ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿ ಕ್ಯಾಬಿನೆಟ್ 3.0: ಕೋಟ್ಯಧಿಪತಿಗಳೆಷ್ಟು? ಕ್ರಿಮಿನಲ್ ಆರೋಪಿಗಳೆಷ್ಟು?

|
Google Oneindia Kannada News

ನವದೆಹಲಿ, ಫೆಬ್ರವರಿ 17: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಭಾನುವಾರದಂದು ತನ್ನ ಸಚಿವ ಸಂಪುಟ ವಿಸ್ತರಣೆ ಮಾಡಿದೆ. ಕೇಜ್ರಿವಾಲ್ 3.0 ಸರ್ಕಾರದ ಸಂಪುಟ ವಿಸ್ತರಣೆ ನಿರೀಕ್ಷೆಯಂತೆ ಆಗಿದ್ದು, 7 ಮಂದಿ ಸಚಿವರನ್ನೊಳಗೊಂಡಿದೆ. 7 ಮಂದಿ ಸಚಿವರ ಪೈಕಿ ಎಷ್ಟು ಮಂದಿ ಕೋಟ್ಯಧಿಪತಿಗಳು ಎಷ್ಟು ಮಂದಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ ಎಂಬ ವಿವರ ಇಲ್ಲಿದೆ...

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಹಾಗೂ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಪ್ರಕಾರ, ಏಳು ಸಚಿವರ ಪೈಕಿ ಮೂವರು ತಮ್ಮ ವಿರುದ್ಧ ಗುರುತರವಾದ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 7 ಸಚಿವರ ಪೈಕಿ 5(71%) ಮಂದಿ ಕೊಟ್ಯಧಿಪತಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೇಜ್ರಿವಾಲ್ ಪ್ರಮಾಣ ವಚನದಲ್ಲಿ ಮಿಂಚಿದ 'ಮಫ್ಲರ್ ಮ್ಯಾನ್'ಕೇಜ್ರಿವಾಲ್ ಪ್ರಮಾಣ ವಚನದಲ್ಲಿ ಮಿಂಚಿದ 'ಮಫ್ಲರ್ ಮ್ಯಾನ್'

7 ಸಚಿವರ ಸರಾಸರಿ ಆಸ್ತಿಯನ್ನು ತೆಗೆದುಕೊಂಡರೆ 8.96 ಕೋಟಿ ರು ನಷ್ಟಿದೆ. 7 ಮಂದಿ ಪೈಕಿ ಸಚಿವ ಕೈಲಾಶ್ ಗೆಹ್ಲೋಟ್ ಅತ್ಯಂತ ಶ್ರೀಮಂತರಾಗಿದ್ದು, ನಜಫ್ ಗಢದಿಂದ ಜಯಿಸಿರುವ ಕೈಲಾಶ್ ಒಟ್ಟು 46.07 ಕೋಟಿ ರು ಹೊಂದಿದ್ದಾರೆ.

4 with pending criminal cases, 5 crorepati in Delhi Cabinet

ಅತಿ ಕಡಿಮೆ ಆಸ್ತಿ ಹೊಂದಿರುವ ಸಚಿವ ಗೋಪಾಲ್ ರಾಯ್. ಬಾಬರ್ ಪುರ್ ಕ್ಷೇತ್ರದ ಶಾಸಕ ಕಮ್ ಸಚಿವ ಗೋಪಾಲ್ ಅಸ್ತಿ ಮೌಲ್ಯ 90.01 ಲಕ್ಷ ರು. ಅತಿ ಹೆಚ್ಚು ಆಸ್ತಿ ಹೊಂದಿರುವ ಸಚಿವ ಕೈಲಾಶ್ ಅವರು ಅತಿ ಹೆಚ್ಚು ಸಾಲವನ್ನು ಕೂಡಾ ಹೊಂದಿದ್ದಾರೆ. 6.63 ಕೋಟಿ ರು ಸಾಲವನ್ನು ಕೈಲಾಶ್ ಹೊತ್ತುಕೊಂಡಿದ್ದಾರೆ.

ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ?ಕೇಜ್ರಿವಾಲ್ ಕ್ಯಾಬಿನೆಟ್ಟಿಗೆ ಎಎಪಿ ಪ್ರಮುಖರಾದ ಆತಿಶಿ, ಛಡ್ಡಾ ಇಲ್ಲ?

ವಯಸ್ಸಿನ ಸರಾಸರಿ ತೆಗೆದುಕೊಂಡರೆ 31 ರಿಂದ 50ರೊಳಗೆ 4(57%) ಮಂದಿ ಇದ್ದು, 51 ರಿಂದ 60 ವಯಸ್ಸಿನ ಮಿತಿಯಲ್ಲಿ 3 (43%) ಸಚಿವರಿದ್ದಾರೆ. ಕೇಜ್ರಿ 3.0 ಸರ್ಕಾರದಲ್ಲಿ ಯಾವುದೇ ಸಚಿವೆಯರಿಲ್ಲ.

READ IN ENGLISH

English summary
Four out of the seven ministers sworn in to the Delhi Cabinet on Sunday have pending criminal cases against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X