ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್
ನವದೆಹಲಿ, ನವೆಂಬರ್.21: ಕೆಲಸ ಇಲ್ಲ ಕೆಲಸ ಇಲ್ಲ ಎಂದು ಅಲೆಯುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಒಂದಲ್ಲ, ಎರಡಲ್ಲ, ಕೇಂದ್ರ ಸರ್ಕಾರದ ಅಡಿಯ ಬರೋಬ್ಬರಿ 7 ಲಕ್ಷ ಹುದ್ದೆಗಳು ಖಾಲಿ ಖಾಲಿ ಆಗಿವೆ ಎಂಬ ವಿಚಾರ ಇದೀಗ ಹೊರ ಬಿದ್ದಿದೆ.
ಕಳೆದ 2017-18ನೇ ಸಾಲಿನಲ್ಲಿ ಸಿ ಗ್ರೂಪ್ ನ 5,74,289 ಹುದ್ದೆಗಳು ಖಾಲಿಯಾಗಿದ್ದು, 89,638 ಬಿ ಗ್ರೂಪ್ ಹಾಗೂ 19,896 ಎ ಗ್ರೂಪ್ ನ ಹುದ್ದೆಗಳು ಖಾಲಿಯಾಗಿವೆ. ಒಟ್ಟು ಕೇಂದ್ರ ಸರ್ಕಾರದ 6,83,823 ಹುದ್ದೆಗಳು ಖಾಲಿಯಾಗಿದ್ದವು ಎಂದು ತಿಳಿದು ಬಂದಿದೆ.
BARCಯಲ್ಲಿ ನೇಮಕಾತಿ: 92 ಭದ್ರತಾ ಸಿಬ್ಬಂದಿ ಹುದ್ದೆಗಳಿವೆ
ಈ ಬಗ್ಗೆ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ. ವಿವಿಧ ಗ್ರೂಪ್ ಸಿ ಮತ್ತು ಲೆವೆಲ್ -1 ವರ್ಗದ 1,27,573 ಸಂಯೋಜಿತ ಖಾಲಿ ಹುದ್ದೆಗಳಿಗೆ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು ರೈಲ್ವೆ ಮತ್ತು ರೈಲ್ವೆ ನೇಮಕಾತಿ ಮಂಡಳಿ ಸಚಿವಾಲಯವು ಹೊರಡಿಸಿದೆ. ಎರಡು ವರ್ಷದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗಲಿವೆ ಎಂದು ಜೀತಂದೇರ್ ಸಿಂಗ್ ತಿಳಿಸಿದ್ದಾರೆ.
ಖಾಲಿ ಇರುವ ಉದ್ಯೋಗಕ್ಕೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್ಎಸ್ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 2019-20ನೇ ಸಾಲಿನಲ್ಲಿ 1,05,338 ಸ್ಥಾನಗಳನ್ನು ಭರ್ತಿ ಮಾಡಲಿದೆ ಎಂದು ಜೀತೇಂದ್ರ ಸಿಂಗ್ ಲಿಖಿತ ಮಾಹಿತಿ ತಿಳಿಸಿದ್ದಾರೆ.