಲಾಖೆಯು ಇದೇ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಸುಮಾರು 85.5% ನಷ್ಟಿದೆ ಎಂದು ತಿಳಿಸಿದೆ.

coronavirus cases

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿರುವ ಆ ಎಂಟು ರಾಜ್ಯಗಳು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ.

ನವದೆಹಲಿಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕುರಿತು ಉನ್ನತ ಮಟ್ಟದ ಮಂತ್ರಿಗಳ 17 ನೇ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಮತ್ತು ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಅಶ್ವಿನಿ ಕುಮಾರ್ ಚೌಬೆ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಊರಿನಿಂದ ನಗರದ ಕಡೆ ವಾಪಸ್ ಬರ್ತಿದ್ದಾರೆ ವಲಸೆ ಕಾರ್ಮಿಕರುಊರಿನಿಂದ ನಗರದ ಕಡೆ ವಾಪಸ್ ಬರ್ತಿದ್ದಾರೆ ವಲಸೆ ಕಾರ್ಮಿಕರು

ಇದೇ ವೇಳೆ ಮಾತನಾಡಿದ ಸಚಿವ ಡಾ. ಹರ್ಷ ವರ್ಧನ್ ''ನಮ್ಮ ಚೇತರಿಕೆ ಪ್ರಮಾಣವು 58 ಪರ್ಸೆಂಟ್‌ಕ್ಕಿಂತ ಹೆಚ್ಚಾಗಿದೆ ಮತ್ತು ಸುಮಾರು 3 ಲಕ್ಷ ಜನರು ಕೋವಿಡ್ -19 ರಿಂದ ಚೇತರಿಸಿಕೊಂಡಿದ್ದಾರೆ. ನಮ್ಮ ಮರಣ / ಸಾವಿನ ಪ್ರಮಾಣವು 3% ರ ಸಮೀಪದಲ್ಲಿದೆ, ಅದು ತುಂಬಾ ಕಡಿಮೆ. ನಮ್ಮ ದ್ವಿಗುಣಗೊಳಿಸುವಿಕೆಯ ಪ್ರಮಾಣವು 19 ದಿನಗಳ ಹತ್ತಿರ ಇಳಿದಿದೆ, ಇದು ಲಾಕ್‌ಡೌನ್‌ಗೆ 3 ದಿನಗಳ ಮೊದಲು. " ಎಂದು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ಸೋಂಕು ದ್ವಿಗುಣಗೊಳಿಸುವಿಕೆಯ ಲಾಕ್‌ಡೌನ್‌ಗೆ 3 ದಿನಗಳ ಮೊದಲು ಇರೋದಕ್ಕಿಂತ 19 ದಿನಗಳ ಹತ್ತಿರಕ್ಕೆ ಬಂದಿದೆ ಎನ್ನಲಾಗಿದೆ.

English summary
India coronavirus cases, india covid-19 recovery rate, Union health minister Dr Harsh Vardhan, highest coronavirus cases states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X