ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

|
Google Oneindia Kannada News

ದೆಹಲಿ, ಏಪ್ರಿಲ್ 2: ಜಗತ್ತಿನಾದ್ಯಂತ ಕೊರೊನಾ ವೈರಸ್‌ ನರಬಲಿ ತೆಗೆದುಕೊಳ್ಳುತ್ತಿದೆ. ಚೀನಾ, ಯುಎಸ್, ಇಟಲಿ, ಸ್ಪೇನ್, ಜರ್ಮನ್‌ ದೇಶಗಳಲ್ಲಿ ಮಾರಣಹೋಮ ನಡೆದುಹೋಗಿದೆ. ಲಕ್ಷಾಂತರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ.

ಈ ಕಡೆ ಭಾರತದಲ್ಲೂ ಕೊರೊನಾ ಹರಡುವಿಕೆ ಅಧಿಕವಾಗುತ್ತಿದೆ. ಸೋಂಕಿತರ ಸಂಖ್ಯೆ ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯೂ ಉಲ್ಬಣವಾಗುತ್ತಿದೆ. ಬೇರೆ ದೇಶಗಳಲ್ಲಿ ನಡೆದಂತೆ ಭಾರತದಲ್ಲಿ ನರಬಲಿ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ..

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ 'ಅಸ್ತ್ರ'

ಕೊರೊನಾದಿಂದ ತಪ್ಪಿಸಿಕೊಳ್ಳಲು ಜನರ ಪಾಲಿಗೆ ದೇವರಾಗಿ ನಿಂತಿರುವುದು ವೈದ್ಯರು. ಹಗಲು ರಾತ್ರಿ ಎನ್ನದೇ, ಮಡದಿ, ಮಕ್ಕಳನ್ನು ಬಿಟ್ಟು ದಿನಪೂರ್ತಿ ಕೊರೊನಾ ಪೀಡಿತರನ್ನ ರಕ್ಷಿಸುವ ಸಲುವಾಗಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.

50 Medical Staff Test Positive In India For Covid19

ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ಜೀವಕ್ಕೆ ಅಪಾಯ ತರುವಂತಿದೆ. ಆದರೂ ಹಿಂದೆ ಸರಿಯದ ವೈದ್ಯರು ಜನರನ್ನು ಕಾಪಾಡಲೇಬೇಕು ಎಂದು ಹೋರಾಡುತ್ತಿದ್ದಾರೆ. ದುರಂತ ಏನಪ್ಪಾ ಅಂದ್ರೆ ಕೊರೊನಾ ವಿರುದ್ಧ ಸೆಣಸಾಡುತ್ತಿರುವ ವೈದ್ಯರಿಗೂ ಸೋಂಕು ತಗುಲಿದೆ.

ಬೀಜಿಂಗ್, ಶಾಂಘೈನಲ್ಲಿಲ್ಲ ಕೊರೊನಾ ರಣಕೇಕೆ: ಹಿಂದಿದೆ ಚೀನಾ ಮಾಸ್ಟರ್ ಪ್ಲಾನ್?ಬೀಜಿಂಗ್, ಶಾಂಘೈನಲ್ಲಿಲ್ಲ ಕೊರೊನಾ ರಣಕೇಕೆ: ಹಿಂದಿದೆ ಚೀನಾ ಮಾಸ್ಟರ್ ಪ್ಲಾನ್?

ಭಾರತದಲ್ಲಿ ಇದುವರೆಗೂ 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊವಿಡ್ 19 ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ವೈದ್ಯರು, ನರ್ಸ್, ಇನ್ನಿತರ ಸಿಬ್ಬಂದಿ ಒಳಗೊಂಡಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್‌ ಪತ್ತೆ ಮಾಡಿದ ವೈದ್ಯ ಸಾವನ್ನಪ್ಪಿದ್ದ. ಕರ್ನಾಟಕದ ಮೊದಲು ಮೃತಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ಸೋಂಕು ಹರಡಿತ್ತು. ಈ ವೈದ್ಯನಿಗೆ ಈಗ ನೆಗಿಟಿವ್ ಬಂದಿದೆ.

ಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆಇಟಲಿ ಬಳಿಕ ಸ್ಪೇನ್‌ನಲ್ಲಿ ನರಬಲಿ: 10 ಸಾವಿರ ದಾಟಿದ ಸಾವಿನ ಸಂಖ್ಯೆ

ಸದ್ಯ ಭಾರತದಲ್ಲಿ ಸುಮಾರು 2000ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. 50ಕ್ಕೆ ಹೆಚ್ಚು ಜನರು ಮೃತಪಟ್ಟಿದ್ದಾರೆ. ದೆಹಲಿಯ ಕೆಜ್ರಿವಾಲ್ ಸರ್ಕಾರ, ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯನಿರತದಲ್ಲಿರುವ ವೈದ್ಯರು ಅಥವಾ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

English summary
Around 50 members of medical staff (including doctors, nurses and paramedics) across the country have tested positive for Coronavirus: Health Ministry official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X