ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳ ಅರ್ಜಿ ಇನ್ನೂ ಬಾಕಿ, ಹಳೆ ಕಾನೂನಿನಲ್ಲಿ ವಿದೇಶಿಯರಿಗೆ ಪೌರತ್ವ

|
Google Oneindia Kannada News

ನವದೆಹಲಿ, ಆಗಸ್ಟ್‌ 04: ಭಾರತದ ಪೌರತ್ವಕ್ಕಾಗಿ ಸಲ್ಲಿಸಲಾದ ಹಲವು ದೇಶಗಳಿಗೆ ಸೇರಿದ ಹಿಂದೂಗಳ ಸುಮಾರು 4,046 ಅರ್ಜಿಗಳು ಬಾಕಿ ಇವೆ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಸೇರಿದ ಹಿಂದೂಗಳಿಂದ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಲಾದ 4 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬಾಕಿ ಇವೆ ಎಂದು ಹೇಳಿದ್ದಾರೆ.

ಐದು ವರ್ಷದಲ್ಲಿ ಭಾರತದ ಪೌರತ್ವ ತೊರೆದವರ ಸಂಖ್ಯೆ 6.76 ಲಕ್ಷಐದು ವರ್ಷದಲ್ಲಿ ಭಾರತದ ಪೌರತ್ವ ತೊರೆದವರ ಸಂಖ್ಯೆ 6.76 ಲಕ್ಷ

2016 ರಿಂದ 2020ರವರೆಗೆ ಕಳೆದ ಐದು ವರ್ಷಗಳಲ್ಲಿ 4,171 ವಿದೇಶಿಯರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

4,046 Applications Of Hindus For Citizenship Still Pending

ಈ ಜನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ಪೌರತ್ವ ಕಾಯ್ದೆ 1955ರಲ್ಲಿ ನೀಡಲಾಗಿದೆ. 2019ರ ವಿವಾದಾತ್ಮಕ ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆಯಲ್ಲಿ ಯಾರೊಬ್ಬರಿಗೂ ಭಾರತೀಯ ಪೌರತ್ವವನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೌರತ್ವಕ್ಕಾಗಿ ಹಿಂದೂಗಳು ಸಲ್ಲಿಸಿರುವ ಅರ್ಜಿಗಳ ಪೈಕಿ ರಾಜಸ್ಥಾನ ಸರ್ಕಾರ 1541, ಮಹಾರಾಷ್ಟ್ರ ಸರ್ಕಾರ 849, ಗುಜರಾತ್ ಸರ್ಕಾರ 555, ಮಧ್ಯಪ್ರದೇಶದಲ್ಲಿ 490, ಛತ್ತೀಸ್‌ಗಢ 268 ಮತ್ತು ದೆಹಲಿಯಲ್ಲಿ 123 ಬಾಕಿ ಇದೆ. ಇದರ ಜತೆಗೆ ಹಿಂದೂಗಳ 10 ಸರ್ಜಿಗಳು ಕೇಂದ್ರ ಸರ್ಕಾರದ ಬಳಿ ಬಾಕಿ ಇವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 535, ಗುಜರಾತ್‌ನಲ್ಲಿ 1089, ರಾಜಸ್ಥಾನದಲ್ಲಿ 751, ಮಹಾರಾಷ್ಟ್ರ 446, ಹರ್ಯಾಣದಲ್ಲಿ 303, ದೆಹಲಿಯಲ್ಲಿ 301, ಪಶ್ಚಿಮ ಬಂಗಾಳದಲ್ಲಿ 146, ಉತ್ತರ ಪ್ರದೇಶದಲ್ಲಿ 145, ಉತ್ತರಾಖಂಡದಲ್ಲಿ 75, ತಮಿಳುನಾಡಿನಲ್ಲಿ 73, ಕರ್ನಾಟಕದಲ್ಲಿ 72, ಕೇರಳದಲ್ಲಿ 65 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆ ಕುರಿತು ಮಾಹಿತಿ
- ಪೌರತ್ವ (ತಿದ್ದುಪಡಿ) ಮಸೂದೆ 2019, 1955ರಲ್ಲಿ ಜಾರಿಗೆ ತರಲಾಗಿದ್ದ ನಾಗರಿಕ ಕಾಯ್ದೆಗೆ ತಿದ್ದುಪಡಿಯಾಗಿದೆ. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಯೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಮಸೂದೆಯಾಗಿದೆ.

