ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಮ್ಮಾರಿ ಕೊರೊನಾದಿಂದ ಪ್ರಾಣಬಿಟ್ಟ 45 ದಿನದ ಹಸುಗೂಸು

|
Google Oneindia Kannada News

ದೆಹಲಿ, ಏಪ್ರಿಲ್ 19: ಹೆಮ್ಮಾರಿ ಕೊರೊನಾ ವೈಸರ್‌ ಅಟ್ಟಹಾಸಕ್ಕೆ 45 ದಿನ ಹಸುಗೂಸು ಬಲಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹೆತ್ತ ತಾಯಿಯ ಮುಖವನ್ನು ಕೂಡ ಇನ್ನು ಸರಿಯಾಗಿ ನೋಡಿರದ ಮಗು ಕೊರೊನಾದಿಂದ ಸಾವನ್ನಪ್ಪಿದೆ.

ದೆಹಲಿ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ಮಗುವಲ್ಲಿ ಕೊರೊನಾ ರೋಗ ಲಕ್ಷಣ ಕಂಡು ಬಂದ ಹಿನ್ನೆಲೆ ಏಫ್ರಿಲ್ 14 ರಂದು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಎರಡು ದಿನಗಳ ಬಳಿಕ ಏಫ್ರಿಲ್ 16 ರಂದು ಮಗುವಿಗೆ ಸೋಂಕು ತಗುಲಿರುವುದು ದೃಢವಾಗಿತ್ತು.

ರಾಜ್ಯದಲ್ಲಿ ಮೊದಲಗೆ ಬಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆರಾಜ್ಯದಲ್ಲಿ ಮೊದಲಗೆ ಬಾರಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ

ಭಾರತದ ಪೈಕಿ ಕೊರೊನಾಗೆ ಬಲಿಯಾದ ಅತಿ ಕಡಿಮೆ ವಯಸ್ಸಿನ ಮಗು ಎಂದು ಹೇಳಲಾಗುತ್ತಿದೆ. ಇನ್ನು ಏಪ್ರಿಲ್ 19 ರಂದು ಮಹಾರಾಷ್ಟ್ರದ ಪಾಲಗಾರ್ ಜಿಲ್ಲಾ ಆಸ್ಪತ್ರೆಯಲ್ಲಿ 8 ದಿನ ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.

45 Day Old Child Died Of Covid 19 In Delhi

ಎರಡು ದಿನಗಳ ಹಿಂದೆಯಷ್ಟೇ ಕೊಲ್ಕತ್ತಾದಲ್ಲಿ 21 ತಿಂಗಳ ಮಗುವಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ ಎಂದು ಸುದ್ದಿ ವರದಿಯಾಗಿತ್ತು.

ಅಂದ್ಹಾಗೆ, ಜಗತ್ತಿನಾದ್ಯಂತ ಕೊರೊನಾಗೆ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಭಾರತದಲ್ಲೂ ಈಗ ವರ್ಷ ತುಂಬದ ಹಲವು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಸಹಜವಾಗಿ ಆತಂಕ ಸೃಷ್ಟಿಸುತ್ತಿದೆ.

ಭಾರತದಲ್ಲಿ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯಭಾರತದಲ್ಲಿ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯ

ಕೊರೊನಾ ವೈರಸ್‌ ಎಂಬುದು ಎಲ್ಲ ವಯಸ್ಸಿನವರಿಗೆ ಬರುತ್ತಿದೆ. ಇದರಿಂದ ಯಾರಿಗೂ ವಿನಾಯಿತಿ ಇಲ್ಲ. ಆದರೆ, ಅಂಕಿ ಅಂಶಗಳ ಪ್ರಕಾರ, ಹೆಚ್ಚು ಹಿರಿಯ ನಾಗರಿಕರು ಸಾವನ್ನಪ್ಪಿದ್ದಾರೆ. ಇದುವರೆಗೂ ಭಾರತದಲ್ಲಿ ಒಟ್ಟು 15712 ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಒಟ್ಟು 507 ಜನರು ಮೃತಪಟ್ಟಿದ್ದಾರೆ.

English summary
45 Day old child died of Covid 19 in delhi hospital after testing Positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X