ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಟೀಗೆ 70 ರೂ.?, ರೈಲ್ವೆ ಇಲಾಖೆ ಬೆಲೆಗೆ ಹೌಹಾರಿದ ಪ್ರಯಾಣಿಕ

|
Google Oneindia Kannada News

ನವದಹೆಲಿ, ಜು.1: ವಿಮಾನದಲ್ಲಿ ಆಹಾರ ದುಬಾರಿ ಎಂಬುದು ಗೊತ್ತಿರುವ ವಿಚಾರ. ಆದರೆ ರೈಲಿನಲ್ಲೂ ಆಹಾರ ಪದಾರ್ಥ ಕೇವಲ ಒಂದು ಕಪ್‌ ಟೀ ಕೂಡ ದುಬಾರಿಯೇ ಎಂಬುದು ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ರೈಲ್ವೇ ಇಲಾಖೆ ತಾನು ಕೊಡುವ ಟೀಗೆ ಭಾರೀ ಸೇವಾ ಶುಲ್ಕ ವಿಧಿಸುವ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಈಗ ಗುರಿಯಾಗಿದೆ.

ರೈಲಿನಲ್ಲಿ ಒಂದು ಕಪ್ ಚಹಾಕ್ಕೆ 70 ರೂ. ಶುಲ್ಕ ವಿಧಿಸಲಾಗಿದೆ ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋ ಇದೀಗ ವೈರಲ್‌ ಆಗಿದೆ. ಒಂದು ಚಹಾಕ್ಕೆ 20 ರೂ. ಇತ್ತು, ಆದರೆ ಬಿಲ್‌ನಲ್ಲಿ 50 ಸೇವಾ ಶುಲ್ಕವೂ ಸೇರಿ ಒಟ್ಟು 70 ರು ಒಂದು ಟೀಗೆ ಬಿಲ್‌ ಬಂದಿತ್ತು. ಈ ಬಿಲ್‌ ನೋಡಿದ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪಲೋಡ್‌ ಮಾಡಿದ್ದಾನೆ. ಇದು ಈಗ ವೈರಲ್‌ ಆಗಿದೆ.

ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ ಪ್ರಾಣದ ಹಂಗು ತೊರೆದು ಪ್ರಯಾಣಿಕನ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ

ವ್ಯಕ್ತಿಯೊಬ್ಬರು ಜೂನ್ 28 ರಂದು ದೆಹಲಿಯಿಂದ ಭೋಪಾಲ್‌ಗೆ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಅಪ್‌ಲೋಡ್‌ ಮಾಡಿದ ಬಿಲ್‌ ಇನ್‌ವಾಯ್ಸ್‌ಗಳ ಫೋಟೋಗಳು ಟ್ವಿಟರ್ ಮತ್ತು ರೆಡ್ಡಿಟ್‌ನಲ್ಲಿ ವೈರಲ್ ಆಗಿವೆ.

70 per Tea Passengers Who Were Shocked at the Price of the Railway Department

ಆದರೆ ರೈಲ್ವೇ ಇಲಾಖೆ ಪ್ರಕಾರ, ಪ್ರಯಾಣಿಕರು ತಮ್ಮ ಎಕ್ಸ್‌ಪ್ರೆಸ್ ರೈಲಿಗೆ ಟಿಕೆಟ್ ಕಾಯ್ದಿರಿಸುವಾಗ ಯಾವುದೇ ಆಹಾರವನ್ನು ಪೂರ್ವ ಆರ್ಡರ್ ಮಾಡದಿದ್ದರೆ, ಸವಾರಿಯ ಸಮಯದಲ್ಲಿ ಏನನ್ನಾದರೂ ಆರ್ಡರ್ ಮಾಡುವಾಗ ಅವರು 50 ರು. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.

ವೈರಲ್ ವೀಡಿಯೊ: ಸೇತುವೆ ಮೇಲೆ ಏರ್‌ಲೀಕ್ ಸಮಸ್ಯೆ ಸರಿಪಡಿಸಿದ ಲೋಕೋಪೈಟ್ವೈರಲ್ ವೀಡಿಯೊ: ಸೇತುವೆ ಮೇಲೆ ಏರ್‌ಲೀಕ್ ಸಮಸ್ಯೆ ಸರಿಪಡಿಸಿದ ಲೋಕೋಪೈಟ್

ಭಾರತೀಯ ರೈಲ್ವೇಯು 2018ರಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದು, ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಆಹಾರ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳದ ಪ್ರಯಾಣಿಕರು ಮತ್ತು ಆನ್‌ಬೋರ್ಡ್‌ನಲ್ಲಿ ಊಟವನ್ನು ಖರೀದಿಸಲು ನಿರ್ಧರಿಸಿದರೆ, ಅಧಿಸೂಚನೆಗೆ ಹೆಚ್ಚುವರಿಯಾಗಿ ಪ್ರತಿ ಊಟಕ್ಕೆ 50 ರು. ಹೆಚ್ಚುವರಿ ಮೊತ್ತ ಊಟಕ್ಕೆ ಅಡುಗೆ ಶುಲ್ಕವನ್ನು ಐಆರ್‌ಸಿಟಿಸಿಯ ಆನ್-ಬೋರ್ಡ್ ಮೇಲ್ವಿಚಾರಕರು ವಿಧಿಸುತ್ತಾರೆ ಎಂದು ಹೇಳಿದೆ.

70 per Tea Passengers Who Were Shocked at the Price of the Railway Department

ಭಾರತೀಯ ರೈಲ್ವೇ 2018ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ, ರಾಜಧಾನಿ ಅಥವಾ ಶತಾಬ್ದಿಯಂತಹ ರೈಲುಗಳಲ್ಲಿ ಕಾಯ್ದಿರಿಸುವಾಗ ಪ್ರಯಾಣಿಕರು ಊಟವನ್ನು ಕಾಯ್ದಿರಿಸದಿದ್ದರೆ, ಪ್ರಯಾಣದ ಸಮಯದಲ್ಲಿ ಚಹಾ, ಕಾಫಿ ಅಥವಾ ಆಹಾರವನ್ನು ಆರ್ಡರ್ ಮಾಡಲು 50 ರು. ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳುತ್ತದೆ. ಅದು ಕೇವಲ ಒಂದು ಕಪ್ ಚಹಾ ಕೂಡ.

ಮೊದಲು ಶತಾಬ್ದಿ ಮತ್ತು ರಾಜಧಾನಿಯಂತಹ ರೈಲುಗಳಲ್ಲಿ ಆಹಾರ ಬೆಲೆಗಳು ಕೈಗೆಟಕುವಂತಿತ್ತು. ಆದರೆ, ಈಗ ದರವನ್ನು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಊಟದಿಂದ ಹೊರಗುಳಿಯಬಹುದು ಮತ್ತು ಪ್ರಯಾಣಕ್ಕಾಗಿ ಪಾವತಿಸಬಹುದು.

Recommended Video

Bill Gates ಹಂಚಿಕೊಂಡ ವಿಶೇಷ ಫೋಟೋ ನೋಡಿ ಗಾಬರಿಗೊಂಡ ಜನ | OneIndia Kannada

English summary
70 Rs for a cup of tea in the train. A photo shared on social media by a passenger claiming to have been charged has now gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X