ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ರಾರಾಜಿಸುತ್ತಿರುವ ಕನ್ನಡ ಶಿಕ್ಷಕರಿವರು!

|
Google Oneindia Kannada News

Recommended Video

Teacher's Day 2018 : ಕರ್ನಾಟಕದ ಈ 4 ಶಿಕ್ಷಕರಿಗೆ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಅಭಿನಂದನೆ

ಕಲ್ಲನ್ನು ಶಿಲ್ಪವಾಗಿ ಮಾರ್ಪಡಿಸುವವನು ಗುರು. ಆಚಾರ್ಯ ದೇವೋಭವ ಎಂದ ಸಂಸ್ಕೃತಿ ನಮ್ಮದು. ಅದಕ್ಕೆಂದೇ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.

ಮಹಾನ್ ಶಿಕ್ಷಕರಾಗಿದ್ದ, ಮಾಜಿ ರಾಷ್ಟ್ರಪತಿ ದಿ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನವಾದ ಇಂದು ಹಲವು ಆದರ್ಶ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತಿದೆ. ಅಂತವರಲ್ಲಿ ನಾಲ್ವರು ನಮ್ಮ ಕನ್ನಡದ ಶಿಕ್ಷಕರೂ ಇದ್ದಾರೆ ಎಂಬುದು ಹೆಮ್ಮೆಯ ವಿಷಯ.

ಶಿಕ್ಷಕರ ದಿನಾಚರಣೆ:ಗುರುದೇವೋಭವ ಎಂದ ಗಣ್ಯರು ಯಾರ್ಯಾರು?ಶಿಕ್ಷಕರ ದಿನಾಚರಣೆ:ಗುರುದೇವೋಭವ ಎಂದ ಗಣ್ಯರು ಯಾರ್ಯಾರು?

ಈ ನಾಲ್ವರು ಶಿಕ್ಷಕರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡಿ ಹೊಗಳಿದ್ದಾರೆ. ಶಿವ ಕುಮಾರ್, ಡಾ.ರಮೇಶಪ್ಪ, ಮಂಜು ಬಾಲಸುಬ್ರಹ್ಮಣ್ಯಂ ಮತ್ತು ಶೈಲಾ ಆರ್ ಎನ್ ಈ ನಾಲ್ವರು ಶಿಕ್ಷಕರು ಅತ್ಯುತ್ತಮ ಶಿಕ್ಷಕರು ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಿಕ್ಕಬಳ್ಳಾಪುರದ ಶಿವಕುಮಾರ್

"ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗಣಿತದ ಕ್ಲಿಷ್ಟ ಸಮಸ್ಯೆಯನ್ನೂ ಸುಲಭವಾಗಿ ಕಲಿಸುತ್ತಿರುವ ಶಿವಕುಮಾರ್ ಅವರಿಗೆ ನನ್ನ ನಮನಗಳು. ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವ ಎಷ್ಟೋ ವಿಡಿಯೋಗಳು ಇಂಟರ್ನೆಂಟ್ ನಲ್ಲೂ ಲಭ್ಯವಿವೆ. ಕರ್ನಾಟಕದ ಚಿಕ್ಕಬ್ಳಾಳಾಪುರದ ಶಿವಕುಮಾರ್ ಅವರಿಗೆ ಅಭಿನಂದನೆಗಳು" ಎಂದು ಹಾಡಿ ಹೊಗಳಿದ್ದಾರೆ ನರೇಂದ್ರ ಮೋದಿ.

ಕನ್ನಡತಿ ಮಂಜು ಬಾಲಸುಬ್ರಹ್ಮಣ್ಯಂ

"ಬೆಂಗಳೂರಿನ ದೆಹಲಿ ಪಬ್ಲಿಕ್ ಶಾಲೆಯ ಮಂಜು ಬಾಲಸುಬ್ರಹ್ಮಣ್ಯಂ ಅವರು ಶಾಲೆಯಲ್ಲಿ ವಿವಿಧತೆಯನ್ನು ಮೂಡಿಸಲು ಶ್ರಮಿಸಿದವರು. ಅಂತೆಯೇ ದಿವ್ಯಾಂಗ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿಯೂ ಶ್ರಮಿಸುತ್ತಿದ್ದಾರೆ. ಇಂದು ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆಯುತ್ತಿರುವ ಅವರಿಗೆ ಅಭಿನಂದನೆಗಳು" ಎಂದು ಮೋದಿ ಶ್ಲಾಘಿಸಿದ್ದಾರೆ.

ಬೆಂಗಳೂರಿನ ಶೈಲಾ ಆರ್ ಎನ್.

"ಬೆಂಗಳಲೂರು ಉತ್ತರದಲ್ಲಿ ನಾವು ಕೆಲಸ ಮಾಡುತ್ತಿದ್ದ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದವರು ಶೈಲಾ ಆರ್ ಎನ್. ಅವರ ನಿಸ್ವಾರ್ಥ ಸೇವೆಯಿಂದಾಗಿ ಸಾಕಷ್ಟು ಬಡ ಮಕ್ಕಳ ಬದುಕು ಧನಾತ್ಮಕವಾಗಿ ಬದಲಾಗಿದೆ. ಇಂಥ ಶಿಕ್ಷಕರ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.ಶೈಲಾ ಅವರು ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಬೆಂಗಳೂರು ಉತ್ತರ ವಿಭಾಗದ ಉಪನಿರ್ದೇಶಕರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾಮೋದಿ ಬಾಯ್ತುಂಬ ಹೊಗಳಿದ ಬೆಂಗಳೂರಿನ ಆದರ್ಶ ಶಿಕ್ಷಕಿ ಶೈಲಾ

ದೈಹಿಕ ಶಿಕ್ಷಕ ಡಾ.ರಮೇಶಪ್ಪ

"ವಿದ್ಯಾರ್ಥಿಗಳು ಆರೋಗ್ಯವಂತರಾದರೆ, ದೃಢ ಆರೋಗ್ಯ ಪಡೆದರೆ ದೇಶವೂ ಸದೃಢವಾಗುತ್ತದೆ. ಬೆಂಗಳೂರು ಗ್ರಾಮಾಂತರ ಶಾಲೆಯೊಂದರ ದೈಹಿಕ ಶಿಕ್ಷಕ ಡಾ.ರಮೇಶಪ್ಪ ಅವರು ಶಾಲೆಯಲ್ಲಿ ಯೋಗ ಮತ್ತು ಕ್ರೀಡೆಯನ್ನು ಮಕ್ಕಳಿಗೆ ಸಮರ್ಥವಾಗಿ ಕಲಿಸುತ್ತಿದ್ದಾರೆ. ದಿವ್ಯಾಂಗ ಮಕ್ಕಳ ಕಲ್ಯಾಣಕ್ಕಾಗಿ ಅವರ ಕೊಡುಗೆ ಅನನ್ಯ. ಅವರಿಗೆ ಅಭಿನಂದನೆ ಮತ್ತು ಶುಭಹಾರೈಕೆ" ಎಂದು ಹಾರೈಸಿದ್ದಾರೆ ಮೋದಿ.

English summary
Prime minister Narendra Modi on techers day(Ssep 5) with the teachers who have been conferred the National Award for Teachers. 4 Teachers from Karnataka, ShivaKumar, Dr. Rameshappa, Manju Balasubramanyam and Shaila R. N are also among them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X