• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಧಾರ್ ಸಿಂಧುತ್ವ ವಿಚಾರ: ಇಂದು ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನೆ

|

ನವದೆಹಲಿ, ಜನವರಿ 11: ಆಧಾರ್‌ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು 2018ರ ಸೆಪ್ಟೆಂಬರ್ 29ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಇಂದು ವಿಚಾರಣೆ ಶುರುಮಾಡಲಿದೆ.

ಬಡವರಿಗೆ ಘನತೆ ನೀಡುವ ಸರ್ಕಾರದ "ನ್ಯಾಯಸಮ್ಮತ ಗುರಿ" ಯನ್ನು ಪೂರೈಸಲು ವೈಯಕ್ತಿಕ ಗೌಪ್ಯತೆಗೆ ಸಮಂಜಸವಾದ ನಿರ್ಬಂಧವೆಂದು ಆಧಾರ್ ಕಾರ್ಯಕ್ರಮವನ್ನು ಎತ್ತಿಹಿಡಿಯುವ ನ್ಯಾಯಾಲಯದ ಬಹುಮತದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಸೇರಿದಂತೆ ಏಳು ಅರ್ಜಿಗಳನ್ನು ಖಾನ್ವಿಲ್ಕರ್ ಸೋಮವಾರ ಪರಿಶೀಲಿಸಲಿದ್ದಾರೆ.

ಜನರ ಖಾಸಗಿತನದ ಹಕ್ಕು ಮತ್ತು ವೈಯಕ್ತಿಕ ಘನತೆಯನ್ನು ಸಮತೋಲನದಲ್ಲಿ ನೋಡಲಾಗಿದೆ. ಲಕ್ಷಾಂತರ ಜನರಿಗೆ ಸೌಲಭ್ಯ ಒದಗಿಸುವ ದೊಡ್ಡ ಉದ್ದೇಶವನ್ನು ಆಧಾರ್ ಹೊಂದಿದೆ. ಆಧಾರ್ ಜೋಡಣೆಯು ಸೌಲಭ್ಯ ಮತ್ತು ಸಹಾಯಧನ ನೀಡಿಕೆಗೆ ಸೀಮಿತವಾಗಬಹುದು ಎಂದು 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

ಜನವರಿ 11 ರಂದು ಐವರು ನ್ಯಾಯಮೂರ್ತಿಗಳಾದ ಖಾನ್ವಿಲ್ಕರ್ ಮತ್ತು ಚಂದ್ರಚೂಡ್, ಅಶೋಕ್ ಭೂಷಣ್, ಎಸ್. ಅಬ್ದುಲ್ ನಜೀರ್ ಮತ್ತು ಬಿ.ಆರ್. ಗವಾಯಿ, ಮಧ್ಯಾಹ್ನ 1.30 ಕ್ಕೆ ಮರುಪರಿಶೀಲನೆ ಮನವಿಗಳನ್ನು ಪರಿಗಣಿಸುತ್ತಾರೆ.

English summary
A five-judge Bench of the Supreme Court led by Justice A.M. Khanwilkar will examine on Monday seven petitions on to Review Verdict Upholding Aadhaar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X