ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 5 ಗಂಟೆ ಡಿಕೆಶಿ ವಿಚಾರಣೆ: ಇ.ಡಿ.ಗೆ ಬೇಕಾದ ಸತ್ಯ ಹೊರಬರುತ್ತಾ?

|
Google Oneindia Kannada News

Recommended Video

DK Shivakumar Grilled For 5 hours | ಇ.ಡಿ.ಗೆ ಬೇಕಾದ ಸತ್ಯ ಹೊರಬರುತ್ತಾ? | Oneindia Kannada

ನವದೆಹಲಿ, ಅಕ್ಟೋಬರ್ 4: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರ ವಿಚಾರಣೆ ಇಂದು ಮುಂದುವರೆಯಲಿದೆ.

ಬೆಳಗ್ಗೆ 10ರಿಂದ 3 ಗಂಟೆಯವರೆಗೆ ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಯಲಿದೆ. 2017ರಲ್ಲಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಪತ್ತೆಯಾದ ಹಣಕ್ಕೆ ಸಂಬಂಧಿಸಿದಂತೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸುತ್ತಿದ್ದಾರೆ.

ಈ ವೇಳೆ ನ್ಯಾಯಾಲಯದಲ್ಲಿ ಸ್ಪಷ್ಟನೆ ನೀಡಿದ್ದ ಡಿಕೆಶಿ ಪರ ವಕೀಲರು ಇನ್ನೂ ಪ್ರತಿದಿನ 3 ರಿಂದ 5 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಲು ಡಿಕೆಶಿ ಸಹಕರಿಸುವುದಾಗಿ ತಿಳಿಸಿದ್ದರು. ಹೀಗಾಗಿ ನ್ಯಾಯಾಲಯದ ಸಹ ಇಡಿ ಅಧಿಕಾರಿಗಳಿಗೆ ತಿಹಾರ್ ಜೈಲಿನಲ್ಲೇ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು.

ಡಿಕೆಶಿಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನದ ಅವಧಿ ಅ.15 ರವರೆಗೆ ವಿಸ್ತರಣೆಡಿಕೆಶಿಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನದ ಅವಧಿ ಅ.15 ರವರೆಗೆ ವಿಸ್ತರಣೆ

ಹೀಗಾಗಿ ಇಡಿ ಅಧಿಕಾರಿಗಳು ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ತಿಹಾರ್ ಜೈಲಿನಲ್ಲೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಕೆಶಿ ಆಸ್ತಿ ಏರಿಕೆ ಸಂಬಂಧ ತೀವ್ರ ಅನುಮಾನ ವ್ಯಕ್ತಪಡಿಸಿರುವ ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಡಿಕೆಶಿ ಸಂಬಂಧಿಕರು, ಆತ್ಮೀಯರನ್ನು ವಿಚಾರಣೆ ಒಳಪಡಿಸುತ್ತಿದ್ದಾರೆ.

ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ನಟರಾಜ್ ವಾದ: ಡಿಕೆಶಿ ವಿಚಾರಣೆ ಕುರಿತ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಡಿಕೆಶಿ ಮಗಳು ಐಶ್ವರ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಚಾರಣೆಯನ್ನೂ ನಡೆಸಿರುವ ಅಧಿಕಾರಿಗಳು ನಿನ್ನೆ ಡಿಕೆಶಿ ಸಹೋದರ ಹಾಗೂ ಡಿ.ಕೆ. ಸುರೇಶ್ ಅವರನ್ನು ದಿನವಿಡೀ ವಿಚಾರಣೆ ನಡೆಸಿದ್ದರು.

ಸತತ ಒಂದು ವಾರಗಳ ಕಾಲ ವಿಚಾರಣೆ ನಡೆಸಿದ್ದರು

ಸತತ ಒಂದು ವಾರಗಳ ಕಾಲ ವಿಚಾರಣೆ ನಡೆಸಿದ್ದರು

ಕಳೆದ ತಿಂಗಳು ಸತತ ಒಂದು ವಾರಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸೆ.13ರಂದು ಡಿಕೆಶಿ ಅವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಿದ್ದರು. ಹೀಗಾಗಿ ಕಳೆದ 22 ದಿನಗಳಿಂದ ಡಿಕೆಶಿ ಇಡಿ ಅಧಿಕಾರಿಗಳ ವಶದಲ್ಲೇ ಇದ್ದಾರೆ.

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಕಾಲಕಳೆದಿರುವ ಆರೋಪ

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಕಾಲಕಳೆದಿರುವ ಆರೋಪ

ಆದರೆ, ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಡಿ.ಕೆ. ಶಿವಕುಮಾರ್ ಇಡಿ ನ್ಯಾಯಾಂಗ ಬಂಧನದಲ್ಲಿ ಇದ್ದರೂ ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗದೆ ಚಿಕಿತ್ಸೆಯ ನೆಪದಲ್ಲಿ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ಇಡಿ ಅಧಿಕಾರಿಗಳ ಆರೋಪ. ಇದೇ ಕಾರಣಕ್ಕೆ ಅಕ್ಟೋಬರ್ 1 ರಂದು ವಿಚಾರಣೆ ನಡೆಸಿದ್ದ ಇಡಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಡಿಕೆಶಿ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 14ರ ವರೆಗೆ ವಿಸ್ತರಿಸಿದ್ದರು.

ಅ.14ರವರೆಗೆ ನ್ಯಾಯಾಂಗ ಬಂಧನ ಮುಂದುವರಿಕೆ

ಅ.14ರವರೆಗೆ ನ್ಯಾಯಾಂಗ ಬಂಧನ ಮುಂದುವರಿಕೆ

ಡಿಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಇಡಿ ವಿಶೇಷ ನ್ಯಾಯಾಲಯ ಅ. 14ರವರೆಗೆ ಡಿಕೆ ಶಿವಕುಮಾರ್ ಅವರನ್ನು ತಿಹಾರ್​ ಜೈಲಿನಲ್ಲೇ ಇರಿಸುವಂತೆ ಆದೇಶ ನೀಡಿತ್ತು.

ಡಿಕೆ ಸುರೇಶ್‌ ವಿಚಾರಣೆ

ಡಿಕೆ ಸುರೇಶ್‌ ವಿಚಾರಣೆ

ಮಾಜಿ ಸಚಿವ ಡಿಕೆ ಶಿವಕುಮಾರ್​ಗೆ ಸೇರಿದ್ದ ನವದೆಹಲಿಯ ಫ್ಲಾಟ್​ನಲ್ಲಿ ಸಿಕ್ಕಿದ್ದ ಅಕ್ರಮ ಹಣದ ಬಗ್ಗೆ ಡಿಕೆಶಿ ಆತ್ಮೀಯರನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಸಂಸದ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದ್ದ ಇಡಿ ಅಧಿಕಾರಿಗಳ ಮುಂದೆ ನಿನ್ನೆ ಡಿಕೆ ಸುರೇಶ್ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಇಂದು ಬೆಳಗ್ಗೆಯಿಂದ ಮತ್ತೆ ವಿಚಾರಣೆ ಮುಂದುವರೆಯಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಲೋಕನಾಯಕ ರಸ್ತೆಯಲ್ಲಿರುವ ಇಡಿ ಕೇಂದ್ರ ಕಚೇರಿಯಲ್ಲಿ ಡಿಕೆ ಸುರೇಶ್ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

English summary
The Trial of DK Shivakumar in Tihar Jail on charges of illicit money laundering will continue today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X