ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ನಿತ್ಯ 700 ಟನ್ ಆಮ್ಲಜನಕ ಪೂರೈಸಿ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಮೇ 06: ದೆಹಲಿಗೆ ನಿತ್ಯ 700 ಟನ್ ಆಮ್ಲಜನಕ ಪೂರೈಸಲೇಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.

ನೀವು ದೆಹಲಿಗೆ 700 ಟನ್ ನೀಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ, ಕೇಂದ್ರದಿಂ ಹಂಚಿಕೆ ಮತ್ತು ವಿತರಣೆಯನ್ನು ಹೇಗೆ ಪಾರದರ್ಶಕವಾಗಿ ಎಂಬುದು ರಾಷ್ಟ್ರದ ಮುಂದೆ ಬರಲಿ ಎಂದಿದೆ.

ಆಸ್ಪತ್ರೆಗೆ ತೆರಳಲು ಭಯಪಟ್ಟು ಕೊರೊನಾ ಸೋಂಕಿತರು ಮಾಡಿದ್ದೇನು? ಆಸ್ಪತ್ರೆಗೆ ತೆರಳಲು ಭಯಪಟ್ಟು ಕೊರೊನಾ ಸೋಂಕಿತರು ಮಾಡಿದ್ದೇನು?

ಇನ್ನು ಈ ಕುರಿತು ಅರವಿಂದ್ ಕೇಜ್ರಿವಾಲ್ ಮಾತನಾಡಿ, ಕೇಂದ್ರ ಸರ್ಕಾರದಿಂದ ಪ್ರತಿದಿನ ದೆಹಲಿಗೆ 700 ಟನ್ ಆಕ್ಸಿಜನ್ ಪೂರೈಕೆಯಾದರೆ ಆಮ್ಲಜನಕ ಕೊರತೆಯಿಂದ ಸಾವಿಗೀಡಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.

700 Tonnes Dena Hi Padega: Supreme Court To Centre On Oxygen For Delhi

ವೈದ್ಯಕೀಯ ಸೌಲಭ್ಯಗಳ ಪೂರೈಕೆಯಲ್ಲಿ ವೈಫಲ್ಯ ಇರುವುದರಿಂದ ಲೆಕ್ಕಪರಿಶೋಧನೆ ನಡೆಯಬೇಕಿದೆ, ಆದರೆ ಅದು ರಾಜಕೀಯ ನಾಯಕತ್ವ ಅಥವಾ ಅಧಿಕಾರಿಗಳಿಗೆ ವಿರುದ್ಧವಾಗಿಲ್ಲ, ನಾವು ದೆಹಲಿ ಕೇಂದ್ರಿತರಾಗಲು ಸಾಧ್ಯವಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಪ್ರತಿನಿತ್ಯವೂ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ, ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ನಿನ್ನೆ ಒಂದೇ ದಿನ 4 ಲಕ್ಷದ 12 ಸಾವಿರದ 262 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿಯ 10 ಲಕ್ಷದ 77 ಸಾವಿರದ 410ಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ ದೇಶದಲ್ಲಿ 3 ಸಾವಿರದ 980 ಮಂದಿ ಕೊರೋನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 23 ಲಕ್ಷದ 01 ಸಾವಿರದ 68ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35 ಲಕ್ಷದ 66 ಸಾವಿರದ 398ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 3 ಲಕ್ಷದ 29 ಸಾವಿರದ 113 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 1 ಕೋಟಿಯ 72 ಲಕ್ಷದ 80 ಸಾವಿರದ 844ಕ್ಕೆ ತಲುಪಿದೆ.

English summary
The national capital must get at least 700 tonnes of oxygen everyday, as requested by the Delhi government to meet the needs of the city's COVID-19 patients, the Supreme Court told the centre today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X