ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 817 ಬಿಎಸ್ಎಫ್ ಯೋಧರಿಗೆ ಕೊರೊನಾವೈರಸ್!

|
Google Oneindia Kannada News

ನವದೆಹಲಿ, ಜುಲೈ.05: ಕೊರೊನಾವೈರಸ್ ಸೋಂಕು ಯಾರ ಹೆಗಲನ್ನೂ ಬಿಡುತ್ತಿಲ್ಲ. ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಅಂಗನವಾಡಿ ಕಾರ್ಯಕರ್ತರು ಆಯಿತು. ಗಡಿ ಕಾಯುವ ಭದ್ರತಾ ಸಿಬ್ಬಂದಿಗೂ ಮಹಾಮಾರಿಯ ಭೀತಿ ಎದುರಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 36 ಮಂದಿ ಗಡಿ ಭದ್ರತಾ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಇನ್ನು, ಬಿಎಸ್ಎಫ್ ನ 33 ಮಂದಿ ಸೋಂಕಿತ ಸಿಬ್ಬಂದಿಯು ಗುಣಮುಖರಾಗಿದ್ದಾರೆ.

ಕೇಂದ್ರ ಸಶಸ್ತ್ರ ಪಡೆಯಲ್ಲಿ ಹೆಚ್ಚಿದ ಕೊರೊನಾ: ಅಮಿತ್ ಶಾ ಕಳವಳಕೇಂದ್ರ ಸಶಸ್ತ್ರ ಪಡೆಯಲ್ಲಿ ಹೆಚ್ಚಿದ ಕೊರೊನಾ: ಅಮಿತ್ ಶಾ ಕಳವಳ

ದೇಶದಲ್ಲಿ ಒಟ್ಟು 817 ಮಂದಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ಈ ಪೈಕಿ 291 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದಿರುವ 526 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಮಾಹಿತಿ ನೀಡಿದೆ.

36 Border Security Force Personnel Tested positive for Coronavirus In Past 24 Hours

ಭಾರತದಲ್ಲಿ 24 ಸಾವಿರ ಮಂದಿಗೆ ಕೊರೊನಾವೈರಸ್:

ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 24 ಗಂಟೆಗಳಲ್ಲೇ ದಾಖಲೆ ಮಟ್ಟದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 24,850 ಮಂದಿಗೆ ಸೋಂಕು ತಗಲಿದೆ. ಒಂದೇ ದಿನ 613 ಜನರು ಮಹಾಮಾರಿಯಿಂದ ಮೃತಪಟ್ಟಿದ್ದಾರೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,73,105ಕ್ಕೆ ಏರಿಕೆಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 19,268ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ 4,09,083 ಜನರು ಗುಣಮುಖರಾಗಿದ್ದಾರೆ.

English summary
36 Border Security Force Personnel Tested positive for Coronavirus In Past 24 Hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X