ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ದೊಡ್ಡ ಕೋವಿಡ್ ಕೇಂದ್ರದಲ್ಲೀಗ ಉಳಿದಿರುವ ರೋಗಿಗಳೆಷ್ಟು?

|
Google Oneindia Kannada News

ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಕೋಟಿ ದಾಟಿದೆ. ಕೊರೊನಾ ಸೋಂಕಿನ ದಿನನಿತ್ಯದ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, ಸಾಮೂಹಿಕ ಕೊರೊನಾ ಲಸಿಕೆಯ ಕಾರ್ಯಕ್ರಮಕ್ಕೂ ಸಿದ್ಧತೆ ನಡೆಯುತ್ತಿದೆ.

ಇದೀಗ ದೆಹಲಿಯ ಚತರ್ಪುರದಲ್ಲಿನ ವಿಶ್ವದ ಅತಿ ದೊಡ್ಡ ಕೋವಿಡ್ ಕೇಂದ್ರದಲ್ಲಿನ ಸೋಂಕಿತರ ಸಂಖ್ಯೆಯೂ ಇಳಿಕೆಯಾಗಿರುವುದಾಗಿ ತಿಳಿದುಬಂದಿದೆ. ವಿಶ್ವದ ಅತಿ ದೊಡ್ಡ ಕೋವಿಡ್ ಕೇಂದ್ರ ಎಂದು ಕರೆಸಿಕೊಂಡಿದ್ದ, 10,000 ಹಾಸಿಗೆಗೆಳ ಸರ್ದಾರ್ ಪಟೇಲ್ ಕೋವಿಡ್ ಕೇಂದ್ರದಲ್ಲಿ ಸದ್ಯಕ್ಕೆ ಕೇವಲ 59 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ 26,624 ಹೊಸ ಕೋವಿಡ್ ಪ್ರಕರಣ ದಾಖಲುಭಾರತದಲ್ಲಿ 26,624 ಹೊಸ ಕೋವಿಡ್ ಪ್ರಕರಣ ದಾಖಲು

ಈ ಕೇಂದ್ರದ ಕಾರ್ಯಾಚರಣೆ ನಡೆಸುತ್ತಿರುವ ಇಂಡೋ ಟಿಬೆಟನ್ ಗಡಿ ಪೊಲೀಸರು (ಐಟಿಬಿಪಿ) ಈ ವರದಿ ನೀಡಿದ್ದು, ಅತಿ ಕಡಿಮೆ ಸಂಖ್ಯೆಯ ಸೋಂಕಿತರು ಉಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸೋಂಕಿತರ ಸಂಖ್ಯೆ 100ಕ್ಕೂ ಕಡಿಮೆಯಾಗಿದೆ. ಈ ಕೇಂದ್ರ ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಇಷ್ಟು ಕಡಿಮೆ ಸಂಖ್ಯೆಯ ರೋಗಿಗಳಿದ್ದಾರೆ ಎಂದು ತಿಳಿಸಿದ್ದಾರೆ.

59 Patients Under Treatment At Worlds Largest Covid Centre

ವರದಿಯ ಪ್ತಕಾರ, ಜುಲೈ 5ರಿಂದ 11,749 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ 11,749 ರೋಗಿಗಳಲ್ಲಿ 11,374 ರೋಗಿಗಳು ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 22ರ ಬೆಳಗ್ಗೆ ಹತ್ತು ಮಂದಿ ಗುಣಮುಖರಾಗಿದ್ದು, ಕೇಂದ್ರದಲ್ಲಿ 59 ಸೋಂಕಿತರು ಉಳಿದುಕೊಂಡಿದ್ದಾರೆ.

ಏಮ್ಸ್, ಸಫ್ದಾರ್ ಜಂಗ್, ಮ್ಯಾಕ್ಸ್ ಆಸ್ಪತ್ರೆ ಒಳಗೊಂಡಂತೆ ಹನ್ನೊಂದು ಆಸ್ಪತ್ರೆಗಳು ಈ ಕೋವಿಡ್ ಕೇಂದ್ರಗಳಿಗೆ ಸೋಂಕಿತರನ್ನು ಶಿಫಾರಸ್ಸು ಮಾಡುತ್ತಿವೆ. ಈಚೆಗೆ ದೆಹಲಿ ಕೊರೊನಾ ಸೋಂಕಿನ ಮೂರನೇ ಅಲೆಯನ್ನು ಕಂಡಿದ್ದು, ಕೇಂದ್ರದಲ್ಲಿ 2000 ಕೊರೊನಾ ಸೋಂಕಿತರು ದಾಖಲಾಗಿದ್ದರು. ಇದು ಕೇಂದ್ರದಲ್ಲಿ ಅಧಿಕ ಸಂಖ್ಯೆಯ ದಾಖಲಾತಿ ಎನಿಸಿತ್ತು.

ದೆಹಲಿಯಲ್ಲಿನ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ, ಐಟಿಬಿಪಿ ಕೋವಿಡ್ ಬೆಡ್ ಗಳ ಸಾಮರ್ಥ್ಯವನ್ನು ಹಾಗೂ ರಾಧಾ ಸಾಮಿ ಸತ್ಸಂಗ್ ಬೀಸ್ ನಲ್ಲಿ 2,000ದಿಂದ 3,000 ಹಾಸಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿತ್ತು. ಇದೀಗ ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದು ರಾಜ್ಯದಲ್ಲಿ ಸಮಾಧಾನ ತಂದಿದೆ.

English summary
Only 59 patients are undergoing treatment at world's largest 10,000-bed Sardar Patel COVID centre now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X