- ಒಂದು ಬಾರಿ ಈ ತಿದ್ದುಪಡಿ ವಿದೇಯಕ ಜಾರಿಗೆ ಬಂದರೆ ಈ ಮೂರೂ ದೇಶಗಳ ಹಿಂದೂ, ಸಿಖ್, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ವಲಸಿಗರಿಗೆ ಭಾರತದ ಪೌರತ್ವ ಸಿಗುತ್ತದೆ. ಅವರು ಅಕ್ರಮ ವಲಸಿಗರು ಎಂದು ನಂತರ ಪರಿಗಣಿಸಲಾಗುವುದಿಲ್ಲ.

- ಭಾರತದ ಪೌರತ್ವ ಸಹಜವಾಗಿ ಪಡೆಯಲು ಈ ಮೂರೂ ದೇಶಗಳ 6 ಧರ್ಮಗಳ ವಲಸಿಗರು ಅರ್ಹರಾಗಿರುತ್ತಾರೆ.

- ಸಹಜವಾಗಿ ಭಾರತದ ಪೌರತ್ವ ಗಳಿಸಲು ಬೇಕಾದ ಮುಖ್ಯ ಅರ್ಹತೆಯೆಂದರೆ ವಲಸಿಗ ಕಳೆದ 12 ತಿಂಗಳಿನಿಂದ ಭಾರತದಲ್ಲಿ ನೆಲೆಸಿರಬೇಕು. ಮತ್ತು ಈ ಹಿಂದಿನ 14 ವರ್ಷಗಳಲ್ಲಿ ಅವರು ಭಾರತದಲ್ಲಿ 11 ವರ್ಷ ನೆಲೆಸಿರಬೇಕಾಗುತ್ತದೆ.

- ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಈ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ 11 ವರ್ಷಗಳ ಬದಲು 6 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಇಲ್ಲಿನ ಪೌರತ್ವ ಸಿಗುತ್ತದೆ.

- ಆ ದೇಶಗಳಿಂದ ಗಡಿಪಾರಿಗೆ ಒಳಗಾಗಿರಬಾರದು, 1946ರ ವಿದೇಶಿ ಕಾಯ್ದೆ ಮತ್ತು 1920ರ ಪಾಸ್ ಪೋರ್ಟ್ ಕಾಯ್ದೆ (ಭಾರತಕ್ಕೆ ಪ್ರವೇಶ)ಯಡಿ ಜೈಲಿಗೆ ಹೋಗಿ ಬಂದಿರಬಾರದು.

- 2014ರ ಡಿಸೆಂಬರ್ 31ರ ಮೊದಲು ಈ ಮೂರು ದೇಶಗಳಿಂದ ಭಾರತಕ್ಕೆ ಬಂದ 6 ಧರ್ಮಗಳ ಜನರು ಭಾರತದ ಪೌರತ್ವಕ್ಕೆ ಅರ್ಹರಾಗಿರುತ್ತಾರೆ.

- ಆದರೆ ಈ ಮಸೂದೆ ಭಾರತದ ಈಶಾನ್ಯ ರಾಜ್ಯಗಳ ಜನರಿಗೆ ಅನ್ವಯವಾಗುವುದಿಲ್ಲ, ಹೀಗಾಗಿ ಅಲ್ಲಿ ಪ್ರತಿಭಟನೆ ಕೇಳಿಬರುತ್ತಿದೆ.
ಯಾವುದೇ ಕಾನೂನನ್ನು ಉಲ್ಲಂಘಿಸಿದರೆ ಸಾಗರೋತ್ತರ ಭಾರತೀಯ ನಾಗರಿಕರ (ಒಸಿಐ) ಕಾರ್ಡುದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಎಂದು ಮಸೂದೆ ಹೇಳುತ್ತದೆ.

ಐದು ವರ್ಷಗಳಲ್ಲಿ 2016ರಲ್ಲಿ 1105, 2017ರಲ್ಲಿ 814, 2018ರಲ್ಲಿ 628, 2019ರಲ್ಲಿ 986, 2020ರಲ್ಲಿ 638 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

English summary
A total of 4,046 applications for Indian citizenship from Hindus belonging to Afghanistan, Pakistan and Bangladesh are pending with various state governments, Rajya Sabha was informed on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X