ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಕಲ್ಯಾಣದತ್ತ ಮೋದಿ ಸರ್ಕಾರದ ದಿಟ್ಟ ಹೆಜ್ಜೆ

|
Google Oneindia Kannada News

ನವದೆಹಲಿ, ಮೇ 29: ಕೇಂದ್ರದಲ್ಲಿ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುವ ಮೂಲಕ ಬಿಜೆಪಿ ಸರ್ಕಾರ ದಾಖಲೆ ಬರೆದು ನಾಲ್ಕು ವರ್ಷಗಳು ಸಂದಿವೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಇದು ನಾಲ್ಕು ವರ್ಷಗಳ ಆಡಳಿತದ ಸಿಂಹಾವಲೋಕನದ ಕಾಲ.

ನಾಲ್ಕು ವರ್ಷಗಳಲ್ಲಿ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಾಧಿಸಲಾದ ಮಹತ್ವದ ಮೈಲಿಗಲ್ಲುಗಳು ಗಮನೀಯ. ಮನೇಕಾ ಗಾಂಧಿ ಅವರು ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಹಲವು ಯೋಜನೆಗಳಿಗೆ ನಾಂದಿ ಹಾಡಿದರು.

ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ?ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ?

ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆಯಿಂದ ಹಿಡಿದು, ಆರು ತಿಂಗಳುಗಳ ಕಾಲ ತಾಯ್ತನ ರಜೆಯನ್ನು ವಿಸ್ತರಿಸಿದ್ದು ಮಹಿಳಾ ಕಲ್ಯಾಣದಲ್ಲಿ ಮಹತ್ವದ ಹೆಜ್ಜೆ.

4 years of Modi Sarakr: Achievement of ministry of women and child develoment

ಬೇಟಿ ಬಚಾವೋ, ಬೇಟಿ ಪಢಾವೋ
2013 ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೊಳಿಸಿದರು. ಆರಂಭವಾದ 30 ತಿಂಗಳುಗಳಲ್ಲಿ 161 ಜಿಲ್ಲೆಗಳಲ್ಲಿ 104 ಜಿಲ್ಲೆಗಳು ಮಕ್ಕಳ ಲಿಂಗಾನುಪಾತದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂತು. ನಂತರ ಈ ಯೋಜನೆಯನ್ನು ದೇಶದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಯಿತು.

ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನೂ ಜಾರಿಗೆ ತರಲಾಯಿತು. ಹೆಣ್ಣು ಶಿಶು ಹುಟ್ಟುತ್ತಿದ್ದಂತೆಯೇ ಆಕೆಯ ಹೆಸರಿನಲ್ಲಿ ನಿರ್ದಿಷ್ಟ ಠೇವಣಿ ಇಟ್ಟು, ಅದನ್ನು ಆಕೆಗೆ 18 ವರ್ಷವಾಗುತ್ತಿದ್ದಂತೆಯೇ ಹಿಂಪಡೆಯುವ ಯೋಜನೆ ಇದು. ಈ ಎರಡೂ ಯೋಜನೆಗಳೂ ಹೆಣ್ಣು ಭ್ರೂಣ ಹತ್ಯೆ ತಡೆ ಮತ್ತು ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನಾ
ಮೇ 2016 ರಲ್ಲಿ ಪರಿಚಯಿಸಲಾದ ಈ ಯೋಜನೆಯನ್ವಯ ಇದುವರೆಗೂ 2.2 ಕೋಟಿ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ಬಡವರಿಗೆ ನೀಡಲಾಗಿದೆ. ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಅಡುಗೆಗಾಗಿ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

6 ತಿಂಗಳು ತಾಯ್ತನ ರಜೆ
ತಾಯ್ತನದ ರಜೆಯನ್ನು 3 ರಿಂದ 6 ತಿಂಗಳವರೆಗೆ ಹೆಚ್ಚಿಸಿದ್ದು ಮೋದಿ ಸರ್ಕಾರದ ಇನ್ನೊಂದು ಸಾಧನೆ. 2017 ರಂದು ಈ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಯ್ತು. ಇದರಿಂದ ಮಹಿಳೆಯರ ಆರೋಗ್ಯವೂ ಸುಧಾರಿಸುತ್ತದೆ ಎಂಬ ನಂಬಿಕೆ ಸರ್ಕಾರದ್ದು.

ಇನ್ನಿತರ ಯೋಜನೆಗಳು
ಈ ಎಲ್ಲ ಯೋಜನೆಗಳೊಟ್ಟಿಗೆ ಮಹಿಳೆಯರಿಗೆ ಆಪ್ತಸಲಹೆ ನೀಡುವ ಸಖಿ ಯೋಜನೆ, ಮಹಿಳೆಯರ ರಕ್ಷಣೆಗಾಗಿ ಅವರ ಸ್ಮಾರ್ಟ್ ಫೋನ್ ಗಳಲ್ಲಿ ಪ್ಯಾನಿಕ್ ಬಟನ್ ಸೌಲಭ್ಯ, ಮಹಿಳಾ ಸಹಾಯವಾಣಿ(181), ವಿಧವೆಯರಿಗೆ ಆಶ್ರಯ ವ್ಯವಸ್ಥೆ, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ, ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆ ಸೇರಿದಂತೆ ಹತ್ತು ಹಲವು ನಿರ್ಧಾರಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.

English summary
Narendra Modi led NDA government completes 4 years term in central. Here are the achievements of the government in Women and child development department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X