ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದುವರೆಗೂ PAN ವಿವರ ನೀಡದ ಸಂಸದ, ಶಾಸಕರ ಸಂಖ್ಯೆ 206!

|
Google Oneindia Kannada News

ನವದೆಹಲಿ, ಅಕ್ಟೋಬರ್ 27: 'ಬ್ಯಾಂಕ್ ಖಾತೆಗೆ PAN(permanent account number) ಜೋಡಣೆ ಕಡ್ಡಾಯ... 1 ಲಕ್ಷಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರವನ್ನು ಬ್ಯಾಂಕ್ ಮೂಲಕ ನಡೆಸುವುದಕ್ಕೂ ಪ್ಯಾನ್ ಕಡ್ಡಾಯ... ಆದರೆ ಈ ಕಡ್ಡಾಯ ನೀತಿಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ?

ಶಾಸಕರು, ಸಂಸದರು ಎಲ್ಲ ಈ ಕಡ್ಡಾಯ ನೀತಿಯಿಂದ ಅತೀತರೇ? ಅಂಥದೊಂದು ಅನುಮಾನ ಹುಟ್ಟುವುದಕ್ಕೆ ಕಾರಣ ಇತ್ತೀಚೆಗೆ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮತ್ತು ನ್ಯಾಶ್ನಲ್ ಎಲೆಕ್ಷನ್ ವಾಚ್(NEW) ಬಿಡುಗಡೆ ಮಾಡಿದ ವರದಿ.

ಆಧಾರ್ ತೀರ್ಪು : ಅಳಿಯ ಅಲ್ಲ ಮಗಳ ಗಂಡ ಎಂದ ಟ್ವಿಟ್ಟಿಗರುಆಧಾರ್ ತೀರ್ಪು : ಅಳಿಯ ಅಲ್ಲ ಮಗಳ ಗಂಡ ಎಂದ ಟ್ವಿಟ್ಟಿಗರು

ಈ ವರದಿಯ ಪ್ರಕಾರ ಒಟ್ಟು 206 ಜನಪ್ರತಿನಿಧಿಗಳು ತಮ್ಮ ಪ್ಯಾನ್ ವಿವರವನ್ನು ನೀಡಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಆಸ್ತಿ ವಿವರಗಳನ್ನು ದೃಢಪಡಿಸಲು ಪ್ಯಾನ್ ಅಗತ್ಯ. ಆದರೆ ಎಷ್ಟೋ ಶಾಸಕರು, ಸಂಸದರು ಈ ವಿವರವನ್ನೇ ನೀಡಿಲ್ಲ ಎಂಬ ಆಘಾತಕಾರಿ ವಿಷಯ ಇದೀಗ ಹೊರಬಿದ್ದಿದೆ.

ಒಟ್ಟು 206 ಜನಪ್ರತಿನಿಧಿಗಳು

ಒಟ್ಟು 206 ಜನಪ್ರತಿನಿಧಿಗಳು

7 ಸಂಸದರು ಮತ್ತು 199 ಶಾಸಕರು ತಮ್ಮ ಪ್ಯಾನ್ ವಿವರಗಳನ್ನು ನೀಡಿಲ್ಲ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ಮತ್ತು ನ್ಯಾಶ್ನಲ್ ಎಲೆಕ್ಷನ್ ವಾಚ್(NEW) ಈ ವಿವರಗಳನ್ನು ಕಲೆಹಾಕಿದೆ.

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶ

ಕಾಂಗ್ರೆಸ್ಸಿಗರೇ ಜಾಸ್ತಿ!

ಕಾಂಗ್ರೆಸ್ಸಿಗರೇ ಜಾಸ್ತಿ!

