ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸಮೀಪದಲ್ಲಿರುವ ಓಪ್ಪೋ ತಯಾರಿಕಾ ಘಟಕಕ್ಕೆ ಬೀಗ

|
Google Oneindia Kannada News

ನವದೆಹಲಿ, ಮೇ 18 : ನವದೆಹಲಿ ಸಮೀಪದಲ್ಲಿರುವ ಓಪ್ಪೋ ಮೊಬೈಲ್ ತಯಾರಿಕಾ ಕಂಪನಿಗೆ ಬೀಗ ಹಾಕಲಾಗಿದೆ. ಕಂಪನಿಯ 6 ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಆರು ಉದ್ಯೋಗಿಗಳಿಗೆ ಕೊರೊನಾ ಸೋಂಕು ತಗುಲಿದೆ. 3 ಸಾವಿರ ಉದ್ಯೋಗಿಗಳನ್ನು ಪರೀಕ್ಷೆ ಮಾಡಬೇಕಿದೆ ಎಂದು ಓಪ್ಪೋ ಸೋಮವಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕೊರೊನಾ ವೈರಸ್‌ನಿಂದ ಕುಸಿದ ಮೊಬೈಲ್ ಮಾರುಕಟ್ಟೆ ಕೊರೊನಾ ವೈರಸ್‌ನಿಂದ ಕುಸಿದ ಮೊಬೈಲ್ ಮಾರುಕಟ್ಟೆ

6 Employees Tested Positive For COVID 19 OPPO Shut Its Factory

ಎಲ್ಲಾ ಉದ್ಯೋಗಿಗಳಿಗೂ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದ್ದ ಓಪ್ಪೋ ಕೆಲವು ದಿನಗಳ ಹಿಂದೆ ದೆಹಲಿ ಸಮೀಪದಲ್ಲಿರುವ ತನ್ನ ತಯಾರಿಕಾ ಘಟಕವನ್ನು ಆರಂಭ ಮಾಡಿತ್ತು. ಉದ್ಯೋಗಿಗಳು ಘಟಕಕ್ಕೆ ಆಗಮಿಸಿ ಕೆಲಸ ಆರಂಭಿಸಿದ್ದರು.

ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ವಿಮ್ಸ್ ವೈದ್ಯರಿಗೆ ಕ್ವಾರೆಂಟೈನ್ ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ ವಿಮ್ಸ್ ವೈದ್ಯರಿಗೆ ಕ್ವಾರೆಂಟೈನ್

'ನಮ್ಮ ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಗ್ರೇಟರ್ ನೋಯ್ಡಾದಲ್ಲಿರುವ ಕಂಪನಿಯ ತಯಾರಿಕಾ ಘಟಕದ ಎಲ್ಲಾ ವಿಭಾಗವನ್ನು ಮುಚ್ಚಲಾಗಿದೆ. 3 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ಕೋವಿಡ್ - 19 ಪರೀಕ್ಷೆ ನಡೆಸಲಾಗಿದ್ದು, ವರದಿಯಾಗಿ ಕಾಯಲಾಗುತ್ತಿದೆ" ಎಂದು ಓಪ್ಪೋ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಪ್ರಯಾಣಿಕರೇ ಗಮನಿಸಿ; ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸೂಚನೆ ಪ್ರಯಾಣಿಕರೇ ಗಮನಿಸಿ; ದೆಹಲಿ-ಬೆಂಗಳೂರು ರೈಲು ಪ್ರಯಾಣಿಕರಿಗೆ ಸೂಚನೆ

ಓಪ್ಪೋ ಎಲ್ಲಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಹೇಳಿತ್ತು. ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಬದಲಾವಣೆ ಮಾಡಿದ ಕಂಪನಿಯನ್ನು ಪುನಃ ಆರಂಭಿಸಲಾಗಿತ್ತು. ಈಗ ಕೋವಿಡ್ - 19 ಭೀತಿ ಹಿನ್ನಲೆಯಲ್ಲಿ ಪುನಃ ಮುಚ್ಚಲಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದುವರೆಗೂ 10054 ಕೊರೊನಾ ಪ್ರಕರಣಗಳು ದಾಖಲಾಗಿವೆ. 160 ಜನರು ಮೃತಪಟ್ಟಿದ್ದಾರೆ. ಆದ್ದರಿಂದ, ದೆಹಲಿ ಸಮೀಪದಲ್ಲಿರುವ ತನ್ನ ಘಟಕವನ್ನು ಓಪ್ಪೋ ಮುಚ್ಚಿ, ಪ್ರಕಟಣೆ ಬಿಡುಗಡೆ ಮಾಡಿದೆ.

English summary
OPPO mobile phone company has shut it's factory near New Delhi after 6 employees tested positive for Coronavirus. Company restarted operations few days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X