ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜತೆ ಇಂದು 50-60 ಸಚಿವರ ಪ್ರಮಾಣವಚನ ಸಾಧ್ಯತೆ

|
Google Oneindia Kannada News

ನವದೆಹಲಿ, ಮೇ 30: ಗುರುವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎನ್‌ಡಿಎ ಮಿತ್ರಕೂಟದ 8-10 ಸಂಸದರು ಸೇರಿದಂತೆ 50-60 ಸಂಸದರು ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

ಪ್ರಮಾಣವಚನಕ್ಕೂ ಮುನ್ನ ಮೋದಿಯಿಂದ ಬಾಪು, ಅಟಲ್ ಸ್ಮರಣೆ ಪ್ರಮಾಣವಚನಕ್ಕೂ ಮುನ್ನ ಮೋದಿಯಿಂದ ಬಾಪು, ಅಟಲ್ ಸ್ಮರಣೆ

ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅಮಿತ್ ಶಾ ಅವರು ಮೋದಿ ಸಂಪುಟವನ್ನು ಸೇರುವ ನಿರೀಕ್ಷೆಯಿದೆ. ಅವರೊಂದಿಗೆ ಬಿಜೆಪಿಯ ಇನ್ನೂ ಅನೇಕರು ಸಂಪುಟ ಸೇರಿಕೊಳ್ಳಲಿದ್ದಾರೆ. ಚುನಾವಣಾ ಪ್ರಚಾರ ಮತ್ತು ಆಂತರಿಕ ಕಾರ್ಯತಂತ್ರ ತಂಡಗಳಲ್ಲಿ ಸಾಕಷ್ಟು ಶ್ರಮವಹಿಸಿದ ಮುಖಂಡರಿಗೆ ಪ್ರತಿಫಲವಾಗಿ ಸಂಪುಟದಲ್ಲಿ ಕೊಡುಗೆ ದೊರಕಲಿದೆ.

ಮೋದಿ ಸಂಪುಟಕ್ಕೆ ಯಾರು ಇನ್ ಯಾರು ಔಟ್? ಮೋದಿ ಸಂಪುಟಕ್ಕೆ ಯಾರು ಇನ್ ಯಾರು ಔಟ್?

ಮೂಲಗಳ ಪ್ರಕಾರ ಗುರುವಾರ ಕನಿಷ್ಠ 50-60 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಲ್ಲಿ 8-10 ಮಂದಿ ಎನ್‌ಡಿಎ ಮೈತ್ರಿಕೂಟದ ಸಂಸದರು ಇರಲಿದ್ದಾರೆ. ಕೇಂದ್ರ ಸಂಪುಟದ ಗರಿಷ್ಠ ಸಾಮರ್ಥ್ಯ 81 ಸಚಿವರಾಗಿದ್ದು (ಲೋಕಸಭೆ ಸಾಮರ್ಥ್ಯದ ಶೇ 15ರಷ್ಟು), ಶೀಘ್ರದಲ್ಲಿಯೇ ಮತ್ತೊಂದು ಸಂಪುಟ ವಿಸ್ತರಣೆ ನಡೆಯಲಿದೆ.

2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು 2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು

50-60 ministers may take oath along with narendra modi

ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಬಿಜೆಪಿ ಪ್ರತಿನಿಧಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಅವರಿಗೆ ಹೆಚ್ಚು ಅವಕಾಶ ಸಿಗುವ ಸಾಧ್ಯತೆ ಇದೆ. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣದಿಂದ ಅಧಿಕ ಸಂಖ್ಯೆ ಸಂಸದರು ಆಯ್ಕೆಯಾಗಿದ್ದು, ಅವರಿಗೆ ಆದ್ಯತೆ ಸಿಗಬಹುದು.

English summary
50 to 60 minister including 8-10 allies likely to take oath along with Prime Minister Narendra Modi in Thursday ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X