ಪ್ಯಾನ್ ವಿವರವನ್ನು ನೀಡದವರಲ್ಲಿ ಕಾಂಗ್ರೆಸ್ಸಿಗರೇ ಹೆಚ್ಚಿದ್ದಾರೆ. ಒಟ್ಟು 51 ಕಾಂಗ್ರೆಸ್ ಶಾಸಕರು ಪ್ಯಾನ್ ವಿವರ ನೀದೆ ಉಳಿದರೆ, 42 ಬಿಜೆಪಿ ಶಾಸಕರು, 25 ಸಿಪಿಐಎಂ ಶಾಸಕರು ತಮ್ಮ ಪ್ಯಾನ್ ವಿವರಗಳನ್ನು ನೀಡಿಲ್ಲ.

PAN ನಿಮ್ಮ ಪ್ರೇಮಿ,ಆಧಾರ್ ಅವಳ ಬೆಸ್ಟ್ ಫ್ರೆಂಡ್,ನೀವು ಬ್ಯಾಂಕ್ ಖಾತೆ!PAN ನಿಮ್ಮ ಪ್ರೇಮಿ,ಆಧಾರ್ ಅವಳ ಬೆಸ್ಟ್ ಫ್ರೆಂಡ್,ನೀವು ಬ್ಯಾಂಕ್ ಖಾತೆ!

ಪ್ಯಾನ್ ವಿವರ ನೀಡದ 7 ಸಂಸದರು

ಪ್ಯಾನ್ ವಿವರ ನೀಡದ 7 ಸಂಸದರು

ಒಡಿಶಾದ ಮತ್ತು ತಮಿಳುನಾಡಿನ ತಲಾ ಇಬ್ಬರು ಸಂಸದರು ಮತ್ತು ಅಸ್ಸಾಂ, ಮಿಜೋರಾಮ್, ಲಕ್ಷದ್ವೀಪ್ ತಲಾ ಒಬ್ಬೊಬ್ಬ ಸಂಸದರು ತಮ್ಮ ಪ್ಯಾನ್ ವಿವರಗಳ್ನು ಘೋಷಿಸಿಲ್ಲ. ಇವರಲ್ಲಿ ಬಿಜೆಡಿಯ ಮತ್ತು ಎಐಎಡಿಎಂಕೆಯ ತಲಾ ಇಬ್ಬರು, ಎಐಯುಡಿಎಫ್ ಮತ್ತು ಎನ್ ಸಿಪಿಯ ತಲಾ ಒಬ್ಬೊಬ್ಬ ಶಾಸಕರು ಸೇರಿದ್ದಾರೆ.

ಮಿಜೋರಾಂನ 40 ರಲ್ಲಿ 28 ಶಾಸಕರ ಪ್ಯಾನ್ ವಿವರವಿಲ್ಲ!

ಮಿಜೋರಾಂನ 40 ರಲ್ಲಿ 28 ಶಾಸಕರ ಪ್ಯಾನ್ ವಿವರವಿಲ್ಲ!

ಇದೇ ನವೆಂಬರ್ 28 ರಂದು ಚುನಾವಣೆ ನಡೆಯಲಿರುವ ಮಿಜೋರಾಂ ರಾಜ್ಯದಲ್ಲಿ ಇರುವುದೇ 40 ವಿಧಾನಸಭಾ ಕ್ಷೇತ್ರ. ಅವುಗಳಲ್ಲಿ 28 ಶಾಸಕರು ತಮ್ಮ ಪ್ಯಾನ್ ವಿವರವನ್ನೇ ನೀಡಿಲ್ಲ ಎಂಬುದು ಸೋಜಿಗದ ಸಂಗತಿ! ಕೇರಳದಲ್ಲಿ 33 ಮತ್ತು ಮಧ್ಯಪ್ರದೇಶದಲ್ಲಿ 19 ಶಾಸಕರು ಪ್ಯಾನ್ ವಿವರಗಳನ್ನು ಘೋಷಿಸಿಲ್ಲ.

English summary
A reoport of Association for Democratic Reforms (ADR) and the National Election Watch (NEW) said, 7 sitting MPs and 199 MLAs in the country have not declared their PAN details which is needed in filing nomination papers for elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X