ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ತಪ್ಪು ನಿರ್ಧಾರಗಳಿಂದಾಗಿ 50 ಲಕ್ಷ ಭಾರತೀಯರು ಬಲಿ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಜುಲೈ 22: ಕೇಂದ್ರದ ತಪ್ಪು ನಿರ್ಧಾರಗಳಿಗೆ 50 ಲಕ್ಷ ಭಾರತೀಯರು ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳಿಂದಲೇ ಅಧಿಕ ಸಾವು ಸಂಭವಿಸಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ಕೋವಿಡ್-19 ಎರಡನೇ ಅಲೆಯಲ್ಲಿ 50 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಈ ವರೆಗೂ 4.18 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.

 ಆಕ್ಸಿಜನ್ ಕೊರತೆ, ಸಾವು: ರಾಹುಲ್ ಆರೋಪಕ್ಕೆ ಸಂಬಿತ್ ಪಾತ್ರ ಉತ್ತರ ಆಕ್ಸಿಜನ್ ಕೊರತೆ, ಸಾವು: ರಾಹುಲ್ ಆರೋಪಕ್ಕೆ ಸಂಬಿತ್ ಪಾತ್ರ ಉತ್ತರ

ಜಾಗತಿಕ ಅಭಿವೃದ್ಧಿಯ ಕೇಂದ್ರದ ಅಧ್ಯಯನ ವರದಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ರೈತರ ಹೋರಾಟವನ್ನೂ ಉಲ್ಲೇಖಿಸಿದ್ದು, "ರೈತರ ಪ್ರತಿಭಟನೆಯಲ್ಲಿ ಜೀವ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವುದಕ್ಕೂ ನಿರಾಕರಿಸಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವವರ ಕಣ್ಣೀರಲ್ಲಿ ಎಲ್ಲವೂ ದಾಖಲಾಗಿದೆ" ಎಂದು ಹೇಳಿದ್ದಾರೆ.

50 Lakh Indians Died During Second Covid Wave Due To centres Wrong Decisions: Rahul Gandhi

ಸಾಂಕ್ರಾಮಿಕ ರೋಗ ಪ್ರಾರಂಭದಿಂದ ಜೂನ್ 2021ರವರೆಗೆ ಮೂರು ವಿಭಿನ್ನ ದತ್ತಾಂಶ ಮೂಲಗಳಿಂದ ಹೆಚ್ಚುವರಿ ಮರಣ ಪ್ರಮಾಣವನ್ನು ಅಂದಾಜು ಮಾಡಿರುವ ಜಾಗತಿಕ ಅಭಿವೃದ್ಧಿ ಕೇಂದ್ರದ ಹೊಸ ಅಧ್ಯಯನವನ್ನು ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಇಲ್ಲಿಯವರೆಗಿನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಕೊರೊನಾ ಸೋಂಕಿನಿಂದ ಸುಮಾರು 4.18 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳುತ್ತದೆ.

English summary
Congress leader Rahul Gandhi on Wednesday alleged that around 50 lakh Indians died during the second wave of COVID-19 infection due to "wrong decisions" of the Union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X