ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಮ್ ವರ್ಕ್‌ ಮಾಡಿಲ್ಲ ಅಂತ ಮಗು ಕೈಕಾಲು ಕಟ್ಟಿ ಬಿಸಿಲಲ್ಲಿ ಬಿಟ್ಟ ತಾಯಿ!

|
Google Oneindia Kannada News

ನವದೆಹಲಿ, ಜೂನ್ 9: ಮಕ್ಕಳು ಮಾತು ಕೇಳಲಿಲ್ಲ ಎಂದಾದರೆ ಪೋಷಕರು ಶಿಕ್ಷೆ ಕೊಡುವುದೇನೋ ಸಾಮಾನ್ಯ. ಆದರೆ, ಶಿಕ್ಷೆಯು ಎಂತದ್ದು ಎನ್ನುವುದು ಮುಖ್ಯವಾಗುತ್ತದೆ. ಕೇವಲ ಹೋಂ ವರ್ಕ್ ಮಾಡಲಿಲ್ಲ ಎಂದಾದರೆ ನೀವಾದರೆ ಯಾವ ಶಿಕ್ಷೆ ಕೊಡುವಿರಿ?. ಒಂದೆರಡು ಏಟಾಗಿರಬಹುದು ಅಥವಾ ತಿಳುವಳಿಕೆ ಹೇಳಿ ಹೋಂ ವರ್ಕ್ ಮಾಡುವಿರಿ. ಆದರೆ ದೆಹಲಿಯಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ.

ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಪೋಷಕರು ಮಗು ಎನ್ನುವುದನ್ನು ನೋಡದೆ ಕ್ರೌರ್ಯ ಮೆರೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 5 ವರ್ಷದ ಬಾಲಕಿಯನ್ನು ಹಗ್ಗದಿಂದ ಕಟ್ಟಿ, ಬಿಸಿಲಿನಲ್ಲಿ ಮಲಗಿಸಿದ್ದಾರೆ ಎಂದು ಆರೋಪಿಸಿಲಾಗಿದೆ. ಬಿಸಿಲಿನ ಝಳವನ್ನು ತಾಳಲಾರದೆ, ಇತ್ತ ಎದ್ದೇಳಲು ಆಗದೆ ಬಿಸಿಲಿನಲ್ಲೇ ಅಸಹಾಯಕಳಾಗಿರುವ ಘಟನೆ ಎಂತವರಿಗೂ ಕರುಳು ಚುರ್ ಎನ್ನುವಂತೆ ಮಾಡಿದೆ.

ಶಾಲೆಯ ಹೆಸರು ಬದಲಾವಣೆ: 8 ದಿನಗಳಿಂದ ತರಗತಿ ಬಹಿಷ್ಕರಿಸಿದ 11 ಮಕ್ಕಳು!!ಶಾಲೆಯ ಹೆಸರು ಬದಲಾವಣೆ: 8 ದಿನಗಳಿಂದ ತರಗತಿ ಬಹಿಷ್ಕರಿಸಿದ 11 ಮಕ್ಕಳು!!

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅಪ್ರಾಪ್ತೆಯು 1 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದೆಹಲಿಯ ಕರವಾಲ್ ನಗರದ ತುಖ್ಮೀರ್‌ಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾಳೆ. ಬಾಲಕಿಗೆ ಶಿಕ್ಷೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

5 Year Old Girl Tied And Left On Terrace In Scorching Sun For Not Doing Homework in Delhi

ನಂಬಲು ಅಸಾಧ್ಯವಾದ ವಿಕೃತಿ

ಬುಧವಾರ ಬೆಳಗ್ಗೆ ಈಶಾನ್ಯ ದೆಹಲಿಯಲ್ಲಿ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ಕಟ್ಟಿಹಾಕಿ ಮನೆಯ ಟೆರೇಸ್ ಮೇಲೆ ಬಿಟ್ಟಿದ್ದಾಳೆ. ಬಾಲಕಿಯ ಕೈಗಳು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಉರಿಯುತ್ತಿರುವ ಸೂರ್ಯನ ಕೆಳಗೆ ಆಕೆ ನರಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದನ್ನ ಕಂಡು ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಪೋಷಕರನ್ನು ಪತ್ತೆಹಚ್ಚಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಒಂದು ಕಿಮೀ ದೂರದ ಶಾಲೆಗೆ ಒಂದೇ ಕಾಲಲ್ಲಿ ನಡೆದುಹೋಗುವ ಬಾಲಕಿಒಂದು ಕಿಮೀ ದೂರದ ಶಾಲೆಗೆ ಒಂದೇ ಕಾಲಲ್ಲಿ ನಡೆದುಹೋಗುವ ಬಾಲಕಿ

