ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ಬರುವವರಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ: ಸರ್ಕಾರಕ್ಕೆ ತಲೆನೋವು

|
Google Oneindia Kannada News

ನವದೆಹಲಿ, ಜೂನ್ 20: ದೆಹಲಿಗೆ ಬರುವವರಿಗೆ 5 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಆದೇಶದಲ್ಲಿ ತಿಳಿಸಿದ್ದು, ಆಮ್ ಆದ್ಮಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

Recommended Video

Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

ದೆಹಲಿಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇದೆ. ಗೃಹ ಬಂಧನ ವಿಧಿಸುವುದರಿಂದ ವ್ಯಕ್ತಿಗೆ ಕೊರೊನಾ ಸೋಂಕು ಇದ್ದು , ಲಕ್ಷಣಗಳಿಲ್ಲದಿದ್ದರೆ ಇಡೀ ಕುಟುಂಬಕ್ಕೆ ಸೋಂಕು ಹರಡುತ್ತದೆ. ಹೀಗಾಗಿ ದೆಹಲಿಗೆ ಬರುವವರಿಗೆ ಐದು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿರಲಿದೆ.

Breaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆBreaking: ಭಾರತದಲ್ಲಿ ಮತ್ತೆ 14,516 ಕೊರೊನಾ ಸೋಂಕಿತರು ಪತ್ತೆ

ಐದು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಇಲ್ಲವಾದಲ್ಲಿ ಮನೆಗೆ ಕಳುಹಿಸಿಕೊಡಲಾಗುತ್ತದೆ.

5-Day Institutional Quarantine Mandatory In Delhi

ದೆಹಲಿಯಲ್ಲಿ ಆಸ್ಪತ್ರೆ, ಹಾಸಿಗೆ, ವೈದ್ಯರ ಕೊರತೆ ಇದೆ, ಪ್ರತಿಯೊಬ್ಬರಿಗೂ ಸಾಂಸ್ಥಿಕ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಈಗ ಒಟ್ಟು 49,979 ಕೊರೊನಾ ಸೋಂಕಿತ ಪ್ರಕರಣಗಳಿವೆ. 21,341 ಮಂದಿ ಗುಣಮುಖರಾಗಿದ್ದಾರೆ. 1,969 ಮಂದಿ ಮೃತಪಟ್ಟಿದ್ದಾರೆ. ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶೀತ, ಜ್ವರ ಕಾಣಿಸಿಕೊಂಡಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಅವರಿಗೆ ಯಾವುದೇ ಸೋಂಕು ಇಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿತ್ತು.

English summary
No COVID-19 patient must be allowed to undergo home isolation before mandatory five-day institutional quarantine, Delhi Lieutenant Governor Anil Baijal said in an order, prompting a sharp response from the Delhi government, which has been grappling with an acute shortage of hospital beds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X