ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಶಹದಾರಾದಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟ: ನಾಲ್ವರು ಮೃತ್ಯು

|
Google Oneindia Kannada News

ನವದೆಹಲಿ, ಜೂ.30: ''ದೆಹಲಿಯ ಶಹದಾರಾದ ನಿವಾಸವೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹಬ್ಬಿದ್ದು, 45 ವರ್ಷದ ಮಹಿಳೆ, ಆಕೆಯ ಇಬ್ಬರು ಗಂಡು ಮತ್ತು ಓರ್ವ ಮಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ,'' ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಡಿಎಫ್‌ಎಸ್ ಪ್ರಕಾರ, ಶಹದಾರಾದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಮಂಗಳವಾರ ಮಧ್ಯರಾತ್ರಿ ಸಿಲಿಂಡರ್ ಸ್ಫೋಟದ ಬಗ್ಗೆ ಕರೆ ಬಂದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದರು. ಸ್ಫೋಟದಿಂದಾಗಿ ಛಾವಣಿಯ ಒಂದು ಭಾಗ ಕುಸಿದಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಪಟಾಕಿ ಸ್ಫೋಟ: 3 ಮಂದಿ ಸಾವುತಮಿಳುನಾಡಿನಲ್ಲಿ ಪಟಾಕಿ ಸ್ಫೋಟ: 3 ಮಂದಿ ಸಾವು

ಮನೆಯ ಮುಂಭಾಗದಲ್ಲಿ ಗ್ಯಾಸ್ ಸ್ಟೌವ್ ರಿಪೇರಿ ಅಂಗಡಿ ಇದೆ ಎಂದು ಕೂಡಾ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ.

4 Killed In Gas Cylinder Blast In Delhis Shahdara

"ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ ಸೋರಿಕೆಯಾದ ಕಾರಣ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಉಸಿರಾಡಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿಯ ದೇಹದಲ್ಲಿ ಸುಟ್ಟ ಗಾಯಗಳು ಉಂಟಾಗಿದೆ. ಕ್ಯಾಟ್ಸ್ ಮೂಲಕ ಹೆಡ್ಜ್ವಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು," ಎಂದು ಡಿಎಫ್‌ಎಸ್ ನಿರ್ದೇಶಕ ಅತುಲ್ ಗರ್ಗ್ ಹೇಳಿದ್ದಾರೆ.

"ಮುನ್ನೀ ದೇವಿ, ಎಂಬಾಕೆಯ ಇಬ್ಬರು ಗಂಡು ಮಕ್ಕಳಾದ ಓಂ ಪ್ರಕಾಶ್ (22) ಮತ್ತು ನರೇಶ್ (23), ಮತ್ತು ಮಗಳು ಸುನೀತಾ (18) ಉಸಿರುಗಟ್ಟಿ ಸಾವನ್ನಪ್ಪಿದ್ದರೆ, ಮತ್ತೊಬ್ಬ ಮಗ ಲಾಲ್ ಚಂದ್ (29) ಮೈಯಲ್ಲಿ ಶೇ 30 ರಷ್ಟು ಸುಟ್ಟಗಾಯಗಳಾಗಿವೆ," ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಸ್ಫೋಟ; 6 ಮಂದಿಗೆ ಗಾಯಬೆಂಗಳೂರು ವಿಮಾನ ನಿಲ್ದಾಣ ಸಮೀಪ ಸ್ಫೋಟ; 6 ಮಂದಿಗೆ ಗಾಯ

"ಎಲ್ಲಾ ಐದು ಸದಸ್ಯರನ್ನು ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಒಡೆಯುವ ಮೂಲಕ ಪೊಲೀಸರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ನಂತರ ಐವರನ್ನೂ ಕ್ಯಾಟ್ಸ್ ಆಂಬ್ಯುಲೆನ್ಸ್ ಮೂಲಕ ಡಾ. ಹೆಡ್ಜ್ವಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಪೈಕಿ ನಾಲ್ವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ," ಉಪ ಪೊಲೀಸ್ ಆಯುಕ್ತ ಆರ್ ಸತ್ಯಸುಂದರಾಮ್ ಮಾಹಿತಿ ನೀಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
A 45-year-old woman, two of her sons and a daughter died of suffocation on Wednesday when a fire broke out at their Shahdara residence following an LPG cylinder explosion, Delhi Fire Service (DFS) officials said here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X