ಭಾರತದಲ್ಲಿ ಮಕ್ಕಳ ರಕ್ಷಣೆಗಾಗಿ ಇರುವ ಸಾಂವಿಧಾನಿಕ ಹಕ್ಕುಗಳು

ಶಿಕ್ಷಕರು, ಮಾರ್ಗದರ್ಶಕರು ಮತ್ತು ಪೋಷಕರಿಂದ ಮಕ್ಕಳಿಗಾಗುವ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಡೆಯಲು ಭಾರತದ ಸಂವಿಧಾನದಲ್ಲಿ ಹಲವಾರು ಕಾನೂನುಗಳು ಇವೆ. ಇವೆಲ್ಲವೂ ಮಕ್ಕಳನ್ನು ಹಿಂಸೆಯಿಂದ ರಕ್ಷಿಸುವ ಗುರಿಯನ್ನು ಹೊಂದಿರುವ ಕಾನೂನುಗಳಾಗಿವೆ.

ದೈಹಿಕ ಶಿಕ್ಷೆಯು ಮಗುವಿನ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟುಮಾಡುತ್ತದೆ ಹಾಗೂ ಘನತೆಯ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತದೆ. ಆದ್ದರಿಂದಲೇ ಸಂವಿಧಾನದ 21 ನೇ ವಿಧಿಯು 14 ವರ್ಷ ವಯಸ್ಸಿನ ಮಕ್ಕಳಿಗೆ ಶಿಕ್ಷಣದ ಹಕ್ಕು ಸೇರಿದಂತೆ ಯಾವುದೇ ವ್ಯಕ್ತಿಯ ಬದುಕುವ ಹಕ್ಕು ಮತ್ತು ಘನತೆಯನ್ನು ರಕ್ಷಿಸುವ ಕಾನೂನನ್ನು ಹೊಂದಿದೆ.

ಸಂವಿಧಾನದ 39 (ಇ) ವಿಧಿಯು "ಮಕ್ಕಳ ಎಳೆಯ ವಯಸ್ಸನ್ನು ದುರುಪಯೋಗಪಡಿಸಿಕೊಳ್ಳಬಾರದು" ಎಂದು ಹೇಳುತ್ತದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 325 (ಸ್ವಯಂಪ್ರೇರಿತವಾಗಿ ಘೋರವಾದ ಗಾಯ ಉಂಟುಮಾಡುವುದು), 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಂಭೀರ ಹಾನಿಯನ್ನುಂಟುಮಾಡುವುದು), 352 (ದಾಳಿ ಅಥವಾ ಗಂಭೀರ ಪ್ರಚೋದನೆ) ಇವುಗಳು ಮಕ್ಕಳಿಗೆ ನೀಡುವ ದೈಹಿಕ ಶಿಕ್ಷೆಯ ವಿರುದ್ಧ ರಕ್ಷಣೆಗಾಗಿ ಸಲಹೆ ನೀಡುತ್ತವೆ.

Recommended Video

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲು | *Cricket | OneIndia Kannada

15 ವರ್ಷದ ಒಳಗಿನ ಮಗುವಿಗೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡುವ ವ್ಯಕ್ತಿಗೆ ಐಪಿಸಿ ಸೆಕ್ಷನ್ 88 ಮತ್ತು 89 ರ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ನೀಡಿದೆ.

(ಒನ್ಇಂಡಿಯಾ ಸುದ್ದಿ)

English summary
A five year old girl was left stranded on the terrace of her home in Northeast Delhi on Wednesday morning. The girl's hands and feet tied the video gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X